ಕುಂದಾಪು : ಹೊಸಂಗಡಿ ಸಮೀಪದ ಮೆಟ್ಕಲ್ ಬೆಟ್ಟದ ಪ್ರದೇಶದಲ್ಲಿ ಫೆಬ್ರವರಿ 28ರಂದು ನಡೆದ ಚಾರಣದ ವೇಳೆ ನದಿಯಲ್ಲಿ ಮುಳುಗಿ ಮಹಿಳೆಯೊಬ್ಬರು ದುರದೃಷ್ಟವಶಾತ್ ಸಾವನ್ನಪ್ಪಿದ್ದಾರೆ. ಮೃತರನ್ನು ಕುಂದಾಪುರದ ಮೆಡಿಕಲ್ ಶಾಪ್ನ ಮಾಲಕಿ ಶುಭಶ್ರೀ ಕಾರಂತ್ (53) ಎಂದು ಗುರುತಿಸಲಾಗಿದೆ. ಕುಂದಾಪುರದಿಂದ ಸುಮಾರು 8 ರಿಂದ 10 ಜನರ ಗುಂಪಿನೊಂದಿಗೆ ಚಾರಣಕ್ಕೆ ತೆರಳಿದ್ದ ಇವರು, ವಿಹಾರದ ಸಮಯದಲ್ಲಿ ನದಿಗೆ ಇಳಿದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅಮಾಸೆಬೈಲ್ ಠಾಣೆಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ. ಶುಭಶ್ರೀ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಅಪಘಾತದ ನಿಖರವಾದ ಕಾರಣದ ಕುರಿತು ಪೊಲೀಸ್ ತನಿಖೆ ಮುಂದುವರಿದಿದೆ. ಈ ಆಕಸ್ಮಿಕ ಘಟನೆಯಿಂದ ಕುಂದಾಪುರದ ಉದ್ದಿಮೆ ವಲಯ ಹಾಗೂ ಚಾರಣ ಆಸಕ್ತರಲ್ಲಿ ತೀವ್ರ ಶೋಕ ಆವರಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









