ಎಲ್ಲಾ ಧರ್ಮಗಳ ಸಾರ ಒಂದೇ-ಗಣೇಶ್ ಉಳ್ಳೋಡಿ

Tuesday, March 22nd, 2016
Janapadasiri

ಕುಂಬಳೆ: ವಿವಿಧ ಕಾರಣಗಳಿಂದ ನಮ್ಮ ನೆಲವನ್ನು ಬಿಟ್ಟು ಬೇರೆಡೆ ವಾಸಿಸುತ್ತಿದ್ದರೂ ಮೂಲವನ್ನು ಮರೆಯಬಾರದು. ವೈವಿಧ್ಯಮಯ ಜೀವನ ಶೈಲಿ,ಸಂಸ್ಕೃತಿಗಳು ಪ್ರಾಚೀನ ಕಾಲದಿಂದಲೇ ಒಗ್ಗಟ್ಟಾಗಿ ಬದುಕುತ್ತಿರುವ ಜಗತ್ತಿನ ಏಕೈಕ ರಾಷ್ಟ್ರವಾದ ನಮ್ಮಲ್ಲಿ ತಲಾಂತರದಿಂದಲೂ ಸಾಂಸ್ಕೃತಿಕ ಸಮಾನತೆಗಳು ಒಗ್ಗಟ್ಟಾಗಿ ನಿಲ್ಲಿಸಿವೆ.ಇದರ ಹಿಂದೆ ಎಲ್ಲಾ ಧರ್ಮಗಳ ಸಾರ ಒಂದೆನ್ನುವುದು ವೇದ್ಯವಾಗುತ್ತದೆಯೆಂದು ಬದಿಯಡ್ಕ ಸಮೀಪದ ಮಾನ್ಯ ಕೊರಗು ತನಿಯ ಸನ್ನಿಧಿಯ ಧರ್ಮದರ್ಶಿ ಗಣೇಶ ಉಳ್ಳೋಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ಮತ್ತು ಕೇರಳ ಕಾಸರಗೋಡು ಘಟಕ ಮತ್ತು ಮುಲುಂಡ್ ಫ್ರೆಂಡ್ಸ್ […]

ರೈತರಿಗೆ ಆತ್ಮಸ್ಥೈರ್ಯ ತುಂಬಲು ಸಾಂತ್ವನ ಯಾತ್ರೆ ’ಬದುಕು ಬೇಸಾಯ’

Sunday, August 2nd, 2015
Raita

ಮಂಗಳೂರು : ರಾಜ್ಯದ ವಿವಿದೆಡೆ ರೈತರ ಅತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಯಲು ರೈತರಲ್ಲಿ ಬದುಕುವ ಧೈರ್ಯ ತುಂಬಲು ಆಗಸ್ಟ್ 3ರಿಂದ ರಾಜ್ಯದಲ್ಲಿ ’ಬದುಕು ಬೇಸಾಯ’ ಎಂಬ ಹೆಸರನಲ್ಲಿ ರೈತರ ಸಾಂತ್ವನ ಯಾತ್ರೆಯನ್ನು ಕೈಗೊಳ್ಳಲಾಗುತ್ತಿದೆ. ರೈತರ ಮನ: ಪರಿವರ್ತನೆ ಮಾಡಲು ಹಾಗೂ ಅವರಲ್ಲಿ ಆತ್ಮಸ್ಥೈರ್ಯ ತುಂಬುವುದು ಇದರ ಉದ್ದೇಶವಾಗಿದೆ. ಬದುಕಿನಲ್ಲಿ ಬರುವ ಕಷ್ಟಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ. ಸಮಸ್ಯೆಯನ್ನು ಮೆಟ್ಟಿ ನಿಂತರೆ ಬದುಕು ಹಸನಾಗುತ್ತದೆ ಎನ್ನುವ ಜಾಗೃತಿಯನ್ನು ವಿವರಿಸುವುದು ಯಾತ್ರೆಯ ಉದ್ದೇಶ. ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯು […]