ಆಗಸ್ಟ್ 3ಕ್ಕೆ ಅಂತಾರಾಷ್ಟ್ರೀಯ ಲಯನ್ಸ್ ಜಿಲ್ಲೆ 317 ಡಿ ಸಂಪುಟ ಪದಗ್ರಹಣ ಸಮಾರಂಭ

Thursday, August 1st, 2024
loins district

ಮಂಗಳೂರು: ಅಂತರಾಷ್ಟ್ರೀಯ ಲಯನ್ಸ್ ಜಿಲ್ಲೆ 317-ಡಿ ಇದರ ವರ್ಷ 2024-25 ರ ಸಾಲಿನ ಸಂಪುಟ ಪದಗ್ರಹಣ ಸಮಾರಂಭ “ಕಾವೇರಿ” ಶನಿವಾರದಂದು ಎಕ್ಕೂರಿನ ಇಂಡಿಯಾನಾ ಕನ್ವೆನ್ಸನ್ ಸೆಂಟರ್ ನಲ್ಲಿ ಜರುಗಲಿರುವುದು ಎಂದು ಲಯನ್ಸ್ ಜಿಲ್ಲೆ ಮಂಗಳೂರು 317-ಡಿ ಇದರ ರಾಜ್ಯಪಾಲೆ ಬಿ.ಎಂ ಭಾರತಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ರಾಜ್ಯಪಾಲರಾದ ಬಿ.ಎಂ.ಭಾರತಿ ಅವರು ಜಿಲ್ಲಾ ಪದಗ್ರಹಣದ “ಕಾವೇರಿ” ಅಧ್ಯಕ್ಷತೆ ವಹಿಸಲಿರುವರು ಹಾಗೂ ಉದ್ಘಾಟನೆಯನ್ನು ನೆರವೇರಿಸಲಿರುವರು. ಮುಖ್ಯ ಅತಿಥಿಯಾಗಿ ಹಾಗೂ ಪದಗ್ರಹಣ ಅಧಿಕಾರಿಯಾಗಿ ಅಂತರಾಷ್ಟ್ರೀಯ ಎಲ್.ಸಿ.ಐ.ಎಫ್ ಇದರ ಟ್ರಸ್ಟೀ ಹಾಗೂ ಮಾಜಿ […]

ಕಾವೇರಿ ನೀರು : ಬೆಂಗಳೂರಿನಲ್ಲಿ ಕರ್ನಾಟಕ ಬಂದ್ ಗೆ ಉತ್ತಮ ಪ್ರತಿಕ್ರಿಯೆ, 144 ಸೆಕ್ಷನ್​ ಜಾರಿ

Friday, September 29th, 2023
cauvery-protest

ಬೆಂಗಳೂರು: ಕರ್ನಾಟಕದ ದಕ್ಷಿಣ ಭಾಗದ ಜಿಲ್ಲೆಗಳ ಜನರ ಜೀವನಾಡಿ ಕಾವೇರಿ ನೀರನ್ನು ರಾಜ್ಯದಲ್ಲಿ ತೀವ್ರ ಬರಗಾಲದ ಮಧ್ಯೆ ತಮಿಳು ನಾಡಿಗೆ ಹರಿಸುವುದನ್ನು ವಿರೋಧಿಸಿ ಇಂದು ಶುಕ್ರವಾರ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರುನಾಡು ಬಂದ್ ಗೆ ಬೆಳಗ್ಗೆಯಿಂದಲೇ ಪ್ರತಿಕ್ರಿಯೆ ಕಂಡುಬಂತು. ರಾಜಧಾನಿ ಬೆಂಗಳೂರಲ್ಲಿ 144 ಸೆಕ್ಷನ್​ ಜಾರಿ ಮಾಡಲಾಗಿದೆ. ಈಗಾಗಲೆ ಪೊಲೀಸರು ನಗರದ ಸೂಕ್ಷ್ಮ ಮತ್ತು ಪ್ರಮುಖ ಪ್ರದೇಶಗಳಲ್ಲಿ ಕಾವಲಿಗೆ ಇಳಿದಿದ್ದಾರೆ. ಬೆಂಗಳೂರಿನ ವಾಣಿಜ್ಯ, ವ್ಯಾಪಾರ ಚಟುವಟಿಕೆಗಳ ಕೇಂದ್ರ ಭಾಗವಾಗಿರುವ ಕೆಆರ್ ಮಾರುಕಟ್ಟೆಯಲ್ಲಿ ವಿವಿಧ ಸಂಘಟನೆಗಳು ವಿಭಿನ್ನ […]

ತೀಥ೯ ಸ್ವರೂಪಿಣಿಯಾಗಿ ಉಕ್ಕಿ ಹರಿದ ಕಾವೇರಿ ಜೀವ ನದಿ

Saturday, October 17th, 2020
Tala Kavery

ಮಡಿಕೇರಿ : ಕಾವೇರಿ ಶನಿವಾರ ಬೆಳಗ್ಗೆ ಕನ್ಯಾ  ಲಗ್ನದಲ್ಲಿ 7 ಗಂಟೆ 04 ನಿಮಿಷಕ್ಕೆ ಬ್ರಹ್ಮಗಿರಿ ತಪ್ಪಲಿನ ಪವಿತ್ರ ತಾಣದಲ್ಲಿ ತೀಥ೯ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ್ದಾಳೆ. ಗೋಪಾಲ್ ಕೃಷ್ಣ ಆಚಾರ್ ನೃತೃತ್ವದಲ್ಲಿಬ್ರಹ್ಮಕುಂಡಿಕೆಯ ಬಳಿ ವಿವಿಧ ಪೂಜಾ ಕೈಂಕರ್ಯ ನೆರವೇರಿದ್ದು,  ಈ ಬಾರಿ ಕೊರೊನಾ ಹಿನ್ನೆಲೆ ತಲಕಾವೇರಿ ಕ್ಷೇತ್ರದಲ್ಲಿ ಕೇವಲ 500-600 ಭಕ್ತರಿಂದ ಮಾತ್ರ ಕಾವೇರಿ ತೀರ್ಥೋದ್ಭವ ದಶ೯ನಕ್ಕೆ ಅವಕಾಶ ನೀಡಲಾಗಿತ್ತು. ತೀರ್ಥೋದ್ಭವದ ವೇಳೆ ಜೈಜೈ ಮಾತಾ,ಕಾವೇರಿ ಮಾತೆ ಎಂಬ ಉದ್ಘೋಷದ ಕೇಳಿ ಬಂತು. ಭಾಗಮಂಡಲದ ಭಗಂಡೇಶ್ವರ ದೇಗುಲದಲ್ಲೂ […]

ಸಿಎಂ ಬಿ.ಎಸ್​ ಯಡಿಯೂರಪ್ಪರವರ 78ನೇ ಜನ್ಮದಿನದ ಸಂಭ್ರಮ : ಕಾವೇರಿ ಮತ್ತು ಧವಳಗಿರಿ ನಿವಾಸಕ್ಕೆ ಬಿಗಿ ಭದ್ರತೆ

Thursday, February 27th, 2020
cm

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಇಂದು 78ನೇ ವರ್ಷದ ಜನ್ಮದಿನ. ವಿಜೃಂಭಣೆಯಿಂದ ಬಿಎಸ್ವೈ ಹುಟ್ಟುಹಬ್ಬವನ್ನು ಆಚರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಸಿಎಂ ಯಡಿಯೂರಪ್ಪ ಇಂದು ಕಾವೇರಿ ನಿವಾಸಕ್ಕೆ ಆಗಮಿಸುವ ಹಿನ್ನೆಲೆ, ಕಾವೇರಿ ನಿವಾಸಕ್ಕೆ ಬಿಗಿಭದ್ರತೆ ಒದಗಿಸಲಾಗಿದೆ. ಹುಟ್ಟುಹಬ್ಬದ ದಿನದಂದೇ ಸಿಎಂ ತಮ್ಮ ಅಧಿಕೃತ ನಿವಾಸವಾದ ಕಾವೇರಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಹೀಗಾಗಿ, ಈಗಾಗಲೇ ಸಿಎಂ ಕುಟುಂಬಸ್ಥರು ಸರ್ಕಾರಿ ಬಂಗಲೆಯಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಇನ್ನು, ಕಾವೇರಿ ನಿವಾಸದ ಎದುರು ಸಿಎಂ ಹುಟ್ಟುಹಬ್ಬಕ್ಕೆ ಶುಭ ಕೋರುವ ಫ್ಲೆಕ್ಸ್ ಗಳು ರಾರಾಜಿಸುತ್ತಿವೆ. ಬೆಳಿಗ್ಗೆಯಿಂದಲೂ […]

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲು ಜಲಾಶಯ ಕಟ್ಟಿದಲ್ಲ: ಸಿಎಂ ಕುಮಾರಸ್ವಾಮಿ

Tuesday, August 14th, 2018
kumarswamy-3

ಮಂಗಳೂರು: ಕಾವೇರಿ ನದಿ ನೀರು ಬಿಡಲು ತಮಿಳುನಾಡು ಸರ್ಕಾರ ಕಾವೇರಿ ನ್ಯಾಯಧಿಕರಣದಲ್ಲಿ ಅಫಿಡವಿಟ್ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆಯಲ್ಲಿ ಪ್ರತಿಕ್ರಿಯಿಸಿದ ‌ಮುಖ್ಯಮಂತ್ರಿ ಕುಮಾರಸ್ವಾಮಿ, ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲು ಜಲಾಶಯ ಕಟ್ಟಿದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾವೇರಿ ನದಿಯಿಂದ ‌ಹೆಚ್ಚುವರಿ‌‌ ನೀರು ಬಿಡಲಾಗುತ್ತಿದೆ. ಆದರೆ ತಮಿಳುನಾಡು ಸರ್ಕಾರ ನ್ಯಾಯಾಧಿಕರಣದಲ್ಲಿ ಕಾಲ ಕಾಲಕ್ಕೆ ನೀರು ಬಿಡುವಂತೆ ವಾದ ಮಾಡಿದೆ. ರಾಜ್ಯದ ಜನರ ತೆರಿಗೆಯಿಂದ ಜಲಾಶಯ ಕಟ್ಟಲಾಗಿದೆ. ತಮಿಳುನಾಡು ಅನಗತ್ಯ ಸಂಘರ್ಷಕ್ಕೆ ಅವಕಾಶ ಮಾಡಬಾರದು ಎಂದರು. […]

ಕಾವೇರಿ ವಿಚಾರದಲ್ಲಿ ಎಲ್ಲರೂ ಚರ್ಚೆ ಮಾಡಿ ಒಮ್ಮತದ ತೀರ್ಮಾನಕ್ಕೆ ಬರುತ್ತೇವೆ: ಬಿ.ಎಸ್.ಯಡಿಯೂರಪ್ಪ

Saturday, June 30th, 2018
yedyurappa

ಬೆಂಗಳೂರು: ನಾಡಿನ ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಕೀಯ ಮಾಡೋದಿಲ್ಲ. ಕಾವೇರಿ ವಿಚಾರದಲ್ಲಿ ಎಲ್ಲರೂ ಚರ್ಚೆ ಮಾಡಿ ಒಮ್ಮತದ ತೀರ್ಮಾನಕ್ಕೆ ಬರುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಕಾವೇರಿ ನದಿ ನೀರು ಹಂಚಿಕೆಗೆ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಸಂಬಂಧ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಅವರು ಮಾತನಾಡಿದರು. ನಾವು ರಾಜ್ಯ ಸರ್ಕಾರದ ಪರ ಇದ್ದೇವೆ. ಸರ್ಕಾರದ ತೀರ್ಮಾನಕ್ಕೆ ಬದ್ಧ. ಇಲ್ಲಿ ರಾಜಕೀಯ ಮಾಡುವ ಪ್ರಶ್ನೆಯೇ ಇಲ್ಲ. ರಾಜ್ಯದ ಹಿತದೃಷ್ಟಿಯಿಂದ […]

ತಲಕಾವೇರಿ: ನಿಗದಿತ ಸಮಯಕ್ಕೂ ಒಂದು ನಿಮಿಷ ಮೊದಲು ಉಕ್ಕಿದ ಕಾವೇರಿ

Wednesday, October 18th, 2017
thalakaveri

ಮಡಿಕೇರಿ: ಸೂರ್ಯ ನೆತ್ತಿಯ ಮೇಲಿದ್ದರೂ ಬೆಟ್ಟದ ಮೇಲಿನ ಮಂಜು ಮಾತ್ರ ಮರೆಗೆ ಸರಿದಿರಲಿಲ್ಲ. ಮಳೆಯೂ ಸಣ್ಣದಾಗಿ ಹನಿಯಲು ಆರಂಭಿಸಿತು. ಮಳೆಗೆ ಇಳೆ ತಂಪಾಗಿ ಇಡೀ ಬ್ರಹ್ಮಗಿರಿ ಶ್ರೇಣಿ ಹಸಿರು ಉಡುಗೆಯನ್ನು ತೊಟ್ಟಂತೆ ನಳನಳಿಸುತ್ತಿತ್ತು. ಒಂದೆಡೆ ಮಳೆಯ ಆಹ್ಲಾದಕರ ಅನುಭವ; ಮತ್ತೊಂದೆಡೆ ಭಕ್ತರ ಕಲರವ. ಜೀವನದಿ ಕಾವೇರಿ ಮಂಗಳವಾರ ನಿಗದಿತ ಸಮಯಕ್ಕೂ ಒಂದು ನಿಮಿಷ ಮೊದಲು ಮಧ್ಯಾಹ್ನ 12.32ಕ್ಕೆ ಸರಿಯಾಗಿ ತೀರ್ಥರೂಪಿಣಿಯಾಗಿ ಭಕ್ತರಿಗೆ ಕಾಣಿಸಿಕೊಂಡಳು. ನದಿಯ ಉಗಮ ಸ್ಥಳವಾದ ತಲಕಾವೇರಿಯಲ್ಲಿ ಅಪರೂಪದ ಸನ್ನಿವೇಶಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು. ವರ್ಷಕ್ಕೊಮ್ಮೆ ಪವಿತ್ರ […]

ಕೊಡಗಿನ ಜೀವನದಿ ಕಾವೇರಿ ಪವಿತ್ರ ತೀರ್ಥೋದ್ಭವ

Tuesday, October 18th, 2016
ಕೊಡಗಿನ ಜೀವನದಿ ಕಾವೇರಿ ಪವಿತ್ರ ತೀರ್ಥೋದ್ಭವ

ಮಡಿಕೇರಿ: ದಕ್ಷಿಣ ಗಂಗೆ ಎಂದೇ ಕರೆಯಲ್ಪಡುವ ಕೊಡಗಿನ ಜೀವನದಿ ಕಾವೇರಿ ಪವಿತ್ರ ತೀರ್ಥೋದ್ಭವ ಸೋಮವಾರ ಮುಂಜಾನೆ 6.28ಕ್ಕೆ ಆಯಿತು. ಭಕ್ತರ ಜಯಘೋಷದ ನಡುವೆ ಬ್ರಹ್ಮಕುಂಡಿಕೆಯಿಂದ ಪವಿತ್ರ ತೀರ್ಥ ಉಕ್ಕಿ ಹರಿಯಿತು. ಈ ಬಾರಿ ಒಂದು ನಿಮಿಷ ಮೊದಲು ಕಾವೇರಿ ತೀರ್ಥೋದ್ಭವವಾಗಿದೆ. ಕಾವೇರ ಮುನಿಯ ತಪಸ್ಸಿನಿಂದಾಗಿ ಜನ್ಮ ತಳೆದ ಕಾವೇರಿ ಕನ್ನಡ ನಾಡಿನ ಜೀವನದಿ. ತಲಕಾವೇರಿ ಕ್ಷೇತ್ರದ ಬ್ರಹ್ಮಗಿರಿಯ ಬುಡದಲ್ಲಿ ಪುಟ್ಟದಾದ ಒಂದು ಕುಂಡಿಕೆಯಲ್ಲಿ ನದಿಯ ರೂಪದಲ್ಲಿ ಹರಿದು ಬರುವ ಈಕೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕನ್ನಿಕೆ ಮತ್ತು […]

ಸೆ. 30 ರ ವರೆಗೆ 6000 ಕ್ಯೂಸೆಕ್ ನೀರು: ಸುಪ್ರೀಂ ಕೋರ್ಟ್ ಆದೇಶ ವಿರೋಧಿಸಿ ಕನ್ನಡ ಪರ ಸಂಘಟನೆಗಳ ಉಗ್ರ ಪ್ರತಿಭಟನೆ

Wednesday, September 28th, 2016
kaveri-protest

ಮೈಸೂರು: ಸೆ. 30 ರ ವರೆಗೆ ನಿತ್ಯ 6000 ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ವಿರೋಧಿಸಿ ಮಂಗಳವಾರ ನಗರದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಉಗ್ರ ಪ್ರತಿಭಟನೆ ನಡೆಸಿದವು. ನಗರದ ನ್ಯಾಯಾಲಯದ ಎದುರು ಕನ್ನಡ ಚಳವಳಿಗಾರರ ಸಂಘದಿಂದ ಖಾಲಿ ತಟ್ಟೆ, ಪಾತ್ರೆ, ಲೋಟಗಳನ್ನಿಡಿದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಮ್ಮ ರಾಜ್ಯದ ಶತ್ರುವಿನಂತೆ ವರ್ತಿಸುತ್ತಿದ್ದಾರೆ. ಕಾವೇರಿ ಭಾಗದ ಜಲಾಶಯಗಳಲ್ಲಿ ಕುಡಿಯಲು ನೀರಿಲ್ಲ. ಆದರೂ ಸುಪ್ರೀಂ ಕೋರ್ಟ್‌ ಮೂಲಕ ಸಾಂಬಾ ಬೆಳೆಗೆ ನೀರು ಕೇಳುತ್ತಿರುವುದು […]

ಕಾವೇರಿ ಕುರಿತ ಸುಪ್ರೀಂ ಕೋರ್ಟ್ ತೀರ್ಪು ತರ್ಕಹೀನ ಮತ್ತು ಅವೈಜ್ಞಾನಿಕ: ಬಿಎಸ್‌ವೈ

Tuesday, September 13th, 2016
b-s-yeddyurappa

ಬೆಂಗಳೂರು: ಕಾವೇರಿ ನದಿ ನೀರು ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ತರ್ಕಹೀನ ಮತ್ತು ಅವೈಜ್ಞಾನಿಕ. ತೀರ್ಪಿನಿಂದ ಕರ್ನಾಟಕ ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದು, ತೀರ್ಪು ಅರ್ಥವಾಗದ ಸಂಗತಿಯಾಗಿದೆ ಎಂದು ಪ್ರಕಟಣೆಯಲ್ಲಿ ಯಡಿಯೂರಪ್ಪ ತಿಳಿಸಿದ್ದಾರೆ. ಎರಡೂ ರಾಜ್ಯಗಳ ವಸ್ತು ಸ್ಥಿತಿ ಅರಿಯಲು ತಜ್ಞರ ತಂಡ ಕಳುಹಿಸಬೇಕಿತ್ತು. ಅದ್ಯಾವುದನ್ನೂ ಮಾಡದೆ ತೀರ್ಪು ನೀಡಿರುವುದು ಸರಿಯಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಆದ್ಯ ಕ್ರಮ ಕೈಗೊಳ್ಳಬೇಕು. ಕನ್ನಡಿಗರು […]