ಡೆಂಗ್ಯೂ ಹಾಗೂ ನಿಫಾ ವೈರಸ್ ಕುರಿತು ಆತಂಕ ಬೇಡ : ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

Friday, September 15th, 2023
ಡೆಂಗ್ಯೂ ಹಾಗೂ ನಿಫಾ ವೈರಸ್ ಕುರಿತು ಆತಂಕ ಬೇಡ : ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ಮಂಗಳೂರು : ಜಿಲ್ಲೆಯಲ್ಲಿ ಡೆಂಗ್ಯೂ, ನಿಫಾ ವೈರಸ್ ಸೇರಿದಂತೆ ಮತ್ತಿತರ ಸಾಂಕ್ರಾಮಿಕ ರೋಗಗಳ ಲಕ್ಷಣ, ಹರಡುವಿಕೆ ನಿಯಂತ್ರಣ ಸೇರಿದಂತೆ ಚಿಕಿತ್ಸೆಯ ಬಗ್ಗೆ ಜನಸಾಮಾನ್ಯರಿಗೆ ಆರೋಗ್ಯ ಶಿಕ್ಷಣವನ್ನು ನೀಡಿ ಇವುಗಳ ನಿಯಂತ್ರಣಕ್ಕೆ ಆರೋಗ್ಯ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸೂಚನೆ ನೀಡಿದರು. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಡೆಂಗ್ಯೂ ನಿಯಂತ್ರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಮಲೇರಿಯ ನಿಯಂತ್ರಣದಂತೆ ಡೆಂಗ್ಯೂ ನಿಯಂತ್ರಣ ಮಾಡುವುದು ಅತೀ ಮುಖ್ಯ […]

ನಕ್ಸಲ್ ಪೀಡಿತ ಬೆಳ್ತಂಗಡಿ ಗ್ರಾಮದ ಕೊರಗ ಕಾಲೋನಿಯಲ್ಲಿ ಡೆಂಗ್ಯೂ ಹಾಗೂ ಜ್ವರದ ಭೀತಿ

Wednesday, July 8th, 2020
sulkeri gp

ಬೆಳ್ತಂಗಡಿ  : ನಕ್ಸಲ್ ಪೀಡಿತ ಗ್ರಾಮವಾದ ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ಕೊರಗ ಕಾಲೋನಿಗೆ ಜನರು ಹೋಗುವುದೆಂದರೆ ಅದು ಸಾಹಸ, ಅದರಲ್ಲೂ ಆಶಾ ಕಾರ್ಯಕರ್ತೆಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಹಗ್ಗದ ಸೇತುವೆ ದಾಟಿ ಅಲ್ಲಿಗೆ ಹೋಗಿ ಚಿಕಿತ್ಸೆ ನೀಡುತ್ತಿದ್ದಾರೆ. ಸುಲ್ಕೇರಿ ಗ್ರಾಮದ ಕೊರಗ ಕಾಲೋನಿಯಲ್ಲಿ 40 ಕ್ಕೂ ಹೆಚ್ಚು ಗಳು ವಾಸಿಸುತ್ತಿವೆ. ಇಲ್ಲಿರುವ  ಕೆಲ ಕುಟುಂಬಗಳಿಗೆ ಡೆಂಗ್ಯೂ ಸೇರಿದಂತೆ ಜ್ವರದ ಲಕ್ಷಣಗಳೂ ಕಾಣಿಸಿಕೊಂಡಿದೆ. ಮಳೆಯ ನಡುವೆ ರಭಸದಿಂದ ಹರಿಯುವ ಹೊಳೆಯನ್ನು ದಾಟಿ  ಅಲ್ಲಿನ ಜನರಿಗೆ ಬರುವುದು ಅಸಾಧ್ಯವಾಗಿರೋದ್ರಿಂದ ಆಶಾ ಕಾರ್ಯಕರ್ತೆಯರು ಪ್ರತಿದಿನ ಆ […]

ಪುತ್ತೂರು: ಡೆಂಗ್ಯೂ ಜ್ವರಕ್ಕೆ ಮಹಿಳೆ ಬಲಿ

Friday, June 19th, 2020
puttur Dengue

ಪುತ್ತೂರು: ಒಂದು ವಾರದಿಂದ ಜ್ವರ ದಿಂದ ಬಳಲುತ್ತಿದ್ದು ವಿವಾಹಿತ ಮಹಿಳೆ ಜೂ. 18 ರಂದು ತಡರಾತ್ರಿ ಮೃತಪಟ್ಟ ಘಟನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದೆ. ಪುತ್ತೂರು ತಾಲೂಕಿನ ಅರಿಯಡ್ಕ ನಿವಾಸಿ ನಜೀರ್ ಮಾಸ್ಟರ್ ಅವರ ಪತ್ನಿ ನಸೀಮಾ (32) ಮೃತಪಟ್ಟ ಮಹಿಳೆ. ನಸೀಮಾ ಅವರು ಕಳೆದ ಒಂದು ವಾರದಿಂದ  ಪುತ್ತೂರಿನಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಜ್ವರ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿ ಆಗದೇ ಮೃತಪಟ್ಟಿದ್ದಾರೆ. ಮೃತರು ಪತಿ, ಮೂವರು ಪುತ್ರರನ್ನು […]

ಇಲಿ ಜ್ವರದ ಭೀತಿಯ ಮುನ್ನೆಚ್ಚರಿಕೆ : ಡಾ| ಪ್ರವೀಣ್‌ ಕುಮಾರ್‌

Thursday, September 5th, 2019
eli

ಮಂಗಳೂರು : ನಗರದಲ್ಲಿ ಜುಲೈಯಲ್ಲಿ ಇಲಿಜ್ವರದ 17 ಪ್ರಕರಣ ಗಳು ದಾಖಲಾಗಿವೆ. ಈ ಬಗ್ಗೆ ಜನತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದು ಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ| ಪ್ರವೀಣ್‌ ಕುಮಾರ್‌ ತಿಳಿಸಿದರು. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಡೆಂಗ್ಯೂ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿದೆ. ಈ ನಡುವೆ ಇಲಿ ಜ್ವರ (ಲೆಪ್ಟೋಸ್ಪೈರೋಸಿಸ್‌) ಕಾಡಲಾರಂಭಿಸಿದೆ. ಮಲೇರಿಯಾವು ಇದೆ. ಇಲಿಜ್ವರ ವ್ಯಾಪಕವಾಗಿ ಹರಡುತ್ತಿ ರುವುದರಿಂದ ಎಚ್ಚರಿಕೆ ಅಗತ್ಯ. ಇಲಿಜ್ವರ ಲೆಪ್ಟೋಸ್ಪೈರ ಎಂಬ ಸೂಕ್ಷ್ಮಾಣು ಜೀವಿಗಳಿಂದ […]

ಮಂಗಳೂರು : ಡೆಂಗ್ಯೂ ಜ್ವರಕ್ಕೆ ಇಬ್ಬರು ಬಲಿ

Wednesday, August 28th, 2019
dengue

ಮಂಗಳೂರು : ಕಳೆದ ಕೆಲವು ದಿನಗಳಿಂದ ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ನಗರದ ಹೊರವಲಯದ ಸೋಮೇಶ್ವರ ಹಾಗೂ ಉಳ್ಳಾಲದ ಚೆಂಬುಗುಡ್ಡೆ ನಿವಾಸಿಗಳಿಬ್ಬರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಸೋಮೇಶ್ವರದ ಉದಯಚಂದ್ರ ಎಂಬವರ ಪತ್ನಿ ಸುಮತಿ (35) ಹಾಗೂ ಚೆಂಬುಗುಡ್ಡೆ ನಿವಾಸಿ ಪ್ರಕಾಶ್ ಗಟ್ಟಿ (47) ಶಂಕಿತ ಡೆಂಗ್ಯೂ ಜ್ವರಕ್ಕೆ ಬಲಿಯಾದವರು. ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸುಮತಿ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನಲೆ, ಕಳೆದ ವಾರ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಯಲ್ಲಿ ಜಾಂಡೀಸ್ ಇರುವ […]

ಕರಾವಳಿಯಲ್ಲಿ ಮತ್ತೆ ಉಂಟಾಗುತ್ತಿದೆ, ಡೆಂಗ್ಯೂ ಜ್ವರ

Monday, August 26th, 2019
dengue

ಮಂಗಳೂರು : ಕರಾವಳಿಯಲ್ಲಿ ಈಗ ಮಳೆ ಬಿಟ್ಟೂ ಬಿಟ್ಟು ಬರುತ್ತಿದ್ದು, ಆಗಾಗ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಇದು ಸೊಳ್ಳೆ ಸಂತಾನಾಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಿ ಮತ್ತೆ ಡೆಂಗ್ಯೂ ಉಲ್ಬಣಿಸಲು ಕಾರಣವಾಗಬಹುದೇ ಎಂಬ ಭೀತಿ ಉಂಟಾಗಿದೆ. ಈ ಕುರಿತು ಮಾತನಾಡಿರುವ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ನವೀನ್‌ಚಂದ್ರ, ಶಂಕಿತ ಡೆಂಗ್ಯೂವಿನಿಂದ ಇದುವರೆಗೆ 11 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 6 ಮಂದಿಯ ರಕ್ತವನ್ನು ಎಲಿಸಾ ಪರೀಕ್ಷೆಗೆ ಕಳುಹಿಸಲಾಗಿದೆ. ಉಳಿದವರ ರಕ್ತವನ್ನೂ ಪರೀಕ್ಷೆಗೆ ಕಳುಹಿಸಲಾಗುವುದು. ಜಿಲ್ಲೆಯಲ್ಲಿ ಪ್ರಾಥಮಿಕ ಪರೀಕ್ಷೆಯಲ್ಲಿ ಡೆಂಗ್ಯೂ ಪಾಸಿಟಿವ್ ಎಂಬ […]

ಡೆಂಗ್ಯೂ ಮಹಾಮಾರಿಗೆ ಜಪ್ಪು ಪಟ್ಣದ ವ್ಯಕ್ತಿ ಬಲಿ

Wednesday, August 14th, 2019
ganesh-patna

ಮಂಗಳೂರು : ಡೆಂಗ್ಯೂ ಮಹಾಮಾರಿ ಬಲಿಪಡೆಯುವುದನ್ನು ಮುಂದುವರಿಸಿದ್ದು ಜಪ್ಪು ಪಟ್ಣದ  ಯುವಕನೋರ್ವ ಡೆಂಗ್ ಜ್ವರಕ್ಕೆ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ವರದಿಯಾಗಿದ್ದು, ದ.ಕ. ಜಿಲ್ಲೆಯಲ್ಲಿ ಶಂಕಿತ ಡೆಂಗ್ ಜ್ವರಕ್ಕೆ ಬಲಿಯಾದವರ ಸಂಖ್ಯೆ 10ರ ಗಡಿ ದಾಟಿದೆ. ನಗರದ ಜಪ್ಪು ಪಟ್ಣ ನಿವಾಸಿ ಗಣೇಶ್ ಕರ್ಕೆರ (35) ಮೃತ ಯುವಕ. ಜ್ವರದ ಹಿನ್ನೆಲೆಯಲ್ಲಿ ಆ.13ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಗಣೇಶ್ ಸಾವಿಗೆ ಡೆಂಗ್ ಜ್ವರ ಕಾರಣ ಎಂದು ಖಾಸಗಿ ಆಸ್ಪತ್ರೆಯ […]

ನಗರದ ಪುರಭವನದಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ಜಾಗೃತಿ ಕಾರ್ಯಕ್ರಮ

Monday, July 29th, 2013
Maleria Dengue

ಮಂಗಳೂರು : ಹೆಲ್ತ್  ಕನ್ಸೆರ್ನ್ ಪೌಂಡೇಶನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ನಿಯಂತ್ರಣ ಕಾರ್ಯಕ್ರಮವು ಜುಲೈ17 ರಂದು ಪುರಭವನದಲ್ಲಿ ನಡೆಯಿತು. ಇದರ ಉದ್ಘಾಟನೆಯನ್ನು ಎಂಎಲ್ ಸಿ ಗಣೇಶ್ ಕಾರ್ಣಿಕ್ ನೆರವೇರಿಸಿದರು. ಉದ್ಘಾಟನೆಯ ಬಳಿಕ ಮಾತನಾಡಿದ ಕಾರ್ಣಿಕ್ ಅವರು ರೋಗಗಳ ಬಗ್ಗೆ ಜನರಲ್ಲಿ ನೈರ್ಮಲ್ಯ ಮತ್ತು ಶುಚಿತ್ವದ ಬಗ್ಗೆ ಅರಿವು ಮೂಡಿಸಬೇಕು. ನಗರಗಳಲ್ಲಿ ಚರಂಡಿ ಮತ್ತು ಮನೆಯ ಆವರಣದಲ್ಲಿ ಕೊಳಕು ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಮಲೇರಿಯಾ ಮತ್ತು ಡೆಂಗ್ಯೂವಿನಂತಹ ರೋಗಗಳ […]

ಡೆಂಗ್ಯೂ ಪೀಡಿತರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ.

Thursday, June 13th, 2013
ಡೆಂಗ್ಯೂ ಪೀಡಿತರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ.

ಮಂಗಳೂರು : ಕೆಎಂಸಿ ಅತ್ತಾವರ ಆಸ್ಪತ್ರೆಯಲ್ಲಿ ಡೆಂಗ್ಯೂ ಪೀಡಿತರನ್ನು ಇಂದು ಜಿಲ್ಲಾಧಿಕಾರಿ ಶ್ರೀ ಎನ್. ಪ್ರಕಾಶ್ ಅವರು ಭೇಟಿ ಮಾಡಿ, ಸಾಂತ್ವಾನ ಹೇಳಿದರು. ಜ್ವರ ಪೀಡಿತರ ಬಗ್ಗೆ ವಿಶೇಷ ಮುತುವರ್ಜಿವಹಿಸಿ ಶುಶ್ರೂಸೆ ನೀಡಿ ಎಂದು ಜಿಲ್ಲಾಧಿಕಾರಿಗಳು ವೈದ್ಯರಿಗೆ ಸೂಚನೆ ನೀಡಿದರು. ನಗರದ ಅತ್ತಾವರದಲ್ಲಿ ಒಟ್ಟು ಏಳು ಜನರು  ಡೆಂಗ್ಯೂ ಪೀಡಿತರಾಗಿದ್ದಾರೆ ಎಂಬ ಮಾಹಿತಿಯ ಹಿನ್ನಲೆಯಲ್ಲಿ ಅವರನ್ನು ವೀಕ್ಷಿಸಲು ತೆರಳಿದ ಜಿಲ್ಲಾಧಿಕಾರಿ ರೋಗ ಪೀಡಿತರಿಗೆ ನೀಡಿರುವ  ಚಿಕಿತ್ಸೆಯ ಬಗ್ಗೆ ಪರಿಶೀಲನೆ ನಡೆಸಿದರು.  ಇಬ್ಬರನ್ನು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, ಪುತ್ತೂರಿನ […]