ರಸ್ತೆ ಬದಿಯಲ್ಲಿ ಮಲಗುತ್ತಿದ್ದ ದನಗಳನ್ನು ಕಳ್ಳತನ ಮಾಡಿ ವಧೆ ಮಾಡುತ್ತಿದ್ದ ತಂಡ ಪರಾರಿ, ಓರ್ವನ ಬಂಧನ

Monday, January 31st, 2022
karkala-police

ಕಾರ್ಕಳ : ನಲ್ಲೂರು, ಬಜಗೋಳಿ. ಮಾಳ ಕಡೆ ರಸ್ತೆ ಬದಿಯಲ್ಲಿ ಮಲಗುತ್ತಿದ್ದ ದನಗಳನ್ನು ಕಳ್ಳತನ ಮಾಡಿ ಕಡಿದು ಮಾಂಸ ಮಾಡಿ ಮಾರುತ್ತಿದ್ದ ತಂಡವೊಂದು ಕಾರ್ಕಳ ಗ್ರಾಮಾಂತರ ಪೋಲೀಸರಿಂದ ತಪ್ಪಿಸಿಕೊಂಡ ಘಟನೆ ಮುಡಾರು ಗ್ರಾಮದ ಹೆಪೆಜಾರು ಎಂಬಲ್ಲಿ ರವಿವಾರ ನಸುಕಿನ ಜಾವದಲ್ಲಿ ನಡೆದಿದೆ. ಈ ಮದ್ಯೆ ತಪ್ಪಿಸಿಕೊಳ್ಳಲೆತ್ನಿಸಿದ ಮೂಡುಬಿದಿರೆ ತಾಲೂಕಿನ ಮಿಜಾರು ಹಂಡೇಲಿನ ನಿವಾಸಿ ಸಯ್ಯದ್ ಜುಹಾದ್(31) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಗೋ ಸಾಗಾಟ ವಾಹನದ ಮಾಹಿತಿದಾರನಾಗಿ ಕುಕೃತ್ಯದಲ್ಲಿ ಸಕ್ರಿಯಾಗೊಂಡಿದ್ದನು ಎನ್ನಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಫಿರೋಜ್, ಮೈಯದ್ದಿ, […]

ಸಾಂಪ್ರದಾಯಿಕ ವಸ್ತ್ರಧಾರಣೆಯ ವಿಚಾರದಲ್ಲಿ ಯನೆಪೊಯೆ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಒಡೆದಾಟ

Saturday, October 30th, 2021
Group Assult

ಮಂಗಳೂರು: ನಗರದ ಮೂಡುಬಿದಿರೆ ಯನೆಪೊಯೆ ಎಂಜಿನಿಯರಿಂಗ್ ಕಾಲೇಜಿನ ಎರಡು ತಂಡದ ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ. ಘಟನೆ ವೇಳೆ ಗಾಯಗೊಂಡಿರುವ ಇಬ್ಬರು ವಿದ್ಯಾರ್ಥಿಗಳಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಐವರು ವಿದ್ಯಾರ್ಥಿಗಳ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆದಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ನಿನ್ನೆ ಕಾಲೇಜಿನಲ್ಲಿ ಸಾಂಪ್ರದಾಯಿಕ ವಸ್ತ್ರಧಾರಣೆಯ ವಿಚಾರದಲ್ಲಿ ಪೂರ್ವ ತಯಾರಿ ನಡೆದಿತ್ತು. ಇದೇ ವಸ್ತ್ರದ ವಿಚಾರದಲ್ಲಿ ಒಂದು ತಂಡದ ವಿದ್ಯಾರ್ಥಿಗಳು ಮತ್ತೊಂದು ತಂಡದ […]

ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ ವೇಳಾಪಟ್ಟಿ ಪ್ರಕಟ

Wednesday, October 20th, 2021
kambala

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕಂಬಳ ಸಿದ್ಧತೆ ನಡೆದಿದ್ದು ಜಿಲ್ಲಾ ಕಂಬಳ ಸಮಿತಿಯು 2021-22ನೇ ಸಾಲಿನ ಕಂಬಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ನ.27ರಿಂದ 2020ರ ಮಾರ್ಚ್ 26ರ ವರೆಗೆ ಒಟ್ಟು 17 ಕಂಬಳ ಕೂಟಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಮೊದಲ ಕಂಬಳ ಮೂಡುಬಿದಿರೆಯಲ್ಲಿ ಹಾಗೂ ಕೊನೆಯ ಕಂಬಳ ವೇಣೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ವೇಳಾಪಟ್ಟಿ ಪ್ರಕಟಗೊಂಡಿದ್ದರೂ, ಕೆಲವು ಕಂಬಳಗಳ ದಿನಾಂಕಗಳು ಬದಲಾಗುವ ಸಾಧ್ಯತೆಗಳಿವೆ ಎಂದು ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ತಿಳಿಸಿದ್ದಾರೆ. ಸಮಿತಿ ಸದಸ್ಯರೊಂದಿಗೆ ಚರ್ಚಿಸಿ ಈ ಬಾರಿ […]

ಮಾರಾಕಾಸ್ತ್ರದಿಂದ ತಲೆಗೆ ಹೊಡೆದು ಪತ್ನಿಯ ಕೊಲೆ, ಗಂಡನ ಬಂಧನ

Wednesday, August 18th, 2021
sunitha

ಮೂಡುಬಿದಿರೆ : ಮಾರಾಕಾಸ್ತ್ರದಿಂದ ಮಹಿಳೆಯ ತಲೆಗೆ ಹೊಡೆದು ಕೊಂದ ಘಟನೆ ಮೂಡುಬಿದಿರೆ ತಾಲೂಕಿನ ದರೆಗುಡ್ಡೆ ಗ್ರಾ.ಪಂ ವ್ಯಾಪ್ತಿಯ ಮಠ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ. ಮಠ ನಿವಾಸಿ ಸುನೀತಾ(30) ಕೊಲೆಯಾದವರು. ಇವರ ಪತಿ ಮೂಡುಬಿದಿರೆಯ ದಿನ್ ರಾಜ್ ಕೊಲೆ ಆರೋಪಿಯಾಗಿದ್ದು, ಆತನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಸಂಜೆಯ ವೇಳೆ ಪತಿ- ಪತ್ನಿ ಮಧ್ಯೆ ಜಗಳ ನಡೆದಿದ್ದು, ಈ ಸಂದರ್ಭ ದಿನ್ ರಾಜ್ ಯಾವುದೋ ಮೊಂಡಾದ ಆಯುಧದಿಂದ ಪತ್ನಿಯ ತಲೆಗೆ ಮಾರಣಾಂತಿಕವಾಗಿ ಹೊಡೆದಿದ್ದಾನೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಸುನೀತಾ […]

ಚಿಕ್ಕಪ್ಪನಿಂದಲೇ ಹೈಸ್ಕೂಲ್ ವಿದ್ಯಾರ್ಥಿನಿಯ ಅತ್ಯಾಚಾರ

Tuesday, August 10th, 2021
Rape

ಮೂಡುಬಿದಿರೆ: ತೆಂಕಮಿಜಾರು ಗ್ರಾಪಂ ಪರಿಸರದಲ್ಲಿ  ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಆಕೆಯ ಚಿಕ್ಕಪ್ಪನೇ ಅತ್ಯಾಚಾರವೆಸಗಿದ ಘಟನೆ ಸೋಮವಾರ ನಡೆದಿದೆ. ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ ಆಕೆ ಸ್ನೇಹಿತೆ ಜತೆಗೆ ಮನೆಗೆ ತೆರಳುತ್ತಿದ್ದ ಸಂದರ್ಭ ಗುಡ್ಡ ಪ್ರದೇಶದಲ್ಲಿ ಆಕೆಯ ಚಿಕ್ಕಪ್ಪ ಮೂವತ್ತರ ಹರೆಯದ ಕುಮಾರ್ ಅಡ್ಡಗಟ್ಟಿ ವಿದ್ಯಾರ್ಥಿನಿಯರನ್ನು ಹೆದರಿಸಿದ. ಆಗ ಜತೆಗಿದ್ದ ವಿದ್ಯಾರ್ಥಿನಿ ಹೆದರಿ ಓಡಿ ಹೋದಳು. ಈ ಸಂದರ್ಭ ಅತ್ಯಾಚಾರ ನಡೆದಿದೆ. ಮೂಡುಬಿದಿರೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿದ್ದಾರೆ.

ಅಕ್ಕಿ ಸಾಗಾಟದ ಲಾರಿ ಮೂಡುಬಿದಿರೆ ಬಳಿ ದಂಡೆಗೆ ಢಿಕ್ಕಿ

Thursday, June 17th, 2021
raise-lorry

ಬಂಟ್ವಾಳ : ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಬಂಟ್ವಾಳ- ಮೂಡುಬಿದಿರೆ ರಸ್ತೆಯ ವಿದ್ಯಾಗಿರಿ ಬಳಿ ರಸ್ತೆ ಬದಿಯ ದಂಡೆಗೆ ಢಿಕ್ಕಿ ಹೊಡೆದ ಘಟನೆ ಗುರುವಾರ ನಡೆದಿದೆ. ಘಟನೆಯಲ್ಲಿ ಲಾರಿಯ ಚಾಲಕ ಹಾಗೂ ನಿರ್ವಾಹಕ ಗಾಯಗೊಂಡಿದ್ದಾರೆ. ಲಾರಿಯು ಶಿವಮೊಗ್ಗದಿಂದ ಪುತ್ತೂರಿಗೆ ಅಕ್ಕಿ ಸಾಗಾಟ ಮಾಡುತ್ತಿತ್ತು. ಲಾರಿಯನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ.

ಮಡಿಕೇರಿಯಲ್ಲಿಒಂಟಿ ಮಹಿಳೆಯ ಕೊಲೆ, ಮೂಡುಬಿದಿರೆಯ ಯುವಕನ ಬಂಧನ

Thursday, March 25th, 2021
Anil

ಮೂಡುಬಿದಿರೆ : ಮಡಿಕೇರಿಯಲ್ಲಿಒಂಟಿ ಮಹಿಳೆಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಮೂಡುಬಿದಿರೆಯ ಯುವಕನನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮೂಡುಬಿದಿರೆಯ ಹೊಸಬೆಟ್ಟು ನಿವಾಸಿ ಅನಿಲ್ ಎಂದು ಗುರುತಿಸಲಾಗಿದೆ. ಆರೋಪಿಯು ನಗರದ ಖಾಸಗಿ ರೆಸಾರ್ಟಿನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಯ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಮಡಿಕೇರಿಯಲ್ಲಿ 70 ವರ್ಷದ ಒಂಟಿ ಮಹಿಳೆ ಲಲಿತಾ ಅವರನ್ನು ಕೊಲೆ ಮಾಡಿ ಚಿನ್ನಾಭರಣಗಳನ್ನು ದೋಚಲಾಗಿದ್ದು, ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರ್ಕರಣ ದಾಖಲಾಗಿತ್ತು. ಇನ್ನು ಆರೋಪಿಯು ಮಕ್ಯಾನಿಕ್ ಇಂಜಿನಿಯರ್ ಆಗಿದ್ದು, […]

ತಂದೆಯ ಲಾರಿಯ ಚಕ್ರದಡಿ ಸಿಲುಕಿ ಎಂಟು ವರ್ಷದ ಬಾಲಕ ಮೃತ್ಯು

Thursday, March 11th, 2021
Marshid

ಬೆಳ್ತಂಗಡಿ : ತನ್ನ ತಂದೆಯೇ ಚಲಾಯಿಸುತ್ತಿದ್ದ ಲಾರಿಯ ಚಕ್ರದಡಿ ಸಿಲುಕಿ ಎಂಟು ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಬುಧವಾರ ಸಂಜೆ ಮೂಡುಬಿದಿರೆಯಲ್ಲಿ ನಡೆದಿದೆ. ಉಜಿರೆ ಅತ್ತಾಜೆ‌ ನಿವಾಸಿ ಇಬ್ರಾಹಿಂ ಇಬ್ಬಿ ಅವರ ಪುತ್ರ, ಉಜಿರೆ ಹಳೆಪೇಟೆ ಬದ್ರುಲ್ ಹುದಾ ಮದರಸದ‌ ಮೂರನೇ ತರಗತಿ ವಿದ್ಯಾರ್ಥಿ ಮುರ್ಷಿದ್ (8) ಮೃತಪಟ್ಟ ಬಾಲಕ. ಉಜಿರೆ ಅತ್ತಾಜೆ ಇಬ್ರಾಹಿಂ ಮತ್ತು ರಹಿಮತ್ ದಂಪತಿಯ ಇಬ್ಬರು ಮಕ್ಕಳಲ್ಲಿ‌ ಮುರ್ಷಿದ್ ಮೊದಲನೆಯವನಾಗಿದ್ದ. ತಂದೆ ಮೂಡುಬಿದಿರೆಯ ಕಲ್ಲಿನ‌ಕೋರೆಗೆ ಹೋಗುವಾಗ ಬಾಲಕನೂ ಜತೆಗೆ ತೆರಳಿದ್ದನೆಂದು ಹೇಳಲಾಗಿದೆ. ತಂದೆಯೇ ಚಾಲಕನಾಗಿ ಲಾರಿ […]

ಹಂಡೇಲು ಚಿನ್ನಾಭರಣ ದರೋಡೆ – ನಾಲ್ವರ ಬಂಧನ

Friday, November 27th, 2020
Handelu

ಮೂಡುಬಿದಿರೆ  : ಮನೆಯೊಂದಕ್ಕೆ ನುಗ್ಗಿ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ ಪೊಲೀಸರು, 22.860 ಗ್ರಾಂ ಚಿನ್ನಾಭರಣ ಹಾಗೂ ₹11 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಕೇರಳದ ಕಾಸರಗೋಡಿನ ಇಬ್ರಾಹಿಂ ಕಲಂದರ್ (38), ಮೊಹಮ್ಮದ್ ಹನೀಫ್ (48), ಶಿವಮೊಗ್ಗದ ಮೊಹಮ್ಮದ್ ಮುದಸ್ಸಿರ್ (20), ಮೂಡುಬಿದಿರೆಯ ಶಾಹೀಂ ಸಿದ್ದೀಕ್ (26) ಬಂಧಿತರು. ಮೂಡುಬಿದಿರೆ ಠಾಣಾ ವ್ಯಾಪ್ತಿಯ ಪುತ್ತಿಗೆ ಗ್ರಾಮದ ಹಂಡೇಲು ಹತ್ತಿರದ ಸಾರಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿ ನವೆಂಬರ್  11ರಂದು ಹಿಂಬದಿ ಬಾಗಿಲು ಮುರಿದು ಆರೋಪಿಗಳು ಚಿನ್ನಾಭರಣ ದೋಚಿದ್ದರು. ಈ ಕುರಿತು […]

ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರತನ್ ಕುಮಾರ್ ಕಟ್ಟೇಮಾರ್ ನಿಧನ

Monday, November 9th, 2020
Rathan Kumar

ಮೂಡುಬಿದಿರೆ: ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರತನ್ ಕುಮಾರ್ ಕಟ್ಟೇಮಾರ್ (82) ಅವರು ಭಾನುವಾರ  ನಿಧನ ಹೊಂದಿದರು. 1967ರಿಂದ 1972ರವರೆಗೆ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ರತನ್ ಕುಮಾರ್ ಕಟ್ಟೇಮಾರ್ ಅವರು ಸ್ವತಂತ್ರ ಪಕ್ಷದಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್ ನ ಬಿ.ಗಂಗಾಧರ ದಾಸ್ ವಿರುದ್ಧ ಜಯ ಗಳಿಸಿದ್ದರು. ನಂತರ 1972 ರ ಚುನಾವಣೆಯಲ್ಲಿ ಅವರು ಸುರತ್ಕಲ್ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಜನಪ್ರತಿನಿಧಿಯಾಗಿ ಭೂ ಮಸೂದೆಯ ವಿರುದ್ಧ ಸದಾ ದನಿಯೆತ್ತಿದ್ದ ಅವರು ಪ್ರತ್ಯೇಕ ತುಳು ರಾಜ್ಯಕ್ಕೆ ಬೇಡಿಕೆ ಇಟ್ಟಿದ್ದ […]