ಪತ್ನಿ ಜೊತೆ ಮಲಗಿದ್ದ ವ್ಯಕ್ತಿ ನಾಪತ್ತೆ, ಮನೆಯವರಲ್ಲಿ ಆತಂಕ

Sunday, November 19th, 2023
Roshan

ಮಂಜೇಶ್ವರ : ರಾತ್ರಿ ವೇಳೆ ಪತ್ನಿ ಜೊತೆ ಮಲಗಿದ್ದ ವ್ಯಕ್ತಿಯೊಬ್ಬರು ಶನಿವಾರ ಮಧ್ಯರಾತ್ರಿ ವೇಳೆ ನಾಪತ್ತೆಯಾದ ಘಟನೆ ಮಂಜೇಶ್ವರದಲ್ಲಿ ನಡೆದಿದೆ. ಮಂಜೇಶ್ವರ ಚರ್ಚ್ ಬೀಚ್ ರಸ್ತೆಯಲ್ಲಿರುವ ಅಮನ್ ಕಾಟೇಜ್ ಬಳಿಯ ನಿವಾಸಿಯಾಗಿರುವ ದಿ. ಫೆಲಿಕ್ಸ್ ಮೊಂತೆರೋ – ಅಪೋಲಿನ್ ಲೋಬೋ ದಂಪತಿಯ ಪುತ್ರ ರೋಷನ್ ಮೊಂತೆರೋ (42) ನಾಪತ್ತೆಯಾದ ವ್ಯಕ್ತಿ. ಶನಿವಾರ ರಾತ್ರಿ ಊಟ ಮಾಡಿ ಪತ್ನಿ ರೇಖಾ ಮೊಂತೆರೋ ಜೊತೆ ಮಲಗಿದ್ದ ರೋಷನ್, ಮಧ್ಯರಾತ್ರಿ 2.30 ವೇಳೆ ರೇಖಾರಿಗೆ ಎಚ್ಚರವಾದಾಗ ನಾಪತ್ತೆಯಾಗಿದ್ದರು. ಪರಿಸರದಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ. […]