ಬಿರುಕು ಬಿಟ್ಟ ಮರವೂರು ಸೇತುವೆ ದುರಸ್ತಿ ಜುಲೈಯಲ್ಲಿ ಪೂರ್ಣ

Friday, June 25th, 2021
Maravooru Bridge

ಮಂಗಳೂರು : ಇತ್ತೀಚೆಗೆ ಬಾರಿ ಮಳೆಯಿಂದ ಬಿರುಕು ಬಿಟ್ಟಿರುವ ಮರವೂರು ಸೇತುವೆಯ ದುರಸ್ತಿ ಕಾರ್ಯವನ್ನು ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ್‌ ಕೋಟ್ಯಾನ್‌‌ ಅವರು ಜೂನ್‌ 24ರ ಗುರುವಾರ ಪರಿಶೀಲಿಸಿದರು. ದುರಸ್ತಿ  ಕೆಲಸ ಭರದಿಂದ ನಡೆಯುತ್ತಿದ್ದು, ಗುತ್ತಿಗೆದಾರರು ಹಾಗೂ ಎಂಜಿನಿಯರ್‌‌ ಜುಲೈಯಲ್ಲಿ ಕೊನೆಯಲ್ಲಿ ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸೇತುವೆಯ ದುರಸ್ತಿಯಾದ ಕೂಡಲೇ ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುವುದು. ಪಕ್ಕದಲ್ಲಿ ಹೊಸ ಸೇತುವೆಯ ಕಾಮಗಾರಿಯೂ ನಡೆಯುತ್ತಿದ್ದು, ಪೂರ್ಣವಾದ ಬಳಿಕ ವಾಹನ ಸಂಚಾರಕ್ಕೆ ಮುಕ್ತಗೊಳಿಸಿ, ಹಳೆಯ ಸೇತುವೆಯ ಸಂಪೂರ್ಣ ದುರಸ್ತಿ ಮಾಡುವ ಯೋಜನೆ ಇದೆ” ಎಂದು […]

ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಮೀನು ಹಾಗೂ ಮೀನಿನ ಉತ್ಪನ್ನ ಸರಬಾರಜು : ಸಚಿವ ಎಸ್. ಅಂಗಾರ

Tuesday, February 2nd, 2021
Sangara

ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ ಹಾಗೂ ತದಡಿ ಮೀನುಗಾರಿಕೆ ಬಂದರಿನಲ್ಲಿ ಪರ್ಸೀನ್ ಬೋಟುಗಳು ಹಿಡಿದು ತಂದ ಮೀನನ್ನು ನಿಗಮದ ಮುಖಾಂತರ ಮಾರಾಟ ಮಾಡಿ ಮೀನುಗಾರರಿಗೆ ಉತ್ತಮ ಬೆಲೆಯನ್ನು ನೀಡಲು ಕ್ರಮವಹಿಸಲಾಗುತ್ತಿದೆ ಎಂದು ಸಚಿವ ಎಸ್. ಅಂಗಾರ ತಿಳಿಸಿದರು. ಸೋಮವಾರ ನಡೆದ ವಿಧಾನಸಭೆಯ ಕಾರ್ಯಕಲಾಪದಲ್ಲಿ ಶಾಸಕ ಉಮಾನಾಥ್ ಎ ಕೋಟ್ಯಾನ್ (ಮೂಡಬಿದ್ರೆ) ಅವರು ಕೇಳಿದ ಮೀನುಗಾರಿಕಾ ವಲಯವನ್ನು ಅಭಿವೃದ್ಧಿಗೊಳಿಸುವ ಹಾಗೂ ಮತ್ಸ್ಯಾಹಾರವನ್ನು ಜನಪ್ರಿಯಗೊಳಿಸಲು ಮೀನುಗಾರಿಕೆ ಅಭಿವೃದ್ಧಿ ನಿಗಮವು ಹಮ್ಮಿಕೊಂಡಿರುವ ಕ್ರಿಯಾ ಯೋಜನೆಗಳ ಕುರಿತ ಪ್ರಶ್ನೆಗೆ […]

ನಿಮಗೆ ಊಟ-ಅನ್ನಾ ಬೇಕಾದರೆ ಪ್ರಮಾಣಿಕವಾಗಿ ಕೆಲಸ ಮಾಡಿ, ಉಮಾನಾಥ್ ಕೋಟ್ಯಾನ್ ಎಚ್ಚರಿಕೆ

Monday, July 1st, 2019
Umanath-Kotian

ಮೂಡುಬಿದಿರೆ : ಸರಕಾರದ ಸವಲತ್ತುಗಳು ಜನರಿಗೆ ಸಿಗಬೇಕಾದರೆ ನಿಮ್ಮ ಕೈಕಾಲು ಇಡಿಯಬೇಕಾ?, ನಾಡ ಕಛೇರಿಯಲ್ಲಿ ಏನುಬೇಕೋ ಅದನ್ನು ಪಡಕೊಳ್ಳುವುದು ಜನರ ಹಕ್ಕು, ಮಗುವಿನ ಜನನ ಸರ್ಟಿಫಿಕೇಟು ಕೊಡಲು ಒಂದು ತಿಂಗಳು ಬೇಕಾ?, ನಿಮಗೆ ಊಟ ಅನ್ನಾ ಬೇಕಾದರೆ ಪ್ರಮಾಣಿಕವಾಗಿ ಕೆಲಸ ಮಾಡಿ ಎಂದು ಮೂಡಬಿದಿರಿ ನಾಡಕಛೇರಿ ಸಿಬ್ಬಂದಿಗಳಿಗೆ ಶಾಸಕ ಉಮಾನಾಥ್ ಕೋಟ್ಯಾನ್ ಎಚ್ಚರಿಸಿದರು. ಮೂಡುಬಿದಿರೆ ನಾಡಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಶಾಸಕ ಉಮಾನಾಥ್ ಕೋಟ್ಯಾನ್ ಆಕ್ರೋಶಗೊಂಡಿದ್ದಾರೆ. ಕಛೇರಿ ವೇಳೆ ಫೋನ್ ತಂದರೆ ಎಚ್ಚರಿಗೆ ಎಂದು ಅವಾಜ್ ಹಾಕಿದ್ದಾರೆ. […]

ಮೂಡುಬಿದಿರೆ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ 25 ಸಾವಿರ ಮತಗಳಿಂದ ಜಯಭೇರಿ..!

Tuesday, May 15th, 2018
umanath-kotian

ಮೂಡುಬಿದಿರೆ: ರಾಜ್ಯದಲ್ಲಿ ಬಿಜೆಪಿಗೆ ಮೊದಲ ಜಯ ಲಭಿಸಿದೆ. ಮೂಡುಬಿದಿರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ ಜಯಭೇರಿ ಬಾರಿಸಿದ್ದಾರೆ. ತನ್ನ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಅಭಯಚಂದ್ರ ಜೈನ್ ಅವರ ವಿರುದ್ಧ 25 ಸಾವಿರಕ್ಕೂ ಅಧಿಕ ಮತಗಳಿಂದ ಉಮಾನಾಥ್ ಕೋಟ್ಯಾನ್ ಜಯಗಳಿಸಿದ್ದಾರೆ.

ಮಿಥುನ್ ರೈಗೆ ಟಿಕೆಟ್ ನಿರಾಕರಣೆ, ಯುವ ಕಾಂಗ್ರೆಸ್ ಮುಖಂಡರಿಂದ ಬಂಡಾಯ

Tuesday, April 17th, 2018
mithun-rai

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಭದ್ರ ಕೋಟೆಯಂತಿದ್ದ ಮುಲ್ಕಿ-ಮೂಡಬಿದ್ರೆ ಕ್ಷೇತ್ರದಲ್ಲಿ ಬಂಡಾಯ ಸ್ಪೋಟಗೊಂಡಿದೆ. ಮುಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ಶಾಸಕ ಅಭಯಚಂದ್ರ ಜೈನ್ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಯುವ ಕಾಂಗ್ರೆಸ್ ಮುಖಂಡರು ತಿರುಗಿ ಬಿದ್ದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕೈ ಪಾಳಯದಲ್ಲಿ ಭಿನ್ನಮತ ಆರಂಭವಾಗಿದೆ‌. ಮೂಡಬಿದ್ರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಗೆ ಟಿಕೆಟ್ ಕೈ ತಪ್ಪಿದೆ. ಈ ಹಿನ್ನೆಲೆಯಲ್ಲಿ ಯೂತ್ ಕಾಂಗ್ರೆಸ್ ಘಟಕ ಸಿಡಿದೆದ್ದಿದೆ. ದಕ್ಷಿಣ ಕನ್ನಡ […]