ಉಡುಪಿ ಜಿಲ್ಲೆ ಸೋಮವಾರ ಅನ್‌ಲಾಕ್, ಮಾರ್ಗಸೂಚಿಗಳ ವಿವರ ಇಲ್ಲಿದೆ ನೋಡಿ

Saturday, June 12th, 2021
Udupi DC

ಉಡುಪಿ  :  ರಾಜ್ಯದ ಆನ್ ಲಾಕ್ ಜಿಲ್ಲೆಗಳಲ್ಲಿ ಉಡುಪಿ ಜಿಲ್ಲೆಯೂ ಒಂದಾಗಿದೆ.  ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹತೋಟಿಗೆ ಬಂದಿದ್ದು ಜೂನ್ 14ರಿಂದ ಅನ್‌ಲಾಕ್ ಅವಧಿಯಲ್ಲಿ ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಿರುವ ಚಟುವಟಿಕೆಗಳು ಮಾತ್ರ ನಡೆಯಲು ಅನುಮತಿ ನೀಡಿ, ಮಾರ್ಗಸೂಚಿಗಳ ಉಲ್ಲಂಘನೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳು ವಂತೆ ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಗಳು ಮತ್ತು ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದ್ದಾರೆ. ಶನಿವಾರ ಜಿಲ್ಲೆಯ ತಹಶೀಲ್ದಾರ್ ಹಾಗೂ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ […]

ಉಡುಪಿ ಜಿಲ್ಲೆಯಲ್ಲಿ 16 ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆ

Tuesday, June 8th, 2021
udupi Lock Down

ಉಡುಪಿ : ಜಿಲ್ಲೆಯಲ್ಲಿ ಮತ್ತೆ 16 ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಕಾರ್ಕಳ ತಾಲೂಕಿನ ಬೆಳ್ಮಣ್, ಮಿಯಾರ್, ಪಳ್ಳಿ, ಕುಕ್ಕುಂದೂರ್, ನಲ್ಲೂರು, ಮರ್ಣೆ ಬೈಂದೂರು ತಾಲ್ಲೂಕಿನ ಶಿರೂರ್, ಜಡ್ಕಲ್, ನಾಡಾ, ಕುಂದಾಪುರ ತಾಲೂಕಿನ ಗಂಗೊಳ್ಳಿ, ಆಲೂರು ಕಾಪು ತಾಲೂಕಿನ ಬೆಳ್ವೆ, ಶಿರ್ವ ಗ್ರಾಮ ಪಂಚಾಯತಿ ಬ್ರಹ್ಮಾವರ ತಾಲ್ಲೂಕಿನ ಕೊಕ್ಕರ್ಣೆ‌, ಅವರ್ಸೆ ಮತ್ತು ಹೆಬ್ರಿ ತಾಲೂಕಿನ ವರಂಗ ಗ್ರಾಮ ಪಂಚಾಯತಿ ಜೂನ್ 10ರ ಗುರುವಾರದಿಂದ ಜೂನ್ […]

ಉಡುಪಿ ಜಿಲ್ಲೆಯಲ್ಲಿ ಜೂ.7ರ ವರೆಗೆ ಮದುವೆಗೆ ಅನುಮತಿ ಇಲ್ಲ

Monday, May 24th, 2021
Udupi-DC

ಉಡುಪಿ :   ಮೇ 25ರಿಂದ ಜೂ.7ರ ವರೆಗೆ  ಉಡುಪಿ ಜಿಲ್ಲೆಯಲ್ಲಿ ಮದುವೆಗೆ ಅನುಮತಿ ನೀಡುವುದಿಲ್ಲ. ಈವರೆಗೆ ಅನುಮತಿ ನೀಡಿದ ಮದುವೆಗಳು ಮಾತ್ರ ನಡೆಯಲಿವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಸ್ತುವಾರಿ ಸಚಿವರೊಂದಿಗೆ ನಡೆಸಿದ ವೀಡಿಯೊ ಕಾನ್ಫರೆನ್ಸ್ ನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಮದುವೆಯಿಂದ ಕೊರೋನ ಸೋಂಕು ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿಈ ನಿರ್ಧಾರ ಕೈಗೊಳ್ಳಲಾಗಿದೆ.  ಮದುವೆ ಆಗಲು ನಿರ್ಧಾರ ಮಾಡಿದವರು ಅದನ್ನು ಮುಂದೂಡಬೇಕು. ಸಾರ್ವಜನಿಕರು ಸಹಕಾರ ನೀಡಬೇಕು. ಈ […]

ಉಡುಪಿ ಜಿಲ್ಲೆಯಲ್ಲಿ ಜೂನ್ 2 ರಂದು 150 ಜನರ ಕರೋನ ವರದಿ ಪಾಸಿಟಿವ್

Tuesday, June 2nd, 2020
corona Udupi

ಉಡುಪಿ : ಜೂನ್ 2 ರ ಮಂಗಳವಾರ ಉಡುಪಿ ಜಿಲ್ಲೆಯಲ್ಲಿ ಅತಿಹೆಚ್ಚು ಕರೋನ ವೈರಸ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಇಂದು ಮಧ್ಯಾಹ್ನ, ಕಂದಾಯ ಸಚಿವ ಅಶೋಕ ಅವರು 210 ಜನರು ಕರೋನವೈರಸ್ ಸೋಂಕಿನ ಪಾಸಿಟಿವ್ ವರದಿ ಬಂದಿದೆ ಎಂದು ಸುಳಿವು ನೀಡಿದ್ದರು. ಆದರೆ ಸಂಜೆಯ ವೇಳೆಗೆ, ಜಿಲ್ಲಾಡಳಿತದ ಹೊಸ ಮಾಹಿತಿ ಪ್ರಕಾರ ಕೋವಿಡ್ 19 ಗೆ 150 ಜನರ ಪಾಸಿಟಿವ್ ಪ್ರಕರಣಗಳು ಬಂದಿದೆ ಎಂದಿದ್ದಾರೆ, ಈಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ  410 ಕ್ಕೆ ಏರಿಕೆಯಾಗಿದೆ. 627 ಮಂದಿಯ ವರದಿ ನೆಗೆಟಿವ್ ಆಗಿದೆ. ಇನ್ನು ಮಂಗಳವಾರದಂದು ಉಡುಪಿ ಜಿಲ್ಲೆಯಲ್ಲಿ ಪತ್ತೆಯಾದ […]

ಕೊರೋನಾ ವೈರಸ್ ನಿಯಂತ್ರಣ ಕುರಿತು ಕೈಗೊಳ್ಳಬೇಕಾದ ಮುಂಜಾಗ್ರತೆ ವಹಿಸಿ : ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್

Thursday, March 5th, 2020
G.Jagadeesha

ಉಡುಪಿ : ಕೊರೋನಾ ವೈರಸ್ ನಿಯಂತ್ರಣ ಕುರಿತಂತೆ ಎಲ್ಲಾ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ಜಿಲ್ಲೆಯಲ್ಲಿ ಕರೋನಾ ವೈರಸ್ ನಿಯಂತ್ರಣ ಕುರಿತು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊರೋನಾ ವೈರಸ್ ನಿಯಂತ್ರಣ ಕುರಿತಂತೆ ಕಾರ್ಯ ನಿರ್ವಹಿಸಲು, ಸರ್ಕಾರ ಸೂಚಿಸಿರುವ ವಿವಿಧ ಅಧಿಕಾರಿಗಳ ನೇತೃತ್ವದ ಸಮಿತಿಗಳನ್ನು ರಚಿಸುವಂತೆ ಹಾಗೂ ಎಲ್ಲಾ ಸಮಿತಿಗಳು ಪರಸ್ಪರ ಸಮನ್ವಯದಿಂದ […]

ಮಂಗಳೂರು ಹಿಂಸಾಚಾರ ನಡೆಸಿ ಪೋಲೀಸರ ಮೇಲೆ ಹಲ್ಲೆ, ಇಬ್ಬರ ಸಾವು ಮ್ಯಾಜಿಸ್ಟೀರಿಯಲ್ ತನಿಖೆ ಆರಂಭ

Monday, December 30th, 2019
DC jagadeesha

ಮಂಗಳೂರು : ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)  ಹೆಸರಿನಲ್ಲಿ ಡಿ.19 ರಂದು ನಗರದಲ್ಲಿ ಗಲಭೆ ಮತ್ತು ಹಿಂಸಾಚಾರ ನಡೆಸಿ ಪೋಲೀಸರ ಮೇಲೆ ಹಲ್ಲೆ, ಇಬ್ಬರ ಸಾವಿಗೆ ಕಾರಣವಾದ  ಘಟನೆಗೆ  ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್ ತನಿಖೆ ಆರಂಭವಾಗಿದೆ. ಅಧಿಕಾರಿಗಳ ತಂಡದಿಂದ ಘಟನಾ ಸ್ಥಳಗಳ ಪರಿಶೀಲನೆ ಜಿ.ಜಗದೀಶ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಗಲಭೆ ನಡೆದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಸ್ಟೇಟ್ ಬ್ಯಾಂಕ್ ಪರಿಸರ, ನೆಲ್ಲಿಕಾಯಿ ರಸ್ತೆ ಹಾಗೂ ಬಂದರು ರಸ್ತೆ ಪರಿಸರದಲ್ಲಿ ಮಹಜರು ನಡೆಸಿ […]

ಉಡುಪಿಯ ನೂತನ ಜಿಲ್ಲಾಧಿಕಾರಿ ಜಿ. ಜಗದೀಶ್ ಅಧಿಕಾರ ಸ್ವೀಕಾರ

Tuesday, August 20th, 2019
G-jagadeesh

ಉಡುಪಿ : ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಐ.ಎ.ಎಸ್ ಅಧಿಕಾರಿ ಜಿ. ಜಗದೀಶ್ ಇಂದು ಬೆಳಗ್ಗೆ ಅಧಿಕಾರ ಸ್ವೀಕರಿಸಿದರು. ನಿರ್ಗಮನ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಯವರು ನೂತನ ಜಿಲ್ಲಾಧಿಕಾರಿ ಯವರಿಗೆ ಅಧಿಕಾರ ಹಸ್ತಾಂತರಿಸಿದರು. ಕೋಲಾರ ಜಿ.ಪಂನಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಐ.ಎ.ಎಸ್ ಅಧಿಕಾರಿ ಜಿ. ಜಗದೀಶ್ ಅವರು ಶಿವಮೊಗ್ಗಾದ ಸೊರಬದವರು. 2017ರಲ್ಲಿ ಕೆ.ಎ.ಎಸ್ ನಿಂದ ಐ.ಎ.ಎಸ್ ಭಡ್ತಿ ಹೊಂದಿದ್ದರು.