ಆಟೋ ರಿಕ್ಷಾ – ಕಾರಿನ ನಡುವೆ ಅಪಘಾತ, ಆಟೋ ಚಾಲಕ ಸಾವು

Friday, August 27th, 2021
Manila

ಬಂಟ್ವಾಳ : ಆಟೋ ರಿಕ್ಷಾ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೋ ಚಾಲಕ ಮೃತಪಟ್ಟಿರುವ ಘಟನೆ ವಿಟ್ಲ ಪುಣಚ ಗ್ರಾಮದ ಮಾಣಿಲ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಇಲ್ಲಿನ ಪರಿಯಾಲ್ತಡ್ಕ ನಿವಾಸಿ ಅಶ್ರಫ್ ಅಪಘಾತದಲ್ಲಿ ಮೃತಪಟ್ಟ ರಿಕ್ಷಾ ಚಾಲಕ. ಗಂಭೀರ ಗಾಯಗೊಂಡಿದ್ದ ಅಶ್ರಫ್ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಎರಡು ವಾಹನಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು ಅಪಘಾತದ ತೀವ್ರತೆಗೆ ಆಟೋ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಕಾರು ರಸ್ತೆ […]