ಬಜಗೋಳಿ ಜಿನಬಿಂಬ ಪ್ರತಿಷ್ಠಾ ಮಹೋತ್ಸವ ದಲ್ಲಿ ಮಿಂಚಿದ ಮಕ್ಕಿಮನೆ ಕಲಾವೃಂದ

Monday, November 27th, 2023
makkimane

ಬಜಗೋಳಿ : ಭಗವಾನ್ 1008 ಶ್ರೀ ಅನಂತನಾಥ ಸ್ವಾಮಿ ಅಪ್ಪಾಯಿ ಬಸದಿ ಯ ಧಾಮಸಂಪ್ರೋಕ್ಷಣಾ ಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವದಲ್ಲಿ ಸುದೇಶ್ ಜೈನ್ ಮಕ್ಕಿಮನೆ ನೇತೃತ್ವದ ಮಕ್ಕಿಮನೆ ಕಲಾವೃಂದ ಬಳಗದಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ಜರಗಿತು. ಶ್ರೀಪ್ರಮಯಿ ಜೈನ್ ಮೂಡುಬಿದಿರೆ ಹಾಗೂ ಸೌಜನ್ಯ ಜೈನ್ ಮೂಡುಬಿದಿರೆ ನಿರೂಪಿಸಿದರು. ಈ ಸಂದರ್ಭದಲ್ಲಿ ಸುಮ್ಮಗುತ್ತು ಜಯವರ್ಮ ಹೆಗ್ಡೆ, ಶ್ವೇತಾ ಜೈನ್ ಮೂಡುಬಿದಿರೆ,,ಭಗವಾನ್ ಜೈನ್,ಅಪ್ಪಾಯಿಗುತ್ತು ಪ್ರಥ್ವಿ ರಾಜ್ ಹೆಗ್ಡೆ,ಭರತ್ ರಾಜ್ ಜೈನ್ ಮುಡಾರು, ಸನತ್ ಕುಮಾರ್ ಜೈನ್ ಮಂಗಳೂರು ಮೊದಲಾದವರು ಉಪಸ್ಥಿತರಿದ್ದರು.

ಮಂಗಳೂರು ಕದ್ರಿ ಗಣೇಶೋತ್ಸವ: ಮಕ್ಕಿಮನೆ ಕಲಾವೃಂದ ಬಳಗದಿಂದ ನೃತ್ಯ ವೈವಿಧ್ಯ

Wednesday, September 20th, 2023
ಮಂಗಳೂರು ಕದ್ರಿ ಗಣೇಶೋತ್ಸವ: ಮಕ್ಕಿಮನೆ ಕಲಾವೃಂದ ಬಳಗದಿಂದ ನೃತ್ಯ ವೈವಿಧ್ಯ

ಮಂಗಳೂರು: ಕದರಿಕಾ ಚಾರಿಟೇಬಲ್ ಟ್ರಸ್ಟ್( ರಿ) ಹಾಗೂ ಕದ್ರಿ ಕ್ರಿಕೆಟರ್ಸ್( ರಿ) ಆಶ್ರಯದಲ್ಲಿ ಮಂಗಳೂರು ಕದ್ರಿ ಮೈದಾನ ದಲ್ಲಿ ನಡೆದ ಪ್ರಥಮ ವರ್ಷದ ಸಾರ್ವಜನಿಕ ಗಣೇಶೋತ್ಸವದಲ್ಲಿ ಮಂಗಳವಾರ ರಾತ್ರಿ ಸುದೇಶ್ ಜೈನ್ ಮಕ್ಕಿಮನೆ ನೇತೃತ್ವದ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ನೃತ್ಯ ವೈವಿಧ್ಯ ಹಾಗೂ ಜಿಲ್ಲೆಯ ಸುಪ್ರಸಿದ್ಧ ಸಂಗೀತ ಕಲಾವಿದರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಜರಗಿತು . ಈ ಸಂದರ್ಭದಲ್ಲಿ ಕದರಿಕಾ ಚಾರಿಟೇಬಲ್ ಟ್ರಸ್ಟ್ ಹಾಗೂ ಕದ್ರಿ ಕ್ರಿಕೆಟರ್ಸ್ ನಾ ಸರ್ವ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು […]