ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಒಮನ್ ಪ್ರಜೆ, ಗಾಂಜಾ ಹಾಗೂ ಎಂಡಿಎಂಎ ವಶ

Monday, June 14th, 2021
omanian

ಮಂಗಳೂರು :  ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಒಮನ್ ಪ್ರಜೆ ಹಾಗೂ ಹಿಮಾಚಲ ಪ್ರದೇಶದ ಯುವಕನೊಬ್ಬನನ್ನು ಮಂಗಳೂರು ಪೊಲೀಸರು  ಬಂಧಿಸಿದ್ದಾರೆ. ಬಂಧಿತರನ್ನು ಒಮನ್ ಪ್ರಜೆ ಅಹ್ಮದ್ ಮುಸಬಾ ಅಲ್ ಮಹಾಮಾನಿ (34) ಹಾಗೂ ಹಿಮಾಚಲ ಪ್ರದೇಶದ ರಾಮ್ (22) ಎಂದು ಗುರುತಿಸಲಾಗಿದೆ. ಒಮನ್ ಪ್ರಜೆ ಅಹ್ಮದ್ ಮುಸಬಾ 6 ತಿಂಗಳ ಹಿಂದೆ ಗೋವಾಕ್ಕೆ ಟೂರಿಸ್ಟ್ ವೀಸಾದಲ್ಲಿ ಬಂದಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಆಗಮಿಸಿದ್ದ. ಈ ಮಧ್ಯೆ ನಗರದ ಹೊಟೇಲೊಂದರಲ್ಲಿ ಹಿಮಾಚಲ ಪ್ರದೇಶದ ರಾಮ್ ಜತೆ ಬಂಧಿಸಲಾಗಿದ್ದು, ಬಂಧಿತರಿಂದ ಎಂಡಿಎಂಎ […]

ಕುಸಿದು ಬಿದ್ದ ಬಿಎಸ್‌ವೈಗೆ ಹೃದಯಾಘಾತ!; ವೈರಲ್‌ ಆದ ಸುದ್ದಿ

Tuesday, December 19th, 2017
yedeyorappa

ಬೆಂಗಳೂರು: ‘ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಹೃದಯಾಘಾತವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎನ್ನುವ ಸುದ್ದಿ ಸೋಮಾವಾರ ಸಂಜೆಯಿಂದ ವಾಟ್ಸಪ್‌ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಸುಳ್ಳು ವೈರಲ್‌ ಆಗಿ ಹರಿದಾಡಿದೆ. ಈ ಬಗ್ಗೆ ಮಂಗಳವಾರ ಯಡಿಯೂರಪ್ಪ ಅವರ ಬಳಿ ಸುದ್ದಿಗಾರರು ಪ್ರಶ್ನಿಸಿದಾಗ’ ಏನ್ರಿ ನೀವು ಬರ್ದಿದ್ದೀರಾ… ಪ್ರತ್ಯಕ್ಷ ನೋಡ್ತಾ ಇದ್ದೀರಲ್ಲಾ’ ಎಂದರು. ‘ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ಚುನಾವಣಾ ಫ‌ಲಿತಾಂಶ ನೋಡುತ್ತಿದ್ದ ವೇಳೆ ಬಿಎಸ್‌ವೈ ಅವರು ಹೃದಯಾಘಾತದಿಂದ ಕುಸಿದು ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ’ ಎಂದು ಫೋಟೋ ಸಮೇತ […]

ಅಭಿವೃದ್ಧಿಗೆ ಜನರು ನೀಡಿದ ಉಡುಗೊರೆ… ಕರ್ನಾಟಕ ಚುನಾವಣೆ ಗೆಲ್ಲುವುದೇ ನಮ್ಮ ಗುರಿ: ಶಾ

Monday, December 18th, 2017
amit-shah

ನವದೆಹಲಿ: ಬಹು ನಿರೀಕ್ಷಿತ ಗುಜರಾತ್‌‌-ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಗೆಲುವು ದಾಖಲಿಸಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌‌ ಶಾ ಎರಡೂ ರಾಜ್ಯದ ಜನರಿಗೆ ಧನ್ಯವಾದ ಹೇಳಿದ್ದಾರೆ. ನವದೆಹಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಇದು ವಂಶವಾದ, ಜಾತೀವಾದದ ವಿರುದ್ಧದ ಗೆಲುವು. ದೇಶದ ಜನರು ಅಭಿವೃದ್ಧಿಗೆ ಮಣೆ ಹಾಕಿದ್ದಾರೆ. ಬಿಜೆಪಿ ಗೆಲುವು ಪ್ರಜಾಸತ್ತಾತ್ಮಕ ಗೆಲುವು. ಅದೇ ರೀತಿ ಕರ್ನಾಟಕದಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.