ಓಝೋನ್ ಪದರ ಸಂರಕ್ಷಿಸುವ ಭರದಲ್ಲಿ ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣರಾಗಿದ್ದೇವೆ – ಡಾ. ಸಿದ್ಧರಾಜು ಎಂ.ಎನ್

Saturday, September 16th, 2023
ozone

ಮಂಗಳೂರು : ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಇಲ್ಲಿಯ ತೃತೀಯ ವರ್ಷದ ಜೀವ ವಿಜ್ಞಾನ ವಿದ್ಯಾರ್ಥಿಗಳು ಆಂತರಿಕ ಗುಣಮಟ್ಟ ಖಾತರಿ ಕೋಶದ ವತಿಯಿಂದ ಅಂತರಾಷ್ಟ್ರೀಯ ಓಝೋನ್ ಪದರ ಸಂರಕ್ಷಣಾ ದಿನವನ್ನು ಆಚರಿಸಿದರು. ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಸಿದ್ದರಾಜು M N ಅವರು ಮಾಂಟ್ರಿಯಲ್ ಒಪ್ಪಂದ, ಕಿಗಲೀ ಒಪ್ಪಂದ ಹಾಗು CFC, HCFC ಗಳ ಉಪಯೋಗದಿಂದಾಗುವ ಓಜೋನ್ ಪದರ ಸವಕಳಿ ಮತ್ತು ತಾಪಮಾನ ಏರಿಕೆ ಕುರಿತಾಗಿ ಸವಿಸ್ತಾರವಾಗಿ ಮಾಹಿತಿ ನೀಡಿ, CFC ಗಳ ಉತ್ಪಾದನೆ ಮತ್ತು ಬಳಸುವಿಕೆಯನ್ನು […]

ವಿವಿ ಕಾಲೇಜು: ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ವಿನ್ಯಾಸ್ ವಿ ಆಯ್ಕೆ

Friday, March 11th, 2022
vinyas

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ 2021-22 ನೇ ಸಾಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ತೃತೀಯ ವಿಜ್ಞಾನ ಪದವಿಯ ವಿನ್ಯಾಸ್ ವಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ತೃತೀಯ ವಾಣಿಜ್ಯ ಪದವಿಯ ಧೀರಜ್, ಸಹಕಾರ್ಯದರ್ಶಿಯಾಗಿ ತೃತೀಯ ವಾಣಿಜ್ಯ ಪದವಿಯ ಅಂಕಿತಾ ಎಸ್, ಲಲಿತ ಕಲಾ ಸಂಘದ ಕಾರ್ಯದರ್ಶಿಯಾಗಿ ತೃತೀಯ ವಿಜ್ಞಾನ ಪದವಿಯ ಅಪರ್ಣಾ ಶೆಟ್ಟಿ ಹಾಗೂ ಲಲಿತಾ ಕಲಾ ಸಂಘದ ಸಹಕಾರ್ಯದರ್ಶಿಯಾಗಿ ತೃತಿಯ ಕಲಾ ಪದವಿಯ ಕಾವ್ಯ ಎನ್ ಕೆ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಬಿ ಎಂ […]

ವಿವಿ ಕಾಲೇಜು: ಮಹಿಳಾ ದಿನಾಚರಣೆಯಂದೇ ಮಹಿಳಾ ವೇದಿಕೆಗೆ ಚಾಲನೆ

Tuesday, March 8th, 2022
Womens Day

ಮಂಗಳೂರು: ನಗರದ ವಿಶ್ವವಿದ್ಯಾನಿಲಯದ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳಾ ವೇದಿಕೆಯ ಉದ್ಘಾಟನಾ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಪೂರ್ವತನ ಪ್ರಾಂಶುಪಾಲ ಡಾ. ಹರೀಶ್ ಎ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು. ಆಂಗ್ಲ ವಿಭಾಗ ಮುಖ್ಯಸ್ಥೆ ಡಾ. ಎನ್ ಕೆ ರಾಜಲಕ್ಷ್ಮೀ, ಮಹಿಳೆ ಅಥವಾ ಪುರುಷನನ್ನು ಒಂದು ಚೌಕಟ್ಟಿನೊಳಗಿಡುವುದು ಸರಿಯಲ್ಲ. ಮಹಿಳೆ ಸಂತೋಷದ ಸೆಲೆ, ಪ್ರೀತಿಯೇ ಅವಳ ಶಕ್ತಿ ಎಂದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಲತಾ ಎ. ಪಂಡಿತ್, ತಮ್ಮನ್ನು ಯಾವುದೇ […]

ಗ್ರಾಹಕರ ರಕ್ಷಣೆಗೆ ಕಾನೂನು ಮಾಪನಶಾಸ್ತ್ರವೆಂಬ ಅಸ್ತ್ರ: ಕೆ ಜಿ ಕುಲಕರ್ಣಿ

Thursday, March 3rd, 2022
Kulkarni

ಮಂಗಳೂರು: ಗ್ರಾಹಕರು ತಮಗೇನಾದರೂ ಮೋಸವಾದರೆ ಅವರ ರಕ್ಷಣೆಗೆ ಕಾನೂನು ಮಾಪನಶಾಸ್ತ್ರ ಕಾಯ್ದೆಯಿದೆ. ಈ ಕಾನೂನಿನಡಿ ದೂರು ದಾಖಲಿಸಿ, ಗ್ರಾಹಕರ ವೇದಿಕೆಯಡಿ ಪರಿಹಾರ ಪಡೆಯಬಹುದಾಗಿದೆ, ಎಂದು ದಕ್ಚಿಣ ಕನ್ನಡದ ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕ ಕೆ ಜಿ ಕುಲಕರ್ಣಿ ಹೇಳಿದರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ಸಂಘ ಮತ್ತು ಗ್ರಾಹಕ ವೇದಿಕೆಗಳು ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಗುರುವಾರ, ʼಲೀಗಲ್ ಮೆಟ್ರಾಲಜಿ ಆಂಡ್ ಇಟ್ಸ್ ಅಪ್ಲಿಕೇಶನ್ಸ್ʼ ಎಂಬ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಗ್ರಾಹಕರ ಹಿತರಕ್ಷಣೆಗಾಗಿ ಇರುವ […]

ವಿವಿ ಕಾಲೇಜು: ರಾಷ್ಟ್ರೀಯ ಮತದಾರರ ದಿನಾಚರಣೆ

Wednesday, January 26th, 2022
Voters day

ಮಂಗಳೂರು: ಭಾರತೀಯ ಚುನಾವಣಾ ಆಯೋಗದ ಆಶಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಮಂಗಳವಾರ ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 12 ನೇ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಯಿತು. ಚುನಾವಣೆಯನ್ನು ‘ಎಲ್ಲರೂ ಒಳಗೊಳ್ಳುವ, ಸುಗಮ ಮತ್ತು ಪ್ರತಿಯೊಬ್ಬರೂ ಭಾಗವಹಿಸುವ ಪ್ರಕ್ರಿಯೆಯಾಗಿ ಮಾಡುವʼ ಆಶಯದೊಂದಿಗೆ ನಡೆದ ಈ ಬಾರಿಯ ಆಚರಣೆಗೆ ಪ್ರಾಂಶುಪಾಲೆ ಡಾ. ಅನಸೂಯ ರೈ ಚಾಲನೆ ನೀಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಲತಾ ಎ. ಪಂಡಿತ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳು ತಮ್ಮ ಬಲಗೈ […]

ನಮ್ಮನ್ನು ನಿರ್ವಹಿಸಿಕೊಂಡರೆ ಒತ್ತಡ ನಿರ್ವಹಣೆಯ ಪ್ರಶ್ನೆಯಿಲ್ಲ: ಮಮತಾ ಆಚಾರ್

Saturday, December 11th, 2021
mamatha-achar

ಮಂಗಳೂರು: ನಾವು ಒತ್ತಡವನ್ನು ನಿರ್ವಹಿಸುವ ಬದಲು  ನಮ್ಮನ್ನು ನಾವು ಚೆನ್ನಾಗಿ ನಿರ್ವಹಿಸಿಕೊಂಡರೆ ಒತ್ತಡದ ಸಮಸ್ಯೆಯೇ ಉದ್ಭವವಾಗುವುದಿಲ್ಲ, ಎಂದು ಖ್ಯಾತ ಆಪ್ತ ಸಮಾಲೋಚಕಿ ಶ್ರೀಮತಿ ಮಮತಾ ಆಚಾರ್ ಅಭಿಪ್ರಾಯಪಟ್ಟರು. ನಗರದ  ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಇತ್ತೀಚೆಗೆ ಪ್ರಥಮ ಪದವಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶುದ್ಧ ಗಾಳಿ, ಉತ್ತಮ ಆಹಾರ, ಸಾಕಷ್ಟು ನೀರು, ಧ್ಯಾನ, ವ್ಯಾಯಾಮ, ಸಮಯ ನಿರ್ವಹಣೆ ನಮ್ಮನ್ನು ಒತ್ತಡದಿಂದ ದೂರವಿಡಬಲ್ಲವು. ಮುಕ್ತವಾಗಿ ಮಾತನಾಡಬಹುದಾದ ಹಳೆಯ ಸ್ನೇಹಿತರು, ಹವ್ಯಾಸಗಳೂ ನಮಗೆ ನೆರವಾಗಬಲ್ಲವು. “ಮನಸ್ಸು ಹರಿಯುವ ನೀರಿನಂತೆ […]

ಭವಿಷ್ಯದ ಭಾರತಕ್ಕೆ ನಮ್ಮ ಕೊಡುಗೆ ನೀಡೋಣ: ಲೆ.ಕ. ಭರತ್‌ ಕುಮಾರ್‌

Sunday, August 15th, 2021
University Collège

ಮಂಗಳೂರು: ಸಮಗ್ರ ಅಭಿವೃದ್ಧಿಯೊಂದಿಗೆ ಜಗತ್ತಿನ ಸೂಪರ್‌ ಪವರ್‌ ಆಗುವತ್ತ ದಿಟ್ಟ ಹೆಜ್ಜೆ ಇಟ್ಟಿರುವ ಭಾರತಕ್ಕೆ, ದೇಶದ ನಾಗರಿಕ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಬಹುದು, ಎಂದು ಎನ್‌ಸಿಸಿ ಯ ನೌಕಾದಳದ (5 ಕರ್ನಾಟಕ ನೌಕಾದಳ ಘಟಕ) ಕಮಾಂಡಿಂಗ್‌ ಆಫೀಸರ್‌ ಲೆಫ್ಟಿನೆಂಟ್‌ ಕಮಾಂಡರ್‌ ಭರತ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ. ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 75ನೇ ಸ್ವಾತಂತ್ರೋತ್ಸವದಂದು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ಭವಿಷ್ಯದ ಅಗತ್ಯತೆಗಳನ್ನು ಪೂರೈಸಲು ಭಾರತಕ್ಕೆ ಶಿಸ್ತು, ಜವಾಬ್ದಾರಿ, ಪ್ರಾಮಾಣಿಕತೆ, ನೈತಿಕತೆಯಿರುವ ಶ್ರಮಜೀವಿ ಪ್ರಜೆಗಳ ಅಗತ್ಯವಿದೆ. […]

ಜಯಶ್ರೀಯವರ ಸಾಧನೆ ಇತರರಿಗೂ ಪ್ರೇರಣೆಯಾಗಲಿ: ಹರೀಶ್‌ ಆಚಾರ್‌

Friday, August 13th, 2021
Jayashree

ಮಂಗಳೂರು: ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬಂತೆ ತಮ್ಮ 44 ನೇ ವಯಸ್ಸಿನಲ್ಲಿ ಎಸ್‌.ಎಸ್‌.ಎಲ್‌.ಸಿ ಪಾಸಾಗಿ ಅಪೂರ್ವ ಸಾಧನೆ ಮಾಡಿರುವ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಗುಮಾಸ್ತರಾಗಿರುವ ಜಯಶ್ರೀ ಅವರನ್ನು ಶುಕ್ರವಾರ ಜಿಲ್ಲೆಯ ಸಹಕಾರಿ ರಂಗದ ಧುರೀಣರು ಭೇಟಿಮಾಡಿ ಆತ್ಮೀಯವಾಗಿ ಸನ್ಮಾನಿಸಿದರು. ವಿಶ್ವಕರ್ಮ ಕೋಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ ಮತ್ತು ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಕೇಂದ್ರಗಳ ಅಧ್ಯಕ್ಷ ಹರೀಶ್‌ ಆಚಾರ್‌, ಕರಾವಳಿ ಕ್ರೆಡಿಟ್‌ ಕೋಆಪರೇಟಿವ್‌ ಸೊಸೈಟಿ ಅಧ್ಯಕ್ಷ ಎ ಎಸ್‌ ವೆಂಕಟೇಶ್‌, ಒಡಿಯೂರು ವಿವಿದೋದ್ಧೇಶ ಸಹಕಾರಿ ನಿಯಮಿತದ […]

ವಿವಿ ಕಾಲೇಜು: ನ್ಯಾಕ್‌ ವರದಿ ಕುರಿತ ಕಾರ್ಯಾಗಾರ ಸಂಪನ್ನ

Saturday, July 17th, 2021
naik

ಮಂಗಳೂರು: ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ), ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್ತು (ನ್ಯಾಕ್‌) ಗೆ ಸಲ್ಲಿಸಬೇಕಾದ ಸ್ವ-ಅಧ್ಯಯನ ವರದಿ ಕುರಿತಂತೆ ಪ್ರಾಧ್ಯಾಪಕರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ರವೀಂದ್ರ ಕಲಾಭವನದಲ್ಲಿ ಶುಕ್ರವಾರ ಆಯೋಜಿಸಿತ್ತು. ಪ್ರಾಂಶುಪಾಲೆ ಡಾ. ಅನಸೂಯ ರೈ ಕಾರ್ಯಕ್ರಮ ಉದ್ಘಾಟಿಸಿ, ಕಾಲೇಜು ನ್ಯಾಕ್‌ ಮಾನ್ಯತೆ ಪಡೆಯಲು ಶ್ರಮಿಸಿದವರನ್ನು ನೆನಪಿಸಿಕೊಂಡರಲ್ಲದೆ, ಪಡೆದಿರುವ ʼಎʼ ಶ್ರೇಣಿಯನ್ನು ಉತ್ತಮಪಡಿಸಿಕೊಳ್ಳುವ ಪ್ರಯತ್ನ ನಡೆದಿದೆ, ಎಂದರು. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಕಚೇರಿಯ ನ್ಯಾಕ್‌ ವಿಶೇಷಾಧಿಕಾರಿಗಳಾದ […]

ವಿವಿ ಕಾಲೇಜು: 400 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊವಿಡ್‌ ಲಸಿಕೆ

Monday, June 28th, 2021
Student-Vaccination

ಮಂಗಳೂರು: ಕೊವಿಡ್‌-19 ಸಾಂಕ್ರಾಮಿಕದ ಮಿರುದ್ಧ ಭಾರತ ಸರ್ಕಾರ ಹಮ್ಮಿಕೊಂಡಿರುವ ರಾಷ್ಟ್ರೀಯ ಲಸಿಕಾ ಅಭಿಯಾನದಡಿ ಎನ್‌ಎಸ್‌ಎಸ್‌ ಸಹಯೋಗದಲ್ಲಿ, ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಮೊದಲ ಹಂತದ ಲಸಿಕಾಕರಣದಲ್ಲಿ ಸುಮಾರು 425 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಯಿತು. ವಿದ್ಯಾರ್ಥಿಗಳು, ಬೆಳಗ್ಗಿನಿಂದಲೇ ಕಾಲೇಜಿಗೆ ಬಂದು ಕೂಪನ್‌ ಪಡೆದುಕೊಂಡು, ಕೊವಿನ್‌ ಅಪ್ಲಿಕೇಶನ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡು ಉತ್ಸಾಹದಿಂದ ಲಸಿಕೆ ಪಡೆದುಕೊಂಡರು. ಈ ಮುನ್ನ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ. ಬಿ ವಿ ರಾಜೇಶ್‌, ವಿದ್ಯಾರ್ಥಿಗಳಿಗೆ ಕೊವಿಡ್‌ ವಿರುದ್ಧದ […]