ಮಹಿಳೆಯನ್ನು ಕಡಿದ ಹಾವು ಅವರ ಅಂತ್ಯಸಂಸ್ಕಾರದ ದಿನವೂ ಬಂದಿತ್ತು !

Saturday, July 6th, 2024
ಮಹಿಳೆಯನ್ನು ಕಡಿದ ಹಾವು ಅವರ ಅಂತ್ಯಸಂಸ್ಕಾರದ ದಿನವೂ ಬಂದಿತ್ತು !

ಮಂಜೇಶ್ವರ : ಮಂಜೇಶ್ವರ ತಾಲೂಕಿನ ಕುರುಡುಪದವಿನಲ್ಲಿ ನಾಗರ ಹಾವು ಕಡಿತಕ್ಕೊಳಗಾಗಿ ಮೃತಪಟ್ಟ ಮಹಿಳೆಯ ಅಂತ್ಯ ಅಂತ್ಯಸಂಸ್ಕಾರ ಕ್ಕೆಂದು ಇಟ್ಟ ನೀರನ್ನು ಕುಡಿದು ಮನೆಯವರಲ್ಲಿ ಅಚ್ಚರಿ ಮೂಡಿಸಿದೆ. ಕುರುಡುಪದವಿನ ಪೈವಳಿಕೆ ಎಂಬಲ್ಲಿ ಜುಲೈ 4 ರಂದು ರಾತ್ರಿ 64 ವಯಸ್ಸಿನ ಚೋಮು ಎಂಬವರು ಹಾವುಕಡಿತಕ್ಕೊಳಗಾಗಿ ಮೃತಪಟ್ಟಿದ್ದರು. ಆಶ್ಚರ್ಯವೆಂದರೆ ಮರುದಿನ ಅವರ ಅಂತ್ಯಸಂಸ್ಕಾರದ ವಿಧಿಗೆ ಇಟ್ಟ ನೀರುನ್ನು ಕುಡಿಯುವ ಮೂಲಕ ಕಾಣಿಸಿಕೊಂಡು ಕಣ್ಮರೆಯಾಗಿದೆ. ಮಹಿಳೆಯ ಸಾವಿಗೆ ಕಾರಣವಾದ ನಾಗರ ಹಾವು ಮರುದಿನವೂ ಬಂದು ನೀರುಕುಡಿದಿರುವುದರ ಬಗ್ಗೆ ಮನೆಯವರಿಗೆ ಪ್ರಶ್ನಾರ್ಥಕವಾಗಿದೆ. ಅಂತ್ಯಸಂಸ್ಕಾರದ […]

ಆಸ್ಕರ್ ಫರ್ನಾಂಡಿಸ್ ಅಂತ್ಯಸಂಸ್ಕಾರ ಬೆಂಗಳೂರಿನಲ್ಲಿ, ಅಂತ್ಯಸಂಸ್ಕಾರಕ್ಕೆ ಆಗಮಿಸಲಿರುವ ಸೋನಿಯಾ ಗಾಂಧಿ

Tuesday, September 14th, 2021
Oscar Fernandes

ಮಂಗಳೂರು : ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಎರಡು ದಿನಗಳ ಬಳಿಕ ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ಹೇಳಿದೆ. ಪತ್ನಿ ಬ್ಲೋಸಂ ಫರ್ನಾಂಡಿಸ್ ಅವರಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವಂತೆ ಸೋನಿಯಾರಿಗೆ ಬ್ಲೋಸಂ ವಿನಂತಿಸಿದ್ದಾರೆ. ಆಸ್ಕರ್ ನಿಧನ ದೇಶಕ್ಕಾಗಿರುವ ನಷ್ಟ […]

ಪಂಚನಹಳ್ಳಿಯಲ್ಲಿ ನಡೆದ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅಂತ್ಯಕ್ರಿಯೆ

Tuesday, June 15th, 2021
sanchari Vijay

ಚಿಕ್ಕಮಗಳೂರು:   ಸ್ಯಾಂಡಲ್‍ವುಡ್ ನಟ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅಂತ್ಯಕ್ರಿಯೆ ಮಂಗಳವಾರ  ಅವರ ಸ್ವಗ್ರಾಮದಲ್ಲಿ  ಬಾಲ್ಯದ ಸ್ನೇಹಿತ ರಘು ಅವರ ತೋಟದಲ್ಲೇ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಿತು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿರುವ ಸ್ನೇಹಿತ ರಘು ಅವರ ತೋಟದಲ್ಲಿ ಕಪ್ಪೂರು ಶ್ರೀಗಳ ನೇತೃತ್ವದಲ್ಲಿ ವಿಜಯ್ ಸಹೋದರನಿಂದ ಅಂತಿಮ ವಿಧಿ-ವಿಧಾನಗಳನ್ನು ನಡೆಸಲಾಯಿತು. ಅಂತ್ಯಕ್ರಿಯೆ ಮೊದಲು ಪೊಲೀಸರು ಮೂರು ಸುತ್ತು ಕುಶಾಲು ತೋಪು ಸಿಡಿಸಿ ಸರ್ಕಾರಿ ಗೌರವ ಸಲ್ಲಿಸಿದರು. ಚಿಕ್ಕಂದಿನಲ್ಲೇ ಅಪ್ಪ-ಅಮ್ಮನನ್ನ ಕಳೆದುಕೊಂಡರೂ ಗ್ರಾಮದಲ್ಲೇ ಬೆಳೆದು ರಾಷ್ಟ್ರ […]

ಕರ್ನಾಟಕದ ಗಡಿಯೊಳಗೆ ಮೃತದೇಹಕ್ಕೆ ನೀಡದ ಅವಕಾಶ, ಚೆಕ್‌ ಪೋಸ್ಟ್‌ ಬಳಿ ಅಂತ್ಯಸಂಸ್ಕಾರ

Friday, May 29th, 2020
kogenahalli

ಬೆಳಗಾವಿ : ಮುಂಬಯಿ ನಗರದಲ್ಲಿ ನಡೆದ ಅಪಘಾತವೊಂದಿಗೆ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಕರ್ನಾಟಕದ ಗಡಿಯೊಳಗೆ ಬಿಡದಿದ್ದರಿಂದ ಮಹಾರಾಷ್ಟ್ರ ಗಡಿ ಬಳಿಯ ಕೊಗನೊಳ್ಳಿ ಚೆಕಪೋಸ್ಟ್‌ ಬಳಿಯ ಸರಕಾರಿ ಜಮೀನಿನಲ್ಲಿಯೇ ಅಂತ್ಯಸಂಸ್ಕಾರ ಮಾಡಿದ ಘಟನೆ ಮೆ.28 ರಂದು ಜರುಗಿದೆ. ಅಪಘಾತದಲ್ಲಿ ಮೃತಪಟ್ಟ ಬೈಲಹೊಂಗಲ ಲಿಂಗರಾಜು ಬಸವಪ್ರಭು (55) ಇವರ ಮೃತದೇಹವನ್ನು ಕರ್ನಾಟಕದ ಗಡಿಯೊಳಗೆ ಚೆಕ್‌ ಪೋಸ್ಟ್‌ ನಲ್ಲಿದ್ದ ಸಿಬ್ಬಂದಿ ಬಿಟ್ಟಿರಲಿಲ್ಲ. ಮುಂಬಯಿಯಿಂದ ಮೃತದೇಹವನ್ನು ಅವರ ಸ್ನೇಹಿತರು ಕಳಿಸಿದ್ದರು. ಸರಕಾರದ ಆದೇಶದಂತೆ ಕರ್ನಾಟಕದೊಳಗೆ ಮೃತದೇಹವನ್ನು ತರುವಂತಿಲ್ಲ, ಆದ್ದರಿಂದ ಸರಕಾರಿ ಜಮೀನಿನಲ್ಲಿ ಮೃತದೇಹದ […]

ಹುಟ್ಟೂರಿನಲ್ಲಿ ಕದ್ರಿ ಗೋಪಾಲನಾಥ್ ಅವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರ

Monday, October 14th, 2019
gopalnath

ಮಂಗಳೂರು : ವಿಶ್ವ ಪ್ರಸಿದ್ದ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರ ಇಂದು ಸಂಜೆ ಅವರ ಹುಟ್ಟೂರು ಬಂಟ್ವಾಳದ ಸಜಿಪದಲ್ಲಿ ನಡೆಯಲಿದೆ. ಇಂದು ಬೆಳಿಗ್ಗೆ 10.15ರಿಂದ 1.45ರವರೆಗೆ ಮಂಗಳೂರು ಪುರಭವನದಲ್ಲಿ ಸಾರ್ವಜನಿಕ ಅಂತಿಮ ದರ್ಶನ ನಡೆಯಿತು. ಕಲಾವಿದರು, ಜನಪ್ರತಿನಿಧಿಗಳು, ಚೆನ್ನೈ ನಿಂದ ಬಂದಿದ್ದ ಶಿಷ್ಯರು ಅಗಲಿದ ಮಹಾನ್ ಕಲಾವಿದನ ಅಂತಿಮ ದರ್ಶನ ಮಾಡಿದರು. ಸಂಜೆ ನಾಲ್ಕು ಗಂಟೆಗೆ ಬಂಟ್ವಾಳ ತಾಲೂಕಿನ ಸಜಿಪ ಮಿತ್ತಮಜಲಿನಲ್ಲಿ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಅಂತಿಮ ವಿಧಿವಿಧಾನವನ್ನು ಜೋಗಿ […]

ಉಳ್ಳಾಲದಲ್ಲಿ ಮಸಣದಲ್ಲಿ ಸತ್ತ ಹಸುಗೂಸು ಅಳಲು ಆರಂಭಿಸಿದ ವಿಸ್ಮಯಕಾರಿ ಘಟನೆ

Saturday, August 23rd, 2014
infant

ಮಂಗಳೂರು: ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿರುವ ಸ್ಮಶಾನದಲ್ಲಿ ಹಸುಗೂಸೊಂದರ ಅಂತ್ಯಸಂಸ್ಕಾರವನ್ನು ಮಾಡಲು ತಯಾರು ನಡೆಸಲಾಗುತ್ತಿತ್ತು. ಅಂತ್ಯಸಂಸ್ಕಾರ ವಿಧಿವಿಧಾನಗಳನ್ನು ನಡೆಸಿ ದಫನ ಮಾಡಲು ಮುಂದಾಗ ಮಗು ಆಳಲು ಆರಂಭಿಸಿದ ವಿಸ್ಮಯಕಾರಿ ಘಟನೆ ಉಳ್ಳಾಲದಲ್ಲಿ ಶನಿವಾರ ನಡೆದಿದೆ. ದೇರಳಕಟ್ಟೆಯಲ್ಲಿರುವ ಆಸ್ಪತ್ರೆಯೊಂದರಲ್ಲಿ ಹೆರಿಗೆಗೆಂದು ಕುಮುಟದ ಗೌರಿ ಎಂಬವರು ಕಳೆದ 15 ದಿನಗಳ ಹಿಂದೆ ದಾಖಲಾಗಿದ್ದರು. ಇವರಿಗೆ ಸೀಸೆರಿಯನ್ ಮಾಡಿದ ವೈದ್ಯರು ಮಗುವನ್ನು ಹೊರ ತೆಗೆದಿದ್ದರಲ್ಲದೆ ಹಸುಗೂಸಿನ ಚೇತರಿಕೆಗಾಗಿ ವಿಷೇಶ ಕೋಣೆಯಲ್ಲಿ ಇರಿಸಲಾಗಿತ್ತು. ಶನಿವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಗೌರಿಯ ಗಂಡ ಪುಷ್ಪರಾಜ್‌ಗೆ ಕರೆ […]

ಫ್ರೆಂಚ್‌ ಸೈನಿಕರ ಗುಂಡಿಗೆ ಬಲಿಯಾದ ಕೃಷ್ಣಯ್ಯ ಮೊಗವೀರರ ಅಂತ್ಯಸಂಸ್ಕಾರ

Tuesday, April 2nd, 2013
Krishnaiah Mogaveera

ಕುಂದಾಪುರ : ಮಧ್ಯ ಆಫ್ರಿಕಾದ ಬಾಂಗ್ವೆ ವಿಮಾನ ನಿಲ್ದಾಣದಲ್ಲಿ ಫ್ರೆಂಚ್‌ ಸೈನಿಕರ ಗುಂಡಿಗೆ ಬಲಿಯಾದ ಕುಂದಾಪುರ ಬಳ್ಕೂರಿನ ಕೃಷ್ಣಯ್ಯ ಮೊಗವೀರ ಅವರ ಪಾರ್ಥಿವ ಶರೀರ ಶರೀರವನ್ನು ಸೋಮವಾರ ಮಧ್ಯಾಹ್ನ ಹುಟ್ಟೂರಿಗೆ  ತರಲಾಯಿತು. ಫ್ರಾನ್ಸ್‌ ರಾಯಭಾರ ಕಚೇರಿಯ ಎರಿಕ್‌ ಲೆವೆರ್ಟೊ ಅವರು  ಫ್ರೆಂಚ್‌ ಸೈನಿಕರ ಗುಂಡಿಗೆ ಬಲಿಯಾದ ಕೃಷ್ಣಯ್ಯ ಮೊಗವೀರ ಅವರ ಪಾರ್ಥಿವ ಶರೀರ ಹುಟ್ಟೂರು ತಲುಪುವ ಮುನ್ನ  ಬಳ್ಕೂರಿನ ಮೃತರ ಮನೆಗೆ ಆಗಮಿನಿಸಿ ಫ್ರೆಂಚ್‌ ಸೈನಿಕರಿಂದ ಆದ ಈ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿದರು. ಊರಿನ ಸಾವಿರಾರು ಮಂದಿ ಕೃಷ್ಣಯ್ಯ ಅವರ […]