ಗಡಿಯಲ್ಲಿ ಕನ್ನಡಕ್ಕೆ ಆತಂಕವಿದೆ ವಿವಿಯಲ್ಲಿ ಕನ್ನಡ ಡಿಂಡಿಮ ಉದ್ಘಾಟಿಸಿ ಡಾ. ಸಿ ಸೋಮಶೇಖರ್

Wednesday, November 10th, 2021
Kannada Dindima

ಮಂಗಳೂರು  : ಸಮೃದ್ಧ ಇತಿಹಾಸವಿರುವ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಗಡಿಪ್ರದೇಶಗಳಲ್ಲಿ ಆತಂಕ ತಲೆದೋರಿದೆ. ಕರ್ನಾಟಕ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಗಡಿ ಭಾಗದ ಕನ್ನಡಕ್ಕೆ ರಕ್ಷಣೆ ಮತ್ತು ಪೋಷಣೆ ನೀಡಲಿದೆ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಸಿ ಸೋಮಶೇಖರ್ ಹೇಳಿದರು. ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ನಡೆದ ಕನ್ನಡ ಡಿಂಡಿಮ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡದ ಕವಿಗಳು ನಾಡು ನುಡಿಯ […]

ಕನ್ನಡಾಭಿಮಾನವನ್ನು ಬೆಳೆಸಿಕೊಳ್ಳೋಣ – ಡಾ. ಸಿ. ಸೋಮಶೇಖರ್

Wednesday, November 10th, 2021
Kannada Rajyotsava Kalkura

ಮಂಗಳೂರು : ಕನ್ನಡಿಗರಾದ ನಾವೆಲ್ಲರೂ ಮಾತೃಭಾಷೆ ಕನ್ನಡವನ್ನು ಬೆಳೆಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ನಡೆಸುವ ಅನಿವಾರ್ಯತೆ ಬಂದೊದಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗನು ಕನ್ನಡ ಭಾಷೆಯನ್ನು ಪ್ರೀತಿಸಿ ಭಾಷಾ ಬೆಳವಣಿಗೆಯಲ್ಲಿ ಸಹಕರಿಸಬೇಕೆಂದು  ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೃತ್ತ ಐ.ಎ.ಎಸ್. ಅಧಿಕಾರಿ ಡಾ. ಸಿ ಸೋಮಶೇಖರ್ ನುಡಿದರು. ಕಲ್ಕೂರ ಪ್ರತಿಷ್ಠಾನದಿಂದ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ರಾಜ್ಯೋತ್ಸವ ಸಂದೇಶ ನೀಡಿದರು. ಗಡಿನಾಡಿನ ಕಾಸರಗೋಡಿನಲ್ಲಿರುವ ಕನ್ನಡಿಗರು ಕೂಡ ಈ ನೆಲೆಯಲ್ಲಿ ತಮ್ಮ ಕೊಡುಗೆಯನ್ನು ನೀಡಬೇಕಾಗಿದೆ ಎಂದರು. ಮಂಗಳೂರು […]

ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ ಪದ್ಮಶ್ರೀ ಪ್ರಶಸ್ತಿ – ಅರ್ಜಿ ಆಹ್ವಾನ

Tuesday, June 23rd, 2020
Padmasree

ಮಂಗಳೂರು : ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ, 2021ನೇ ಸಾಲಿನ ಪದ್ಮಶ್ರೇಣಿಯ ಪ್ರಶಸ್ತಿಗಳಾದ ‘ಪದ್ಮ ವಿಭೂಷಣ’, ‘ಪದ್ಮ ಭೂಷಣ’ ಮತ್ತು ‘ಪದ್ಮಶ್ರೀ’ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ ದಿನದ ಹಿಂದಿನ ದಿನಾಂಕದಂದು ಕೇಂದ್ರ ಸರಕಾರದಿಂದ ಪ್ರಕಟಿಸಲಾಗುತ್ತದೆ. ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ವ್ಯಕ್ತಿಯು ಅತ್ಯುತ್ತಮ ಗುಣಮಟ್ಟ ಹೊಂದಿರಬೇಕು. ಅಲ್ಲದೆ ಆ ವ್ಯಕ್ತಿಯು ಜೀವನ ಪರ್ಯಂತ ಸಾಧಿಸಿರುವ ಪ್ರಗತಿಯನ್ನು ಹಾಗೂ ಅವರು ಸಮಾಜಕ್ಕೆ ಸಲ್ಲಿಸಿರುವ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅರ್ಹ ಅರ್ಜಿದಾರರು ನಿಗದಿತ ನಮೂನೆಯನ್ನು ಕಚೇರಿಯಿಂದ ಪಡೆದು ವೈಯಕ್ತಿಕ […]

ಕನ್ನಡ ನುಡಿ ಜಾತ್ರೆಗೆ ಸಾಕ್ಷಿಯಾದ ಗ್ರಾಮೀಣರು : ಕನ್ನಡ ಭಾಷೆ ಉಳಿಸಿ ಬೆಳೆಸಲು ಸಮ್ಮೇಳನಾಧ್ಯಕ್ಷ ನಾಗೇಶ್ ಕಾಲೂರು ಕರೆ

Saturday, February 1st, 2020
kannada

ಮಡಿಕೇರಿ : ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸೋಮವಾರಪೇಟೆ ತಾಲ್ಲೂಕು ನಿಡ್ತ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶುಕ್ರವಾರ ಕೊಡಗು ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೂರು ನಾಗೇಶ್ ಅವರು ಭಾಷಾ ಕಲಿಕೆ ಒಂದು ಕೌಶಲ್ಯ, ಎಳವೆಯಲ್ಲಿ ಮಕ್ಕಳು ಹಲವಾರು ಭಾಷೆಗಳನ್ನು ಒಟ್ಟಿಗೆ ಕಲಿಯುವ ಕೌಶಲ್ಯ ಹೊಂದಿರುತ್ತಾರೆ. ಭಾಷೆ ಬಾಂಧವ್ಯ ಹೆಚ್ಚಿಸುತ್ತದೆ. ಎಷ್ಟು ಹೆಚ್ಚು ಭಾಷೆಗಳನ್ನು ಕಲಿಯುತ್ತೇವೋ ಅಷ್ಟು ಬಾಂಧವ್ಯಗಳು ನಮ್ಮದಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. […]

ಧರ್ಮಸ್ಥಳ ಲಕ್ಷ ದೀಪೋತ್ಸವ : ಕನ್ನಡ ಭಾಷೆ ಉಳಿಸಿ, ಬೆಳೆಸಲು ತಂತ್ರಜ್ಞಾನದ ಬಳಕೆ; ಡಾ.ಅಶ್ವತ್ಥನಾರಾಯಣ

Wednesday, November 27th, 2019
Ashwath-Narayan

  ಉಜಿರೆ : ಇಂಗ್ಲಿಷ್ ವ್ಯಾಮೋಹದಿಂದಕ ನ್ನಡವನ್ನುಕಡೆಗಣಿಸಬಾರದು. ನಮ್ಮಕನ್ನಡ ನಾಡು, ನುಡಿ, ಸಂಸ್ಕೃತಿಯಲ್ಲಿ ನಮ್ಮತನವನ್ನು ಉಳಿಸಿಕೊಳ್ಳಬೇಕು.ಆಧುನಿಕ ತಂತ್ರಜ್ಞಾನವನ್ನು ಬಳಸಿ ಮೂರು ವರ್ಷಗಳೊಳಗೆ ಕನ್ನಡವನ್ನುಆದರ್ಶ ಹಾಗೂ ಉತೃಷ್ಟ ಭಾಷೆಯಾಗಿ ಅಭಿವೃದ್ಧಿ ಪಡೆಸಲಾಗುವುದು ಎಂದು ರಾಜ್ಯದ ಉಪಮುಖ್ಯಮಂತ್ರಿಡಾ.ಅಶ್ವತ್ಥನಾರಾಯಣ ಹೇಳಿದರು. ಅವರು ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿಅಮೃತವರ್ಷಿಣಿ ಸಭಾ ಭವನದಲ್ಲಿ ಆಯೋಜಿಸಿದ ಸಾಹಿತ್ಯ ಸಮ್ಮೇಳನದ 87ನೆ ಅಧಿವೇಶನವನ್ನುಅವರು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಭಾಷೆಯನ್ನು ಬಳಸಿದಷ್ಟು ಅದು ಹೆಚ್ಚು ಬೆಳೆಯುತ್ತದೆ.ಕನ್ನಡ ಭಾಷೆಯನ್ನು ಹೆಚ್ಚು ಬಳಸಬೇಕು ಹಾಗೂ ಬೆಳೆಸಬೇಕು ಎಂದುಅವರು ಸಲಹೆ ನೀಡಿದರು. ಮುಂದಿನ ವರ್ಷಅಂದರೆ […]

ಮಂಗಳೂರು-ಮಣಿಪಾಲ ಖಾಸಗಿ ಬಸ್‌ಗಳಲ್ಲಿ ಕನ್ನಡ ಭಾಷೆಯ ಕಡೆಗಣನೆ

Monday, March 12th, 2018
express-bus

ಮಂಗಳೂರು: ರಾಜ್ಯದಲ್ಲಿ ಸಂಚರಿಸುವ ಎಲ್ಲ ಖಾಸಗಿ ಹಾಗೂ ಸರಕಾರಿ ಬಸ್‌ಗಳಲ್ಲಿ ಸಾಮಾನ್ಯವಾಗಿ ಕನ್ನಡದ ನಾಮಫಲಕಗಳು ಇರುತ್ತವೆ. ಆದರೆ, ಮಂಗಳೂರು-ಉಡುಪಿ-ಮಣಿಪಾಲ ನಡುವೆ ಸಂಚರಿಸುವ ಕೆಲವೊಂದು ಖಾಸಗಿ ಬಸ್‌ಗಳಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ಇಂಗ್ಲಿಷ್‌ ನಾಮಫಲಕಗಳೇ ರಾರಾಜಿಸುತ್ತಿವೆ. ಸಾಮಾನ್ಯವಾಗಿ ನಗರದ ಸಿಟಿ ಬಸ್‌ ಸೇರಿದಂತೆ ಸರಕಾರಿ ಬಸ್‌ಗಳಲ್ಲಿ ಆಂಗ್ಲ ಭಾಷೆಯಲ್ಲಿ ನಾಮಫಲಕ ನಮೂದಾಗಿದ್ದರೂ ಕನ್ನಡ ಭಾಷೆಗೆ ಪ್ರಾಶಸ್ತ್ಯ ನೀಡಲಾಗುತ್ತದೆ. ಆದರೆ ಇಲ್ಲಿನ ಕೆಲವು ಖಾಸಗಿ ಬಸ್‌ಗಳು ಆಂಗ್ಲಭಾಷಾ ಮೋಹಕ್ಕೆ ತುತ್ತಾಗಿರುವುದು ಸಾರ್ವಜನಿಕರ ಅದರಲ್ಲಿಯೂ ಕನ್ನಡಾಭಿಮಾನಿಗಳ ಕೆಂಗಣ್ಣಿಗೆ ಗುರಿ ಯಾಗಿದೆ. […]

ಆಳ್ವಾಸ್ ನುಡಿಸಿರಿಯಲ್ಲಿ ‘ಸೋದರ ಭಾಷೆಗಳು-ನಾಳೆಗಳ ನಿರ್ಮಾಣ’

Saturday, November 19th, 2016
neighbouring languages

ಮೂಡುಬಿದಿರೆ: ಜಾಗತಿಕ ಭಾಷೆಗಳು ನಮ್ಮನ್ನು ಆಳುತ್ತಿರುವ, ಆಕ್ರಮಿಸುತ್ತಿರುವ ಹೊತ್ತಿನಲ್ಲಿ ನಮ್ಮ ಸೋದರ ಭಾಷೆಗಳಲ್ಲಿ ಏನಾಗುತ್ತಿದೆಯೆಂಬುದನ್ನು ಅರಿತುಕೊಳ್ಳುವುದು ತುಂಬಾ ಮುಖ್ಯ. ಈ ಹಿನ್ನೆಲೆಯಲ್ಲಿ ಆಳ್ವಾಸ್ ನುಡಿಸಿರಿಯಲ್ಲಿ ‘ಸೋದರ ಭಾಷೆಗಳು-ನಾಳೆಗಳ ನಿರ್ಮಾಣ’ ಎಂಬ ವಿಶೇಷ ವಿಚಾರ ಗೋಷ್ಠಿಯನ್ನು ನಡೆಸಲಾಯಿತು. ಈ ವಿಚಾರಗೋಷ್ಠಿಯಲ್ಲಿ ಕನ್ನಡ, ತಮಿಳು, ಮಲೆಯಾಳಂ ಭಾಷೆಗಳಲ್ಲಿ ನಡೆಯುತ್ತಿರುವ ಪ್ರಗತಿಪರ ಬದಲಾವಣೆಗಳ ಕುರಿತು ವಿದ್ವಾಂಸರು ತಮ್ಮ ವಿಚಾರವನ್ನು ಮಂಡಿಸಿದರು. ತಮಿಳು ಭಾಷೆ-ನಾಳೆಗಳ ನಿರ್ಮಾಣ ತಮಿಳು ಭಾಷೆಯಲ್ಲಾಗಿರುವ, ಆಗುತ್ತಿರುವ ತ್ವರಿತ ಬದಲಾವಣೆಗಳ ಕುರಿತು ಮಾತನಾಡಿದ ಡಾ.ತಮಿಳ್ ಸೆಲ್ವಿ, ಕರ್ನಾಟಕದಲ್ಲಿ ನಾಳೆಗಳನ್ನು ನಿರ್ಮಾಣ […]

‘ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಯಕ್ಷಗಾನದ ಕೊಡುಗೆ ಬಹುಮುಖ್ಯವಾದುದು’

Monday, November 14th, 2016
Yakshagana

ಪೆರ್ಲ: ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಶ್ರೀಮಂತವಾಗಿಸುವಲ್ಲಿ ಯಕ್ಷ್ಷಗಾನದ ಕೊಡುಗೆ ಬಹಳಷ್ಟಿದೆ. ಇಂದಿಗೂ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಯಕ್ಷಗಾನದಷ್ಟು ಸಮರ್ಥವಾಗಿ ದುಡಿಸಿಕೊಳ್ಳುವ ಕಲೆ ಮತ್ತೊಂದಿಲ್ಲ ಎಂದು ವಿಶ್ರಾಂತ ಪ್ರಾಧ್ಯಾಪಕ, ಚಿಂತಕ ಪಕಳಕುಂಜ ಶ್ಯಾಮ ಭಟ್ ಅಭಿಪ್ರಾಪಟ್ಟಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ, ಅಪೂರ್ವ ಕಲಾವಿದರು ಸಂಸ್ಥೆಯ ಸಹಕಾರದೊಂದಿಗೆ ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದ ಸಭಾಂಗಣದಲ್ಲಿ ಶನಿವಾರ ನಡೆದ ಕನ್ನಡ ಚಿಂತನೆ ಕಾರ್ಯಕ್ರಮದಲ್ಲಿ ’ಭಾಷೆ ಮತ್ತು ಯಕ್ಷಗಾನ’ ಎಂಬ ವಿಷಯದಲ್ಲಿ ಅವರು ವಿಶೇಷೋಪನ್ಯಾಸ ನೀಡಿ ಮಾತನಾಡಿದರು. ಭಾಷೆ […]