ಐದು ಸಾವಿರ ವರ್ಷಗಳ ಭವ್ಯ ಪರಂಪರೆಯ ಆಯುಧಪೂಜೆ ಆಚರಣೆ .
Saturday, October 16th, 2010ಮಂಗಳೂರು: ನಾಗರೀಕ ಸಂಸ್ಕೃತಿ ಆರಂಭವಾದಂದಿನಿಂದ ಜನರು ತಾವು ಉಪಯೋಗಿಸುತ್ತಿದ್ದ ಆಯುಧಗಳಿಗೆ ಪೂಜೆ ಮಾಡುತ್ತಿದ್ದರು ಎಂದು ಅನೇಕ ಮೂಲಗಳಿಂದ ನಾವು ಈಗ ತಿಳಿಯಬಹುದಾಗಿದೆ. ಸುಮಾರು 5000 ವರ್ಷಗಳ ಹಿಂದೆ ಪಾಂಡವರು 12 ವರ್ಷಗಳ ವನವಾಸವನ್ನು ಮುಗಿಸಿ, ಅಜ್ಞಾತವಾಸದ ಕೊನೆಯ ದಿನದಲ್ಲಿ ಉತ್ತರ ಗೋಗ್ರಹಣದ ಕದನದಲ್ಲಿ ಆಯುಧಗಳನ್ನು ಪೂಜಿಸಿ ಕೌರವರೊಂದಿಗೆ ಯುದ್ಧ ನಡೆಸಿದರು ಎನ್ನುವ ದಾಖಲೆಗಳು ಮಹಾಭಾರತದ ಪುಟಗಳಲ್ಲಿ ಕಾಣಸಿಗುತ್ತದೆ. ಬ್ರಹನ್ನಳೆಯಾದ ಅರ್ಜುನ ವಿರಾಟ ನಗರದ ರಾಜಕುಮಾರ ಉತ್ತರ ಕುಮಾರನೊಂದಿಗೆ ಬನ್ನಿ ಮಂಟಪದಿಂದ ಆಯುಧಗಳನ್ನು ಪೂಜಿಸಿ ಯುದ್ಧಕ್ಕೆ ಹೊರಟು ಕೌರವರನ್ನು […]