ಯಕ್ಷಗಾನ ಕಲಾವಿದರು ನಿವೃತ್ತರಾದ ಬಳಿಕ ಗಂಭೀರವಾಗಿ ಚಿಂತಿಸಬೇಕಿದೆ : ಪಟ್ಲ ಸತೀಶ ಶೆಟ್ಟಿ

Monday, April 18th, 2016
Patla Satish

ಕುಂಬಳೆ: ವೃತ್ತಿ ಕಲಾವಿದರಾಗಿ ದುಡಿಯುತ್ತಿರುವ ಅಸಂಖ್ಯಾತ ಯಕ್ಷಗಾನ ಕಲಾವಿದರು ವೃತ್ತಿಯಿಂದ ನಿವೃತ್ತರಾದ ಬಳಿಕ ಅವರ ಬದುಕಿಗೆ ಏನಿದೆಯೆಂಬುದನ್ನು ಗಂಭೀರವಾಗಿ ಚಿಂತಿಸಬೇಕಿದೆ. ಯಕ್ಷಗಾನ ಕಲಾರಂಗದಲ್ಲಿ ಅಪ್ರತಿಮ ಸಾಧನೆ ಮೆರೆದು ವೈಶಿಷ್ಟ್ಯಪೂರ್ಣ ಕೊಡುಗೆ ನೀಡಿದ ಕಲಾವಿದರಿಗೆ ರಂಗದಿಂದ ಹೊರತುಪಡಿಸಿ ಅಗತ್ಯ ಸ್ಪಂಧನೆಗಳು ಲಭಿಸದಿರುವುದು ದುರಂತ ಎಂದು ಖ್ಯಾತ ಭಾಗವತ,ಯಕ್ಷಧ್ರುವ ಪಟ್ಲ ಪೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಕುಂಬಳೆ ಸಮೀಪದ ಶೇಡಿಕಾವು ಪಾರ್ತಿಸುಬ್ಬ ಯಕ್ಷಗಾನ ಸಂಘದ 20ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಅಪರಾಹ್ನ ಶೇಡಿಕಾವು ಪಾರ್ತಿಸುಬ್ಬ ಸಭಾ […]

ಶೀಘ್ರ “ಬ್ಯಾರಿ ಸಂಚಾರಿ ಗ್ರಂಥಾಲಯ” ಸ್ಥಾಪನೆ

Friday, August 14th, 2015
Haneefa

ಮಂಗಳೂರು : ಬ್ಯಾರಿ ಭಾಷೆಯಲ್ಲಿ ಪ್ರಕಟಗೊಂಡ ಕೃತಿಗಳಿಗೆ ಮಾರುಕಟ್ಟೆ ಒದಗಿಸುವ ಮತ್ತು ಪ್ರಕಟಿತ ಎಲ್ಲ ಬ್ಯಾರಿ ಕೃತಿಗಳು, ಸಿ.ಡಿ.ಗಳು ಪ್ರತಿಯೊಬ್ಬ ಬ್ಯಾರಿ ಸಾಹಿತ್ಯಾಸಕ್ತರ ಮನೆ ಮನೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಶೀಘ್ರ ಬ್ಯಾರಿ ಸಂಚಾರಿ ಗ್ರಂಥಾಲಯ ಸ್ಥಾಪಿಸಲಾಗುವುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಹೇಳಿದ್ದಾರೆ. ಅಕಾಡಮಿಯ ಪ್ರಸಕ್ತ ತಂಡ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗುರುವಾರ ನಗರದಲ್ಲಿ ಹಮ್ಮಿಕೊಂಡ “ವಾರ್ಷಿಕ ಅವಲೋಕನ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಕಾಡಮಿಯ ಪ್ರಸಕ್ತ ಅವಧಿ […]