ಬಿಜೆಪಿಗೆ ಭ್ರಷ್ಟಾಚಾರವೇ ಶಕ್ತಿ: ರಾಹುಲ್‌ ಗಾಂಧಿ

Wednesday, March 21st, 2018
rahul-mangaluru

ಮಂಗಳೂರು: ಬಿಜೆಪಿಗೆ ಅಧಿಕಾರ ಗಳಿಸುವುದೊಂದೇ ಗುರಿಯಾಗಿದ್ದು, ಅದಕ್ಕಾಗಿ ಎಲ್ಲ ಕುತಂತ್ರಗಳನ್ನೂ ಅವರು ಅನುಸರಿಸುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಆರೋಪಿಸಿದ್ದಾರೆ. ಕಾಂಗ್ರೆಸ್‌ಗೆ ಮಾತ್ರ ಸತ್ಯ, ನ್ಯಾಯಗಳೇ ಮುಖ್ಯ, ದೇಶದ ರಕ್ಷಣೆ ಕಾಂಗ್ರೆಸ್‌ನ ಪ್ರಥಮ ಆದ್ಯತೆ ಎಂದು ನೆಹರೂ ಮೈದಾನದಲ್ಲಿ ಇಂದು ಜರಗಿದ ಸಾರ್ವಜನಿಕ ಸಭೆಯಲ್ಲಿ ಅವರು ಹೇಳಿದರು. ಮೋದಿ ಸರಕಾರ ಕಳೆದ 4 ವರ್ಷಗಳ ಅವಧಿಯಲ್ಲಿ ದೇಶವನ್ನು ಸಂಪೂರ್ಣ ಅಧಃಪತನಗೊಳಿಸಿದೆ. ಹಣ ಬಲ, ತೋಳ್ಬಲ, ಒಳಸಂಚುಗಳನ್ನೇ ಅಸ್ತ್ರಗಳಾಗಿ ಬಳಸಿ ಅನ್ಯಾಯದಿಂದ ಅಧಿಕಾರಕ್ಕೆ ಏರುತ್ತಿದೆ. ಆದರೆ […]

ಜಲೀಲ್ ಕರೋಪಾಡಿ ಕುಟುಂಬಕ್ಕೆ ಸಚಿವ ರೈಯಿಂದ 10 ಲಕ್ಷ ರೂ. ಪರಿಹಾರ

Monday, January 15th, 2018
ramanath-rai

ಬಂಟ್ವಾಳ: 2017ರ ಮೇ ತಿಂಗಳಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಕುಟುಂಬಕ್ಕೆ ಉಸ್ತುವಾರಿ ಸಚಿವ ಬಿ. ರಮಾನಾಥ ರೈ 10 ಲಕ್ಷ ರೂ.ಗಳ ಪರಿಹಾರ ನೀಡಿದ್ದಾರೆ. ಜಲೀಲ್ ಕರೋಪಾಡಿ ನಿವಾಸಕ್ಕೆ ಭೇಟಿ ನೀಡಿದ ಸಚಿವರು ಖುದ್ದಾಗಿ 10 ಲಕ್ಷ ರೂ.ಗಳ ಚೆಕ್‌‌ನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಜಲೀಲ್ ತಂದೆ ಉಸ್ಮಾನ್ ಕರೋಪಾಡಿ ಅವರು ಸಚಿವರಿಂದ ಪರಿಹಾರದ ಚೆಕ್‌‌ನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮಹಮ್ಮದ್ ಹಾಗೂ ಇತರ ಸ್ಥಳೀಯ […]