ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 14 ಕರೋನವೈರಸ್ ಪಾಸಿಟಿವ್ ಪ್ರಕರಣ ಪತ್ತೆ

Saturday, May 30th, 2020
dk covid--19

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ  14 ಕರೋನವೈರಸ್  ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 11 ಪುರುಷರು ಮತ್ತು 3 ಮಹಿಳೆಯರ ಪಾಸಿಟಿವ್ ವರದಿ ಬಂದಿದೆ. ಇವುಗಳ ಪೈಕಿ ದಕ್ಷಿಣ ಕನ್ನಡದಲ್ಲಿ 13 ಮಂದಿ ಮಹಾರಾಷ್ಟ್ರದಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದವರಾಗಿದ್ದರೆ, ಒಂದು ಪ್ರಕರಣ ಸೋಮೇಶ್ವರ ಗ್ರಾಮದ ಪಿಲಾರ್ ದಾರಂದ ಬಾಗಿಲುವಿನಲ್ಲಿ ವರದಿಯಾಗಿದೆ. 17 ವರ್ಷದ ಬಾಲಕನಿಗೆ ಪಾಸಿಟಿವ್ ಬಂದಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ದ.ಕ ಒಟ್ಟು 75 ಸಕ್ರಿಯ ಪ್ರಕರಣಗಳಿವೆ ಇದರೊಂದಿಗೆ ಜಿಲ್ಲೆಯಲ್ಲಿ 119  ಪಾಸಿಟಿವ್ ಪ್ರಕರಣಗಳಿವೆ, ಅದರಲ್ಲಿ 73 […]

ಕರೋನವೈರಸ್ ತಡೆಗಟ್ಟಲು ಕಾಂಗ್ರೆಸ್ ಕಾರ್ಯಪಡೆ ಸನ್ನದ್ಧ

Saturday, April 4th, 2020
jr-lobo

ಮಂಗಳೂರು:  ಕರೋನವೈರಸ್ ಹರಡುವುದನ್ನು ನಿಯಂತ್ರಿಸಲು ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಒಳಗೊಂಡ ಕಾರ್ಯಪಡೆ ಸಮಿತಿಯನ್ನು ರಚಿಸಲಾಗಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಹೇಳಿದ್ದಾರೆ. ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಏಪ್ರಿಲ್ 4 ರ ಶನಿವಾರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ನಿಯಂತ್ರಣಕ್ಕೆ ಕಾಂಗ್ರೆಸ್ ‌ನಿಂದ‌ ಟಾಸ್ಕ್‌ಪೋರ್ಸ್ ರಚನೆ ಮಾಡಲಾಗಿದೆ. ನಾವು ಜವಾಬ್ದಾರಿಯುತ ಕೆಲಸ ಮಾಡುತ್ತೇವೆ, ಸರ್ಕಾರಕ್ಕೆ ಸಲಹೆ ನೀಡುತ್ತೇವೆ ಎಂದರು. ಸಮಿತಿಯಲ್ಲಿ ಎಂಟು ಉಪಸಮಿತಿಯನ್ನು ಮಾಡುತ್ತೇವೆ. ಆಹಾರ ಉಪಸಮಿತಿ, ಆರೋಗ್ಯ ಉಪಸಮಿತಿ, ಸಾಮಾಜಿಕ ಜಾಲತಾಣ‌ […]