ಮಂಗಳೂರು :ದಕ್ಷಿಣ ಕನ್ನಡದಲ್ಲಿ ಸೇವೆ ಸಲ್ಲಿಸಿದ ಐಪಿಎಸ್ ಅಧಿಕಾರಿ ಆರ್. ರಮೇಶ್ ನಿಧನ

Monday, August 26th, 2019
R-ramesh

ಮಂಗಳೂರು : ದ.ಕ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಐಪಿಎಸ್ ಅಧಿಕಾರಿ ಆರ್. ರಮೇಶ್ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಇಂದು ನಿಧನರಾಗಿದ್ದಾರೆ. ಭೂ ಅಂಗಾಂಗ ವೈಫಲ್ಯದಿಂದ ಬೆಂಗಳೂರಿಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಕಳೆದ 15 ದಿನಗಳಿಂದ ಚಿಕಿಸ್ತೆ ಪಡೆಯುತ್ತಿದ್ದರು. ಡಿಐಜಿ ಭಡ್ತಿ ಹೊಂದಿದ ಬಳಿಕ ಅವರು ಹೋಮ್ ಗಾರ್ಡ್,ಸಿವಿಲ್ ಡಿಫೆನ್ಸ್ ಇಲಾಖೆಯ ಉನ್ನತ ಹುದ್ದೆ ಅಲಂಕರಿಸಿದ್ದರು. 2005 ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದ ಆರ್. ರಮೇಶ್ ಸಿಎಆರ್ ಡಿಸಿಪಿ ಬೆಂಗಳೂರು ಅಪರಾಧ ವಿಭಾಗದ ಡಿಸಿಪಿ ಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. […]

ತಟರಕ್ಷಣಾ ಪಡೆಗೆ ಮತ್ತೊಂದು ನೌಕೆ ಹಸ್ತಾಂತರ

Thursday, February 1st, 2018
indian-defenceindian-defence

ಮಂಗಳೂರು: ಇಲ್ಲಿನ ಭಾರತಿ ಡಿಫೆನ್ಸ್‌ ಅಂಡ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ (ಬಿಡಿಐಎಲ್‌) ನಿರ್ಮಿಸಿರುವ ಅತ್ಯಾಧುನಿಕ ವಿ– 410 ಗಸ್ತು ನೌಕೆಯನ್ನು ಬುಧವಾರ ಸಂಜೆ ಭಾರತೀಯ ತಟರಕ್ಷಣಾ ಪಡೆಗೆ (ಇಂಡಿಯನ್‌ ಕೋಸ್ಟ್‌ ಗಾರ್ಡ್) ನಿಯುಕ್ತಿಗೊಳಿಸಲಾಯಿತು. ಇದು ಬಿಡಿಐಎಲ್‌ ಪೂರೈಸಿರುವ ಆರನೇ ಗಸ್ತು ನೌಕೆ. ಕೋಸ್ಟ್‌ ಗಾರ್ಡ್‌ನ ಮಂಗಳೂರು ಘಟಕದ ಕಮಾಂಡಿಂಗ್‌ ಅಧಿಕಾರಿ ಪವನ್‌ ಕೋಯರ್‌ ಅವರ ಪತ್ನಿ ಶಿಲ್ಪಾ ಕೋಯರ್‌ ನೌಕೆಗೆ ತೆಂಗಿನಕಾಯಿ ಒಡೆಯುವ ಮೂಲಕ ಅದರ ಮೊದಲ ಕಾರ್ಯಾಚರಣೆಗೆ ಚಾಲನೆ ನೀಡಿದರು. ಕೋಸ್ಟ್‌ ಗಾರ್ಡ್‌ ಕರ್ನಾಟಕ ವಲಯದ ಡಿಐಜಿ […]

ದಿಟ್ಟ ಅಧಿಕಾರಿ ಡಿ.ರೂಪಾ ಅವರಿಗೆ ಮತ್ತೆ ವರ್ಗಾವಣೆ ಭಾಗ್ಯ

Monday, January 1st, 2018
Roopa

ಬೆಂಗಳೂರು: ದಿಟ್ಟ ಅಧಿಕಾರಿ ಡಿ.ರೂಪಾ ಅವರಿಗೆ ಹೊಸ ವರ್ಷದಂದು ಸೇವಾ ಬಡ್ತಿ ಜೊತೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪ್ರಸ್ತುತ ಟ್ರಾಫಿಕ್ ಮತ್ತು ರಸ್ತೆ ಸುರಕ್ಷತೆ ಆಯುಕ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಡಿ.ರೂಪಾ ಅವರಿಗೆ ಐಜಿಪಿ ಆಗಿ ಬಡ್ತಿ ದೊರೆತಿದೆ. ಅವರು ಇನ್ನು ಮುಂದೆ ಅಡಿಶನಲ್ ಕಮಾಂಡೆಟ್ ಜನರಲ್, ಹೋಮ್ ಗಾರ್ಡ್ಸ್ ಮತ್ತು ಹೆಚ್ಚುವರಿ ನಿರ್ದೇಶಕಿಯಾಗಿ ನಾಗರಿಕ ಭದ್ರತೆ ಇಲಾಖೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಲ್ಲಿ ಅತ್ಯಾಚಾರಿಯ ಸಾಮ್ರಾಜ್ಯ: ಡಿ ರೂಪ ಬಿಚ್ಚಿಟ್ಟ ಸತ್ಯ ಈ […]

ಮಂಗಳೂರಿನ ಪೊಲೀಸ್‌ ಆಯುಕ್ತರಾಗಿ ಆರ್‌, ಹಿತೇಂದ್ರ ಅಧಿಕಾರ ಸ್ವೀಕಾರ

Tuesday, December 17th, 2013
Mangalore police commissionaire R. Hitendra

ಮಂಗಳೂರು: ಮಂಗಳೂರಿನ ಪೊಲೀಸ್‌ ಆಯುಕ್ತರಾಗಿ ಆರ್‌, ಹಿತೇಂದ್ರ ಅವರು ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಪೊಲೀಸ್‌ ಕಮಿಷನರೆಟ್‌ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿರ್ಗಮನ ಕಮಿಷನರ್‌ ಮನೀಶ್‌ ಕರ್ಭೀಕರ್‌ ಅವರಿಂದ ಅಧಿಕಾರ ಸ್ವೀಕರಿಸಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೋಮು ಗಲಭೆ ಸಂಭವಿಸುತ್ತಿರುವ ಬಗ್ಗೆ ಹಾಗೂ ಭೂಗತ ಚಟುವಟಿಕೆಗಳ ಕುರಿತು ತಿಳಿದುಕೊಂಡಿದ್ದೇನೆ. ಈ ಬಗ್ಗೆ ಕೂಲಂಕಷ ಅಧ್ಯಯನ ನಡೆಸಿ ಮುಂದಿನ ಕ್ರಮ ಜರಗಿಸಲಾಗುವುದು, ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಕ್ರಿಮಿನಲ್‌ ಆರೋಪ ಹೊತ್ತ ಕೈದಿಗಳನ್ನು ಈಗಾಗಲೇ ಮೈಸೂರು […]