ಪುತ್ತೂರು : ಕೊಡಿಪ್ಪಾಡಿ ಶೂಟೌಟ್ ಪ್ರಕರಣ; ಓರ್ವ ಪೊಲೀಸರ ವಶಕ್ಕೆ

Wednesday, November 27th, 2019
Abdul-Kader

ಪುತ್ತೂರು : ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಕಲ್ಲಂದಡ್ಕ ಎಂಬಲ್ಲಿ ಮಂಗಳವಾರ ಸಂಜೆ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಪುತ್ತೂರು ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ. ಕಲ್ಲಂದಡ್ಕ ನಿವಾಸಿ ಅಬ್ದುಲ್ ಖಾದರ್(36) ಎಂಬವರ ಮೇಲೆ ಮಂಗಳವಾರ ಸಂಜೆ ಕಾರಿನಲ್ಲಿ ಬಂದ ತಂಡವೊಂದು ಗುಂಡಿನ ದಾಳಿ ನಡೆಸಿತ್ತು. ಈ ವೇಳೆ ಖಾದರ್‌ರ ಎದೆ ಭಾಗಕ್ಕೆ ಗುಂಡು ತಗುಲಿದೆ. ಗಾಯಾಳು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣದ ತನಿಖೆಗೆ ಪುತ್ತೂರು ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಇದೀಗ […]

ಫತ್ವಾ ಯಾರ ಮೇಲೂ ಹೇರುವುದಿಲ್ಲ: ಪಳ್ಳಿ ಉಸ್ತಾದ್

Thursday, February 6th, 2014
AB-Ibrahim

ಮಂಗಳೂರು: ಪುತ್ತೂರು ಕೊಡಿಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫತ್ವಾ ಹೊರಡಿಸಿದ ಧರ್ಮಗುರುವನ್ನು ಜಿಲ್ಲಾಧಿಕಾರಿ ಆದೇಶದಂತೆ ಶಾಲೆಗೆ ಕರೆಸಿ ಕ್ಷೇತ್ರ ಶಿಕ್ಷಣಾಧಿಕಾರಿ, ಅಧಿಕೃತವಾಗಿ ಹೇಳಿಕೆ ಪಡೆದಿದ್ದಾರೆ. ಈ ನಡುವೆ ಕನ್ನಡಪ್ರಭ ಜತೆ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಶಾಲೆಯಲ್ಲಿ ಎಲ್ಲರಿಗೂ ಮನವರಿಕೆ ಮಾಡಿ ಪ್ರಕರಣವನ್ನು ಸೌಹಾರ್ದಯುತವಾಗಿ ಪರಿಹರಿಸುವುದಾಗಿ ತಿಳಿಸಿದರು.  ಕನ್ನಡಪ್ರಭದಲ್ಲಿ ಬುಧವಾರ ‘ಮುಸ್ಲಿಂ ಹೆಣ್ಣುಮಕ್ಕಳ ನೃತ್ಯಕ್ಕೆ ಫತ್ವಾ ಅಡ್ಡಿ’ ವಿಶೇಷ ವರದಿ ಪ್ರಕಟವಾಗಿತ್ತು. ಈ ವರದಿ ಪ್ರಸ್ತಾಪಿಸಿದ ಜಿಲ್ಲಾಧಿಕಾರಿ, ಪತ್ರಿಕೆಯಲ್ಲಿ ವರದಿ ಪ್ರಕಟವಾಗಿರುವುದನ್ನು ನೋಡಿದೆ. ಸಾಹಿತಿಗಳು, ಪ್ರಗತಿ […]