ಕ್ಯಾಂಪ್ಕೊ ದಿಂದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

Sunday, August 15th, 2021
Campco 2021 August

ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಕ್ಯಾಂಪ್ಕೊ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ

Tuesday, June 15th, 2021
campco

ಮಂಗಳೂರು :  ಅಡಿಕೆ ಮತ್ತು ಕೊಕ್ಕೋ ಬೆಳೆಗಾರರ ಸಂಕಷ್ಟ ಸಮಯದಲ್ಲಿ ರೈತರ ಬೆನ್ನೆಲುಬಾಗಿ ನಿಂತ ಕ್ಯಾಂಪ್ಕೊ ಕೋವಿಡ್ ಸಂಕಷ್ಟ ಕಾಲದಲ್ಲಿ ಕೂಡ ರೈತರಿಗೆ ನೆರವಾಗಿ ಯೋಗ್ಯ ಬೆಲೆಯನ್ನು ನೀಡಿ ಅಡಿಕೆ ಖರೀದಿಸುವುದರಲ್ಲಿ ಯಶಸ್ವಿ ಆಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಶಂಕರ ನಾರಾಯಣ ಭಟ್ ಖಂಡಿಗೆ ಅವರು ತಿಳಿಸಿದರು. ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ನ ಸಹಯೋಗದೊಂದಿಗೆ ಪಾವೂರು, ವರ್ಕಾಡಿ ಯಲ್ಲಿ ಕಾರ್ಯಾರಂಭಿಸಿದ ನೂತನ ಅಡಿಕೆ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಇದೀಗ ಸಂಸ್ಥೆಯ ಸಕ್ರಿಯ […]

ಕಕ್ಕೆಪದವಿನಲ್ಲಿ ಕ್ಯಾಂಪ್ಕೊ ಶಾಖೆ ಆರಂಭ

Thursday, February 13th, 2020
kakkepadavu

ಮಂಗಳೂರು : ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊದ ನೂತನ ಅಡಿಕೆ ಖರೀದಿ ಕೇಂದ್ರವು ಬಂಟ್ವಾಳ ತಾಲೂಕಿನ ಕಕ್ಕೆಪದವು ಶ್ರೀ ಪಂಚದುರ್ಗಾ ದೇವಸ್ಥಾನ ರಸ್ತೆಯ ಪಂಚಾಕ್ಷರಿ ಕಟ್ಟಡದಲ್ಲಿ ಇಂದು ಶುಭಾರಂಭಗೊಂಡಿತು. ಈ ಪ್ರದೇಶದ ಅಡಿಕೆ ಕೃಷಿಕರಿಗೆ ತಮ್ಮ ಬೆಳೆಗೆ ಸ್ಥಳೀಯವಾಗಿ ಉತ್ತಮ ಮಾರುಕಟ್ಟೆಯ ಕೊರತೆಯಿದ್ದು, ಇಲ್ಲಿ ಕ್ಯಾಂಪ್ಕೊ ಶಾಖೆಯನ್ನುತೆರೆಯಬೇಕೆಂಬ ಕೂಗು ಬಹುದಿನಗಳಿಂದ ಕೃಷಿಕ ವಲಯದಲ್ಲಿ ಕೇಳಿಬಂದಿತ್ತು. ಇದೀಗ ಸಂಸ್ಥೆಯು ತನ್ನ ನೂತನ ಖರೀದಿ ಕೇಂದ್ರವನ್ನುಇಲ್ಲಿ ಸ್ಥಾಪಿಸಿದ್ದು, ಅಡಿಕೆಖರೀದಿಯನ್ನು ಆರಂಭಿಸಿದೆ.    

ಬರ್ಮಾ ಅಡಿಕೆ: ಕೃಷಿಕರಿಗೆ ಜಾಗೃತರಾಗುವಂತೆ ಕ್ಯಾಂಪ್ಕೊ ಮನವಿ

Friday, February 1st, 2019
SR-Sathishchandra

ಮಂಗಳೂರು  : ದೇಶದೊಳಕ್ಕೆ ಅಕ್ರಮವಾಗಿ ಅಡಿಕೆ ಆಮದಾಗುತ್ತಿರುವುದು ಈಗ ಮತ್ತೆ ಸುದ್ದಿಯಾಗುತ್ತಿದೆ. ವಿಶೇಷವಾಗಿ, ಕಡಿಮೆ ಬೆಲೆಗೆ ಲಭ್ಯವಾಗುತ್ತಿರುವ ಬರ್ಮಾದೇಶದ್ದೆಂದು ಹೇಳಲಾಗುತ್ತಿರುವ ಕಳಪೆ ಗುಣಮಟ್ಟದ ಅಡಿಕೆ ಕಾನೂನು ಬಾಹಿರವಾಗಿ ಆಮದಾಗುತ್ತಿದ್ದು, ಸ್ಥಳೀಯ ವ್ಯಾಪಾರಿಗಳೂ, ಕೆಲವು ಕೃಷಿಕರೂ ಇದರಲ್ಲಿ ಶಾಮೀಲಾಗಿರುವುದು ವರದಿಯಾಗಿದೆ. ಉತ್ತಮಗುಣಮಟ್ಟದ ದೇಶೀಯ ಅಡಿಕೆಯೊಂದಿಗೆ, ಈ ಕಳಪೆ ಗುಣಮಟ್ಟದ ವಿದೇಶೀ ಅಡಿಕೆ ಕಲಬೆರೆಕೆಯಾಗಿ ಅಡಿಕೆ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡಿ ಬೆಲೆಯ ಕುಸಿತಕ್ಕೆ ನೇರ ಕಾರಣವಾಗುತ್ತಿರುವುದು ತಿಳಿದು ಬಂದಿದೆ. ಈ ಅಕ್ರಮ ಆಮದು, ತೆರಿಗೆ ತಪ್ಪಿಸುವ ವ್ಯವಹಾರವಾಗಿದ್ದು […]

ಪುತ್ತೂರುನಲ್ಲಿ ’ಕ್ಯಾಂಪ್ಕೊದ ಬೃಹತ್ ಗೋದಾಮು ನಿರ್ಮಾಣಕ್ಕೆ ಭೂಮಿ ಪೂಜೆ

Tuesday, January 8th, 2019
Campco

ಪುತ್ತೂರು :  ಇಲ್ಲಿನ ಕಾವು ಪ್ರದೇಶದಲ್ಲಿ, ಕ್ಯಾಂಪ್ಕೊ ತನ್ನ ಸ್ವಂತ ನಿವೇಶನದಲ್ಲಿ ಅತ್ಯಾಧುನಿಕವಾದ ಬೃಹತ್ ಗೋದಾಮು ನಿರ್ಮಿಸಲು ಸಂಕಲ್ಪಸಿದ್ದು ಅದರ ಅಂಗವಾಗಿ ಭೂಮಿ ಪೂಜೆ ಕಾರ್ಯ ಮಂಗಳವಾರ  ನೆರವೇರಿತು. 1.31 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಸುಮಾರು 24.5 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತವಾದ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಬೃಹತ್ ಗೋದಾಮು ಕಾವಿನಲ್ಲಿ ನಿರ್ಮಾಣಗೊಳಲ್ಲಿದ್ದು, ಅಲ್ಲಿ ಅಡಕೆ, ರಬ್ಬರ್ ಹಾಗೂ ಕಾಳುಮೆಣಸು ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ಶೇಖರಣೆಗೆ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಈ ಸುಸಜ್ಜಿತ ಆಧುನಿಕ ವ್ಯವಸ್ಥೆಗಳಿಂದ ಸಂಸ್ಥೆಯ ಕಾರ್ಯಕ್ಷಮತೆ ವೃದ್ಧಿಗೊಂಡು ಸದಸ್ಯರಿಗೆ […]

ಗುಜರಾತಿನ ಸೂರತ್‌ನಲ್ಲಿ ಕ್ಯಾಂಪ್ಕೊ ಮಾರಾಟ ಕೇಂದ್ರ ಆರಂಭ

Tuesday, May 22nd, 2018
campco

ಮಂಗಳೂರು: ಕರ್ನಾಟಕ ಮತ್ತು ಕೇರಳದಲ್ಲಿ ಕೃಷಿಕರು ಬೆಳೆಯುವ ಅಡಿಕೆ ಉತ್ತರ ಭಾರತದಲ್ಲಿ ಬಹುಬೇಡಿಕೆಯ ವಸ್ತುವಾಗಿದೆ. ವಿಶೇಷವಾಗಿ, ಉತ್ತಮ ಗುಣಮಟ್ಟದ ಚಾಲಿ (ಬಿಳಿ) ಅಡಿಕೆಗೆ ಗುಜರಾತ್ ರಾಜ್ಯ ಯೋಗ್ಯ ಮಾರುಕಟ್ಟೆಯನ್ನು ಒದಗಿಸುತ್ತಿದೆ. ಗುಜರಾತಿನ ಅಹಮದಾಬಾದ್ ಮತ್ತು ರಾಜಕೋಟ್ ನಗರಗಳಲ್ಲಿ ಈಗಾಗಲೇ ಮಾರಟ ಕೇಂದ್ರಗಳನ್ನು ಹೊಂದಿರುವ ಕ್ಯಾಂಪ್ಕೊ, ಗ್ರಾಹಕರ ಬೇಡಿಕೆಗನುಸಾರವಾಗಿ ಇದೀಗ ಆ ರಾಜ್ಯದಲ್ಲಿ ಮೂರನೇ ಮಾರಾಟ ಕೇಂದ್ರವನ್ನು ಸೂರತ್ ನಗರದಲ್ಲಿ ಆರಂಭಿಸಿದೆ. ಗುಜರಾತಿನ ಎರಡನೇ ದೊಡ್ಡ ನಗರವಾಗಿರುವ ಸೂರತ್, ವಜ್ರ ಹಾಗೂ ಜವಳಿ ಉದ್ಯಮಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಕ್ಯಾಂಪ್ಕೊ […]

ಅಡಕೆ ಚಹಾಗೆ ರಾಷ್ಟ್ರೀಯ ಮನ್ನಣೆ

Saturday, March 3rd, 2018
camco-ltd

ಮಂಗಳೂರು: ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಆರೋಪದ ನಡುವೆಯೇ ಅಡಕೆ ಚಹಾ ರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ. ಪ್ರತಿಷ್ಠಿತ ಇಂಡಿಯನ್ ಕೌನ್ಸಿಲ್ ಆಫ್ ಫುಡ್ ಆ್ಯಂಡ್ ಅಗ್ರಿಕಲ್ಚರ್ ಸಂಸ್ಥೆಯು ಅಡಕೆ ಚಹಾವನ್ನು ಈ ವರ್ಷದ ಉತ್ತಮ ಅಗ್ರಿಕಲ್ಚರ್ ಸ್ಟಾರ್ಟ್‌ಅಪ್ ಉತ್ಪನ್ನ ಎಂದು ಘೋಷಿಸಿದೆ. ಈ ಹಿಂದೆ ಅಡಕೆ ಚಹಾಕ್ಕೆ ಮೇಕ್ ಇನ್ ಇಂಡಿಯಾ ಪ್ರಶಸ್ತಿ ದೊರೆತಿದ್ದು, ಈಗ ಮತ್ತೆ ರಾಷ್ಟ್ರೀಯ ಪ್ರಶಸ್ತಿ ದೊರತಿದೆ. ಅಡಕೆಯಲ್ಲಿರುವ ಆರೋಗ್ಯದಾಯಕ ಅಂಶಗಳನ್ನು ಗುರುತಿಸಿ ಅಡಕೆ ಚಹಾವನ್ನು ಸಂಶೋಧಿಸುವ ಮೂಲಕ, ಅಡಕೆಯ ಮಾನ ಸಮ್ಮಾನಗಳ […]