ಶ್ರೀಕೃಷ್ಣ ಮಠದಲ್ಲಿ ‘ಚೂರ್ಣೋತ್ಸವ’ ಸಂಪನ್ನ
Monday, January 16th, 2023
ಉಡುಪಿ : ಶ್ರೀಕೃಷ್ಣ ಮಠದ ಸಪ್ತೋತ್ಸವವು ರವಿವಾರ ಹಗಲಿನ ರಥೋತ್ಸವ ‘ಚೂರ್ಣೋತ್ಸವ’ ದೊಂದಿಗೆ’ ಸಂಪನ್ನಗೊಂಡಿತು. ಬೆಳಗ್ಗೆ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರನ್ನು ಬ್ರಹ್ಮರಥದಲ್ಲಿರಿಸಿ, ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಸಹಿತ ವಿವಿಧ ಮಠಾಧೀಶರು ಭಕ್ಷ್ಯ, ಫಲವಸ್ತು, ತೆಂಗಿನಕಾಯಿಗಳನ್ನು ಸಮರ್ಪಿಸಿ ಮಂಗಳಾರತಿ ಬೆಳಗಿದರು. ಪರ್ಯಾಯ ಶ್ರೀಗಳ ಸಹಿತ ವಿವಿಧ ಮಠಾಧೀಶರು ಬ್ರಹ್ಮರಥವನ್ನು ಎಳೆಯುವ ಮೂಲಕ ಹಗಲು ತೇರಿನ ಮೆರವಣಿಗೆ ಪ್ರಾರಂಭಗೊಂಡಿತು. ಬಳಿಕ ವಸಂತ ಮಂಟಪದಲ್ಲಿ ಓಕುಳಿ ಪೂಜೆ, ಅಷ್ಟಾವಧಾನ ಸೇವೆ, ಅಷ್ಟ ಮಠದ ಸ್ವಾಮೀಜಿಯವರಿಗೆ ಪರ್ಯಾಯ ಮಠದಿಂದ ಗೌರವ […]