ನಿವೇಶನ ಕೊಡುವುದಿರಲಿ, ಬಿಡಿಎಗೆ ನಿರ್ದೇಶನ ನೀಡಲು ಕೂಡ ಸರಕಾರಕ್ಕೆ ಅಧಿಕಾರವಿಲ್ಲ

9:25 PM, Tuesday, April 5th, 2011
Share
1 Star2 Stars3 Stars4 Stars5 Stars
(No Ratings Yet)
Loading...

ಮುಖ್ಯಮಂತ್ರಿ ಯಡಿಯೂರಪ್ಪಬೆಂಗಳೂರು  : ದೇಶಾಭಿಮಾನದಿಂದ ಭಾರತ ವಿಶ್ವಕಪ್ ಗೆದ್ದಾಗ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪನವರ ಉತ್ಸಾಹ ಮಿತಿಮೀರಿತ್ತು, ಅದೇ ಉತ್ಸಾಹದಲ್ಲಿ ಕ್ರಿಕೆಟ್ ಆಟಗಾರರರಿಗೆ 50×80 ಬಿಡಿಎ ನಿವೇಶನ ನೀಡುವುದಾಗಿ ಘೋಷಿಸಿಯೂಬಿಟ್ಟರು.
ಇಂಥ ವಾಗ್ದಾನವನ್ನು ನೀಡಲು  ಮುಖ್ಯಮಂತ್ರಿಗಳಿಗೆ ಅಧಿಕಾರವೇ ಇಲ್ಲ. ಸರಕಾರ ನಿವೇಶನ ಕೊಡುವುದಿರಲಿ, ಬಿಡಿಎಗೆ ನಿರ್ದೇಶನ ನೀಡಲು ಕೂಡ ಸರಕಾರಕ್ಕೆ ಅಧಿಕಾರವಿಲ್ಲ. ಏಕೆಂದರೆ, ಬಿಡಿಎ ಒಂದು ಸ್ವಾಯತ್ತ ಸಂಸ್ಥೆಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರಿಗೆ ನೀಡಲಾಗಿದ್ದ ಬಿಡಿಎ ನಿವೇಶನಕ್ಕೆ ಸಂಬಂಧಿಸಿದಂತೆ ಹೈಕೋರ್ಟಿನಲ್ಲಿ ಹೂಡಲಾಗಿದ್ದ ಸಾರ್ವಜನಿಕ ಹಿತಾಸಕ್ತ ಅರ್ಜಿಯೊಂದರಲ್ಲಿ ಮೇಲಿನಂತೆ ಹೈಕೋರ್ಟ್ ತೀರ್ಪು ನೀಡಿತ್ತು. ಬಿಡಿಎ ಸೈಟುಗಳನ್ನು ದಾನವಾಗಿ ನೀಡಲು ಮುಖ್ಯಮಂತ್ರಿಗೆ ಅಧಿಕಾರವೇ ಇಲ್ಲ ಕರ್ನಾಟಕ ಉಚ್ಚ ನ್ಯಾಯಾಲಯ ಆ ತೀರ್ಪಿನಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಖ್ಯಾತ ಅಭಿನೇತ್ರಿ ಮಾಧುರಿ ದೀಕ್ಷಿತ್ ಅವರಿಗೆ ಜಿ ಕೆಟಗರಿಯಲ್ಲಿ ಹರ್ಯಾಣಾ ಸರಕಾರ ನೀಡಿದ್ದ ನಿವೇಶನ ನಿಯಮಬಾಹಿರ ಎಂದು ಹರ್ಯಾಣಾ ಹೈಕೋರ್ಟ್ ತೀರ್ಪು ನೀಡಿತ್ತು. ಅದನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿತ್ತು.
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದ ಕುಂದಾಪುರದ ಚಿಗರೆ ಅಶ್ವಿನಿ ಅಕ್ಕುಂಜೆ ಮತ್ತು ಗ್ರಾಮೀಣ ಪ್ರತಿಭೆ ಮಮತಾ ಪೂಜಾರಿ ಅವರಿಗೆ ಇಂಥ ಯಾವುದೇ ಬಹುಮಾನ ನೀಡಲು ಯಡಿಯೂರಪ್ಪ ದೊಡ್ಡ ಮನಸ್ಸು ಮಾಡಿರಲಿಲ್ಲ. ಪತ್ರಿಕೆಗಳು ತರಾಟೆಗೆ ತೆಗೆದುಕೊಳ್ಳಲು ಪ್ರಾರಂಭಿಸಿದ ಮೇಲೆ ಅವರಿಗೆ ನಿವೇಶನ ನೀಡುವುದಾಗಿ ಅವರು ಹೇಳಿದ್ದರು. ಅವರಿಗೆ ನಿವೇಶನ ಇನ್ನೂ ಸಿಕ್ಕಿಲ್ಲ ಎನ್ನುವುದು ಭರವಸೆಗಳು ಬರೀ ಭರವಸೆಗಳೇ ಎನ್ನುವುದಕ್ಕೆ ಕನ್ನಡಿ ಹಿಡಿದಿವೆ.
ತಂಡದಲ್ಲಿ ಯಾವುದೇ ಕರ್ನಾಟಕದ ಆಟಗಾರರು ಇರಲಿಲ್ಲದಿದ್ದರೂ ಯಡಿಯೂರಪ್ಪ ಯಾವ ಆಧಾರದ ಮೇಲೆ ಈ ಘೋಷಣೆ ಮಾಡಿದರು ಎಂಬುದು ಇನ್ನೂ ನಿಗೂಢ. ಈ ಕುರಿತು ಮುಖ್ಯಮಂತ್ರಿಗಳು ಬಿ.ಡಿ.ಎ ನಿಯಮಗಳನ್ನು ತಿದ್ದುಪಡಿ ಮಾಡುವುದಾಗಿಯೂ ತಿಳಿಸಿದ್ದಾರೆ. ಮುಖ್ಯ ಮಂತ್ರಿಗಳ ಈ ಅಭಿಮಾನದಿಂದಾಗಲೀ ರಾಜ್ಯದಿಂದ ಇನ್ನಷ್ಟು ಕ್ರೀಡಾಳುಗಳು ಬೆಳೆಯಲಿ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English