ಮಂಗಳೂರು : ಪಂಪ್ ವೆಲ್ ಉಜ್ಜೋಡಿಯಲ್ಲಿರುವ ಪೆಟ್ರೋಲ್ ಬಂಕ್ ಕಳವು ಸೇರಿದಂತೆ ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರನ್ನು ಕಂಕನಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಕೆ. ಸಿ. ರೋಡ್ನ ಮುಹಮ್ಮದ್ ಸುಹೈಲ್ ಯಾನೆ ಅಶ್ರಫ್ (19), ಆಶಿಕ್ (19) ಮತ್ತು ಮಂಗಳೂರಿನ ಫಳ್ನೀರ್ನ ಮುಹಮ್ಮದ್ ಅರ್ಫಾನ್ (20) ಬಂಧಿತ ಆರೋಪಿಗಳು. ಬಂಧಿತರಿಂದ ನಗದು, ಮಾರಕಾಯುಧ, ಹೆಲ್ಮೆಟ್ ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಸೆ.20ರ ರಾತ್ರಿ ಪಂಪ್ ವೆಲ್ ಉಜ್ಜೋಡಿಯಲ್ಲಿರುವ ಪೆಟ್ರೋಲ್ ಬಂಕ್ನಲ್ಲಿ ಕಳವು ನಡೆಸಿದ್ದರು. ಈ […]
ಮಂಗಳೂರು : ಮಂಗಳೂರು ವಿದ್ಯುತ್ ಸರಬರಾಜು ನಿಗಮ(ಮೆಸ್ಕಾಂ) ನಿರ್ದೇಶಕಿ ಸ್ನೇಹಲ್ ಆರ್. ಅವರನ್ನು ಬೆಂಗಳೂರು ಪಿಯು ಶಿಕ್ಷಣ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ. ಮಂಗಳೂರು ವಿದ್ಯುತ್ ಸರಬರಾಜು ನಿಗಮ ನೂತನ ನಿರ್ದೇಶಕರಾಗಿ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ನೇಮಕ ಮಾಡಲಾಗಿದೆ. ಪ್ರಶಾಂತ್ ಮಿಶ್ರಾ, 2014ರಲ್ಲಿ ಐಎಎಸ್ ಉತ್ತೀರ್ಣರಾಗಿದ್ದರು. ಈ ಹಿಂದಿನ ನಿರ್ದೇಶಕಿ ಸ್ನೇಹಲ್ ಆರ್. ಅವರನ್ನು ಬೆಂಗಳೂರು ಪಿಯು ಶಿಕ್ಷಣ ನಿರ್ದೇಶಕರಾಗಿ ನೇಮಕ ಮಾಡಿ ಸರಕಾರ ಆದೇಶ ನೀಡಿದೆ. ಸ್ನೇಹಲ್, 2013ನೇ ಐಎಎಸ್ ಬ್ಯಾಚ್ ನವರಾಗಿದ್ದಾರೆ. ಸ್ನೇಹಲ್ ಅವರು ನಿರ್ದೇಶಕಿಯಾಗಿದ್ದ […]
ಮಂಗಳೂರು : ಮೇ 2020 ರ ಮಾಹೆಯಲ್ಲಿ, 2 ತಿಂಗಳ ಬಿಲ್ಲನ್ನು ಒಟ್ಟಿಗೆ ಹೆಚ್ಚಿನ ಮೊತ್ತಕ್ಕೆ ನೀಡಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿ ಬಂದಿರುತ್ತದೆ. ವಿದ್ಯುತ್ ಬಿಲ್ಗಳ ಬಗ್ಗೆ ಗ್ರಾಹಕರಿಗೆ ಉಂಟಾಗಿರುವ ಗೊಂದಲದ ಕುರಿತು ಕೆಳಕಂಡಂತೆ ಸ್ಪಷ್ಟೀಕರಣ ನೀಡಿದೆ. ಗ್ರಾಹಕರಿಗೆ ಬಳಕೆ ಮತ್ತು ಸ್ಲ್ಯಾಬ್ ದರಗಳನ್ನು ಮಾಸಿಕ ಬಿಲ್ಲಿಗೆ ಅನ್ವಯಿಸುವಂತೆ ಕರಾರುವಕ್ಕಾಗಿ ಹಾಗೂ ಯಾವುದೇ ಹೆಚ್ಚುವರಿ ಆಗದಂತೆ ಎರಡು ತಿಂಗಳಿಗೂ ಸಮಾನವಾಗಿ ಯುನಿಟ್ ಬಳಕೆಯನ್ನು, ಸ್ಲ್ಯಾಬ್ಗಳನ್ನು ದುಪ್ಪಟ್ಟುಗೊಳಿಸಿ ಕನಿಷ್ಟ ಸ್ಲ್ಯಾಬ್ನಿಂದ ಅನ್ವಯಿಸುವಂತೆ ಬಿಲ್ಲಿನಲ್ಲಿ ತೋರಿಸಲಾಗಿದೆ. ಕೋವಿದ್-19 ಲಾಕ್ಡೌನ್ ಸಮಯದಲ್ಲಿ ಬಹುತೇಕ ಜನರು […]
ಮಂಗಳೂರು : ಜಿಲ್ಲೆಯಲ್ಲಿ ವಿದ್ಯುತ್ ಬಿಲ್ಗಳ ಬಗ್ಗೆ ಜನರು ಹಲವು ದೂರುಗಳನ್ನು ನೀಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಮನೆ ಮತ್ತು ಸಣ್ಣ ಉದ್ಯಮಕ್ಕೆ ಕಡಿಮೆ ಸರಾಸರಿ ಇರುವ ತಿಂಗಳ ಬಿಲ್ ಆಧಾರದಲ್ಲಿ ಬಿಲ್ ನೀಡಬೇಕು . ಜೂನ್ ತಿಂಗಳಿನವರೆಗೂ ಕಡ್ಡಾಯವಾಗಿ ಬಿಲ್ ಪಾವತಿಸುವಂತೆ ಒತ್ತಡ ಹೇರುವಂತಿಲ್ಲ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತಿವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ. ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್ ಲಾಕ್ […]
ಪುತ್ತೂರು : ಪೈಂಟ್ ಕೆಲಸ ಮಾಡುತ್ತಿದ್ದ ಯುವಕ ವಿದ್ಯುತ್ ಅವಘಡದಿಂದ ಮೃತಪಟ್ಟ ವಿಚಾರಕ್ಕೆ ಸಂಬಂಧಿಸಿ ಕೇವಲ ಗುತ್ತಿಗೆದಾರರ ವಿರುದ್ಧ ಮಾತ್ರವಲ್ಲ. ನಿರ್ಲಕ್ಷ್ಯ ವಹಿಸಿದ ಮೆಸ್ಕಾಂ ಮತ್ತು ಆಸ್ಪತ್ರೆಯ ವಿರುದ್ಧವೂ ಪ್ರಕರಣ ದಾಖಲಿಸಬೇಕೆಂದು ದ.ಕ.ದಲಿತ ಸೇವಾ ಸಮಿತಿ ಆಗ್ರಹಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ.ಕ.ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು , ಫೆ.6ಕ್ಕೆ ಪ್ರಗತಿ ಆಸ್ಪತ್ರೆಯಲ್ಲಿ ಪೈಂಟಿಂಗ್ ಕೆಲಸ ಮಾಡುವ ಸಮಯ ಬಪ್ಪಳಿಗೆ ದಿ.ಬಾಬು ಆದಿದ್ರಾವಿಡ ಎಂಬವರ ಪುತ್ರ ದೀಕ್ಷಿತ್ ಅವರಿಗೆ ವಿದ್ಯುತ್ ಶಾಕ್ ಹೊಡೆದಿತ್ತು. ಗಂಭೀರ ಸ್ಥಿತಿಯಲ್ಲಿದ್ದ […]
ಮಂಗಳೂರು : ಮೆಸ್ಕಾಂನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಗ್ಯಾಂಗ್ಮ್ಯಾನ್ ಗಳಿಗೆ ಕೆಲಸ ಖಾಯಂಗೊಳಿಸುವಂತೆ ಜಯಕರ್ನಾಟಕ ಸಂಘಟನೆ ಕರ್ನಾಟಕ ಸರಕಾರದ ಉಸ್ತುವಾರಿ ಸಚಿವರಿಗೆ ಗುರುವಾರ ಮಂಗಳೂರು ಜಿಲ್ಲಾಧಿಕಾರಿ ಕಛೇರಿಯ ಸಚಿವರ ಕಛೇರಿಯಲ್ಲಿ ಮನವಿ ಮಾಡಿತು. 2010 ರಿಂದ 2019 ಸೆಪ್ಟೆಂಬರ್ 30 ರ ತನಕ ಮಂಗಳೂರು, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸುಮಾರು 679 ಗ್ಯಾಂಗ್ಮ್ಯಾನ್ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಕೆಪಿಟಿಸಿಯಲ್ ಗ್ಯಾಂಗ್ಮ್ಯಾನ್ ಗಳನ್ನು ಸ್ಥಳೀಯವಾಗಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಮಾಡಿದ್ದು ಕೆಲಸಗಾರರಿಗೆ ಸೇವಾಭದ್ರತೆ ಇಲ್ಲದೆ ದುಡಿಯುತ್ತಿದ್ದಾರೆ, ಅವರ ವೇತನದ ಬಗ್ಗೆ ಯಾವುದೇ […]
ಮಂಗಳೂರು : ರಾಜ್ಯ ಸರಕಾರವು ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್ ದರವನ್ನು ವಿಪರೀತವಾಗಿ ಏರಿಸಿರುವುದರಿಂದ ಜನಸಾಮಾನ್ಯರು ಭಾರೀ ಸಂಕಷ್ಟವನ್ನು ಎದುರಿಸುವಂತಾಗಿದೆ.ಕಳೆದ ಹಲವು ವರ್ಷಗಳ ಹಿಂದೆ ರಾಜ್ಯ ಸರಕಾರವು ವಿದ್ಯುತ್ ದರವನ್ನು ಏರಿಸುವಾಗ ಜನತೆಗೆ ಬಹಿರಂಗವಾಗಿ ತಿಳಿಸುತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವರ್ಷಕ್ಕೆ 2 ಬಾರಿ ವಿದ್ಯುತ್ ದರವನ್ನು ವಿಪರೀತವಾಗಿ ಏರಿಸಿದ್ದಾರೆ.ಮಾತ್ರವಲ್ಲದೆ ಹೆಚ್ಚುವರಿ ಡಿಪಾಸಿಟ್ ಸಂಗ್ರಹ ಹಾಗೂ ತಪ್ಪು ಲೆಕ್ಕಾಚಾರಗಳ ಮೂಲಕ ಜನರನ್ನು ಹಗಲು ದರೋಡೆ ನಡೆಸುತ್ತಿರುವ ಮೆಸ್ಕಾಂ ಹಾಗೂ ರಾಜ್ಯ ಸರಕಾರದ ವಿರುದ್ದ ಪ್ರಬಲ ಹೋರಾಟ ನಡೆಸಬೇಕೆಂದು* […]
ಬಂಟ್ವಾಳ : ಬಂಟ್ವಾಳ ತಾಲೂಕಿನ ವಾಮದಪದವು ಬಾರೆಕಿನಾಡೆ ಎಂಬಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ-ಮಗಳ ಸಾವನ್ನಪ್ಪಿದ ದಾರುಣ ಘಟನೆ ಮಂಗಳವಾರ ಸಂಜೆ ನಡೆದಿದೆ. ಗೋಪಾಲಕೃಷ್ಣ ಶೆಟ್ಟಿ ಹಾಗೂ ಮಗಳು 23ರ ಹರೆಯದ ದಿವ್ಯಶ್ರೀ ಮೃತ ದುರ್ದೈವಿಗಳು. ಇವರು ಮಂಗಳವಾರ ಸಂಜೆ ತಮ್ಮ ಮನೆಯ ತೋಟಕ್ಕೆ ಹುಲ್ಲು ತರಲೆಂದು ತೆರಳಿದ್ದರು. ಈ ವೇಳೆ ಹುಲ್ಲಿನ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಇದನ್ನು ಗಮನಿಸದೇ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹಳೆ ವಿದ್ಯುತ್ ತಂತಿ ಬದಲಿಸದಿರುವುದು ಘಟನೆಗೆ […]