ಮಾದಕ ವಸ್ತು ಎಂಡಿಎಂಎ ಸಾಗಾಟ, ಇಬ್ಬರ ಬಂಧನ, ಓರ್ವ ಪರಾರಿ

Thursday, February 8th, 2024
mmda

ಬಂಟ್ವಾಳ : ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಓರ್ವ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಚಿ ಗ್ರಾಮ ನಿವಾಸಿಗಳಾದ ಅಬ್ದುಲ್ ರಹೀಝ್ ಹಾಗೂ ದಾವೂದುಲ್ ಅಮೀರ್ ಬಂಧಿತ ಆರೋಪಿಗಳಾಗಿದ್ದಾರೆ. ಇನ್ನೋರ್ವ ಆರೋಪಿ ಬಂಟ್ವಾಳ ನಿವಾಸಿ ನಝೀರ್ ಪರಾರಿಯಾಗಿದ್ದಾನೆ. ಬಂಧಿತರಿಂದ 4 ಸಾವಿರ ರೂ. ಮೌಲ್ಯದ 4 ಗ್ರಾಂ 04 ಮಿ.ಗ್ರಾಂ.ತೂಕದ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಬಂಟ್ವಾಳ ನಗರ ಠಾಣಾಧಿಕಾರಿ […]

ಬ್ರಹ್ಮರಕೂಟ್ಲು : ಶಾರ್ಟ್ ಸರ್ಕ್ಯೂಟ್ ನಿಂದ ಪ್ಲೈವುಡ್ ಮಿಲ್ ನಲ್ಲಿ ಬೆಂಕಿ

Wednesday, October 23rd, 2019
ply-wood

ಬಂಟ್ವಾಳ : ಶಾರ್ಟ್ ಸರ್ಕ್ಯೂಟ್ ನಿಂದ ಪ್ಲೈವುಡ್ ಮಿಲ್ ನಲ್ಲಿ ಬೆಂಕಿ ತಗಲಿದ ಘಟನೆ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಇಂದು ಮುಂಜಾನೆ 4 ಗಂಟೆಯ ಸುಮಾರಿಗೆ ಮಿಲ್ ನ ಒಳಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ‌. ಈ ವೇಳೆ ಇಲ್ಲಿ ಕೆಲಸ ಮಾಡುತ್ತಿದ್ದ ವಾಚ್ ಮ್ಯಾನ್ ಮಾಲಕರಿಗೆ ತಿಳಿಸಿದ್ದು, ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ‌. ಅರ್ಧ ತಾಸಿನ ಬಳಿಕ ಬೆಂಕಿ ಮಿಲ್ ಒಳಭಾಗವಿಡೀ ವ್ಯಾಪಿಸಿದೆ‌. ಒಟ್ಟು ನಾಲ್ಕು ಘಟಕದ ಅಗ್ನಿಶಾಮಕ ದಳವು ಮೂರೂವರೆ ಗಂಟೆಗಳ […]

ಎನ್‌ಐಟಿಕೆ, ಬ್ರಹ್ಮರಕೂಟ್ಲು ಟೋಲ್‌ಗೇಟ್‌ ಆರು ತಿಂಗಳ ಒಳಗೆ ಸಂಪೂರ್ಣ ಸ್ಥಗಿತ

Thursday, February 16th, 2017
Toll gate

ಮಂಗಳೂರು: ಕೇಂದ್ರ ಸರಕಾರಿ ಟೋಲ್‌ಗ‌ಳೆಂದು ಪರಿಗಣಿತ ಸುರತ್ಕಲ್‌ನ ಎನ್‌ಐಟಿಕೆ ಹಾಗೂ ಬಂಟ್ವಾಳ ಬ್ರಹ್ಮರಕೂಟ್ಲು ಟೋಲ್‌ ಮುಂದಿನ ಆರು ತಿಂಗಳ ಒಳಗೆ ಸಂಪೂರ್ಣ ಸ್ಥಗಿತವಾಗಲಿದೆ ಎಂದು ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದ್ದಾರೆ. ಎನ್‌ಐಟಿಕೆ ಟೋಲ್‌ ಹೆಜಮಾಡಿಗೆ ಸ್ಥಳಾಂತರವಾಗಧಿಲಿದೆಯೇ ಎಂಬ ಬಗ್ಗೆ ಮಂಗಳೂರಿನಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ, ರಾ.ಹೆ. ಪ್ರಾಧಿಕಾರದ ಯೋಜನಾ ನಿರ್ದೇಶಕ ವಿಜಯ್‌ ಕುಮಾರ್‌ ಅವರಲ್ಲಿ ಮಾಹಿತಿ ಪಡೆದು ಮಾತನಾಡಿದ ಸಂಸದ ನಳಿನ್‌ ಕುಮಾರ್‌, ಸರಕಾರಿ ಟೋಲ್‌ಗ‌ಳಾಗಿರುವ ಬ್ರಹ್ಮರಕೂಟ್ಲು ಹಾಗೂ ಸುರತ್ಕಲ್‌ ಟೋಲನ್ನು ಮುಂದಿನ 6 […]

ಪೊಲೀಸ್‌ ಉಪಸ್ಥಿತಿಯಲ್ಲಿ ಟೋಲ್‌ ಸಂಗ್ರಹ ಆರಂಭ

Monday, April 21st, 2014
Toll Gate

ಬಂಟ್ವಾಳ : ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಬ್ರಹ್ಮರಕೂಟ್ಲು ಟೋಲ್‌ ಗೇಟ್ ನಲ್ಲಿ ನಡೆದ ಹಲ್ಲೆಯ ಬಳಿಕ ನಿಲುಗಡೆ ಆಗಿದ್ದ ಟೋಲ್‌ ಸಂಗ್ರಹವನ್ನು ಎ. 20ರಂದು ಬೆಳಗ್ಗೆ 10 ಗಂಟೆಯಿಂದ ಪೊಲೀಸ್‌ ರಕ್ಷಣೆಯಲ್ಲಿ ಆರಂಭಿಸಲಾಗಿದೆ. ಶುಕ್ರವಾರ ರಾತ್ರಿ ಟೋಲ್‌ ಸಂಗ್ರಹ ಸಿಬ್ಬಂದಿಗಳ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಟೋಲ್‌ ಸಂಗ್ರಹ ನಿಲುಗಡೆಗೊಂಡಿತ್ತು. ಮುಂಜಾನೆ ಊರಿನ ಜನತೆ ಘಟನೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ರಾಷ್ಟ್ರೀಯ ಹೆದ್ದಾರಿ ಇಲಾಖೆ ಪೊಲೀಸ್‌ ರಕ್ಷಣೆ ಒದಗಿಸಿಯಾದರೂ ಟೋಲ್‌ ಸಂಗ್ರಹ ನಡೆಯಬೇಕು ಎಂಬ […]