ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದ ಇಬ್ಬರು ಸಂಸದರು ಹೇಳಿದ್ದೇನು ಗೊತ್ತಾ ?

Tuesday, August 24th, 2021
narendra Khalsa Singh

ಹೊಸದಿಲ್ಲಿ: ಅಫ್ಘಾನಿಸ್ತಾನದಲ್ಲಿ ಸುಮಾರು 150 ಭಾರತೀಯರು ಅಪಹರಣಕ್ಕೊಳಗಾಗಿ ಬಿಡುಗಡೆಯಾದ ಭಯಾನಕ ಘಟನೆಯ ಬಳಿಕ 168 ಮಂದಿ ಪ್ರಯಾಣಿಕರನ್ನು ಹೊತ್ತ ವಾಯುಪಡೆ ವಿಮಾನ ಭಾರತಕ್ಕೆ ತಲುಪಿದೆ. ಇದರಲ್ಲಿ 107 ಮಂದಿ ಭಾರತೀಯ ಪ್ರಜೆಗಳಿದ್ದರೆ, ಇನ್ನು ಇಬ್ಬರು ಅಫ್ಘನ್ ಸೆನೆಟರ್‌ಗಳು ಹಾಗೂ 24 ಸಿಖ್ಖರು ಸೇರಿದ್ದಾರೆ. ಅಫ್ಘಾನಿಸ್ತಾನದ ಸನ್ನಿವೇಶದ ಕುರಿತು ಸಿಖ್ ಸಂಸದ ನರೇಂದರ್ ಸಿಂಗ್ ಖಾಲ್ಸಾ ಮಾತನಾಡುತ್ತಾ ‘ನನಗೆ ತೀವ್ರ ಅಳು ಬರುತ್ತಿದೆ. ಕಳೆದ 20 ವರ್ಷಗಳಲ್ಲಿ ಕಟ್ಟಿದ ಪ್ರತಿಯೊಂದೂ ಈಗ ನಾಶವಾಗಿದೆ. ಅಲ್ಲಿ ಈಗ ಶೂನ್ಯವಷ್ಟೇ ಇದೆ’ […]

ಅಮೆರಿಕ ಸೇನೆ ಹಿಂದೆ ಸರಿಯುತ್ತಿದ್ದಂತೆ, ಅಫ್ಘಾನಿಸ್ತಾನ ಈಗ ತಾಲಿಬಾನ್ ಉಗ್ರರ ವಶವಾಗುತ್ತಿದೆ

Thursday, July 15th, 2021
Afghan

ಕಾಬುಲ್:  ಅಮೆರಿಕ ಸೇನೆಯು ಅಫ್ಘಾನಿಸ್ತಾನದಿಂದ ಹಿಂದೆ ಸರಿಯುತ್ತಿದ್ದಂತೆ ತಾಲಿಬಾನ್ ಉಗ್ರ ಸಂಘಟನೆ ಪೂರ್ತಿ ದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಾರಂಭಿಸಿದೆ. ಈಗಾಗಲೇ ದೇಶದ ಶೇ. 85ಕ್ಕೂ ಅಧಿಕ ಭಾಗ ತಾಲಿಬಾನ್ ಆಡಳಿತಕ್ಕೆ ಮರಳಿದೆ ಎಂದು ಹೇಳಲಾಗಿದೆ. ನಿಜಕ್ಕೂ ಆ ತಾಲಿಬಾನ್ ಆಡಳಿತ ಬಂದರೆ ಉಗ್ರ ಚಟುವಟಿಕೆಗಳಿಗೆ ಕಡಿವಾಣ ಇಲ್ಲದಂತೆ ಆಗಿ, ವಿಶ್ವಕ್ಕೆ ದೊಡ್ಡ ಹೊಡೆತ ಬೀಳಲಿದೆ. ತಾಲಿಬಾನ್ 1990ರಲ್ಲಿ ಆಂತರಿಕ ಸಂಘರ್ಷ ತೀವ್ರವಾದ ಹೊತ್ತಿನಲ್ಲಿ ಕಂದಹಾರ್‌ನಲ್ಲೇ ಜನ್ಮತಾಳಿದ ಸಂಘಟನೆ. ಸಂಘಟನೆ ತನ್ನದೇ ಆದ ಉಗ್ರ ನಿಯಮಗಳನ್ನು ಹೊಂದಿದೆ. 2001ರಲ್ಲಿ ವಿಶ್ವ […]

ಇಸ್ಲಾಮಿಕ್ ಸ್ಟೇಟ್ ಸೇರಿದ 4 ಕೇರಳ ಮಹಿಳೆಯರನ್ನು ಹಿಂದಿರುಗಿ ಬರಲು ಭಾರತ ಅನುಮತಿ ನಿರಾಕರಣೆ

Saturday, June 12th, 2021
Indian-Women

ನವದೆಹಲಿ : ಖೋರಾಸಾನ್ ಪ್ರಾಂತ್ಯದ (ಐಎಸ್‌ಕೆಪಿ) ಇಸ್ಲಾಮಿಕ್ ಸ್ಟೇಟ್ ಸೇರಲು ತಮ್ಮ ಗಂಡಂದಿರೊಂದಿಗೆ ತೆರಳಿ ಅಫ್ಘಾನಿಸ್ತಾನ ಜೈಲಿನಲ್ಲಿ ಬಂಧಿತರಾದ ನಾಲ್ವರು ಭಾರತೀಯ ಮಹಿಳೆಯರು ದೇಶಕ್ಕೆ ಮರಳಲು ಅವಕಾಶವಿಲ್ಲ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲಿ ಬಂಧಿತರಾದ ಮಹಿಳೆಯರು, ಎಲ್ಲರೂ ಕೇರಳದವರು, 2016-18ರಲ್ಲಿ ಅಫ್ಘಾನಿಸ್ತಾನದ ನಂಗರ್ಹಾರ್ಗೆ ಪ್ರಯಾಣ ಬೆಳೆಸಿದರು. ಅಫ್ಘಾನಿಸ್ತಾನದಲ್ಲಿ ನಡೆದ ಬೇರೆ ಬೇರೆ ದಾಳಿಯಲ್ಲಿ ಅವರ ಗಂಡಂದಿರು ಕೊಲ್ಲಲ್ಪಟ್ಟರು. 2019 ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಅಫ್ಘಾನಿಸ್ತಾನ ಅಧಿಕಾರಿಗಳ ಮುಂದೆ ಶರಣಾದ ಸಾವಿರಾರು ಇಸ್ಲಾಮಿಕ್ […]

ಭಾರತ ಜಗತ್ತಿನ 3ನೇ ಅಪಾಯಕಾರಿ ದೇಶ..!

Tuesday, March 4th, 2014
India-is-a-dangerous

ನವದೆಹಲಿ: ಭಾರತ ಅಫ್ಘಾನಿಸ್ತಾನಕ್ಕಿಂತ ಅಪಾಯಕಾರಿ ದೇಶವಾಗಿದ್ದು, ನೀವು ಯಾವುದೇ ಕ್ಷಣದಲ್ಲೂ ಬೇಕಾದರು ಬಾಂಬ್ ಸ್ಫೋಟದಿಂದ ಸಾಯಬಹುದು. ಹೀಗಂತ ಸರ್ಕಾರಿ ದಾಖಲೆಗಳೇ ಹೇಳುತ್ತಿವೆ. ಭಾರತ ಜಗತ್ತಿನಲ್ಲಿ ಮೂರನೇ ಅಪಾಯಕಾರಿ ದೇಶವಾಗಿದ್ದು, ಜಗತ್ತಿನಲ್ಲಿ ಅತಿ ಹೆಚ್ಚು ಬಾಂಬ್ ಸ್ಫೋಟ ಸಂಭವಿಸುವ ದೇಶಗಳಲ್ಲಿ ಭಾರತ, ಇರಾಖ್ ಮತ್ತು ಪಾಕಿಸ್ತಾನದ ನಂತರದ ಸ್ಥಾನದಲ್ಲಿದೆ. ಯುದ್ಧದಿಂದ ತತ್ತರಿಸಿರುವ ಅಫ್ಘಾನಿಸ್ತಾನ ಮತ್ತು ಸಿರಿಯಾ ಸಹ ಭಾರತಕ್ಕಿಂತ ಉತ್ತಮ ಎಂದು ರಾಷ್ಟ್ರೀಯ ಬಾಂಬ್ ಅಂಕಿ-ಅಂಶ ಕೇಂದ್ರ(ಎನ್‌ಬಿಡಿಸಿ) ಬಿಡುಗಡೆ ಮಾಡಿರುವ ವರದಿ ಹೇಳುತ್ತಿದೆ. ಎನ್‌ಬಿಡಿಸಿ ಬಿಡುಗಡೆ ಮಾಡಿರುವ ವರದಿಯ […]