ಶಾಂಭವಿ ನದಿಯಲ್ಲಿ ಮುಳುಗಿ ಓರ್ವ ಯುವತಿ ಸಮೇತ ನಾಲ್ವರ ದುರ್ಮರಣ

Tuesday, November 24th, 2020
shambhavi river

ಮೂಡುಬಿದಿರೆ: ಮದುವೆ ಸಮಾರಂಭಕ್ಕೆ ಬಂದಿದ್ದ ಮೂವರು ಯುವಕರು ಹಾಗೂ ಯುವತಿ ಕಡಂದಲೆಯ ತುಲೆಮುಗೇರ್ ಎಂಬಲ್ಲಿ ಶಾಂಭವಿ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಗಳವಾರ ವರದಿಯಾಗಿದೆ. ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ  ಕಡಂದಲೆ ಶ್ರೀಧರ ಆಚಾರ್ಯ ಅವರ ಮನೆಗೆ ಮದುವೆ ಸಮಾರಂಭಕ್ಕೆ ಬಂದಿದ್ದ ಮೂವರು ಯುವಕರು ಹಾಗೂ ಯುವತಿ ಶಾಂಭವಿ ನದಿಯ ತುಲೆಮುಗೇರ್ ಎಂಬಲ್ಲಿ ನದಿಯಲ್ಲಿ ಈಜಲು ಹೋದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ವಾಮಂಜೂರು ಮೂಡುಶೆಡ್ಡೆಯ ನಿಖಿಲ್ (18) ಹಾಗೂ ಅರ್ಶಿತಾ( 20), ವೇಣೂರಿನ ಸುಬಾಸ್(19), ಬಜ್ಪೆ ಪೆರಾರದ ರವಿ […]

ದ.ಕ. ಜಿಲ್ಲೆಯಲ್ಲಿ ಭಾರಿ ಮಳೆ ಸಂಪರ್ಕ ರಸ್ತೆ, ಮನೆಗಳು ಕುಸಿತ, ಹಲವೆಡೆ ಜಲಾವೃತ

Sunday, September 20th, 2020
neerumarga

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಕಳೆದ 24ಗಂಟೆಗಳಲ್ಲಿ ಸುರಿದ ಮಳೆಯಿಂದಾಗಿ  ನಗರ ಹೊರವಲಯದ ನೀರುಮಾರ್ಗ ಮತ್ತು ಬಜ್ಪೆ ಸಮೀಪದ ಆದ್ಯಪಾಡಿ ಎಂಬಲ್ಲಿ ಭೂ ಕುಸಿದ ಪರಿಣಾಮ ಸಂಪರ್ಕ ರಸ್ತೆ ಕಡಿದು ಹೋಗಿದೆ.‌ ಮುನ್ನೆಚ್ಚರಿಕೆಯ ಕ್ರಮವಾಗಿ ಈ ಭಾಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ . ಅದಲ್ಲದೆ ಸರಿಪಳ್ಳ ಎಂಬಲ್ಲಿ ಮನೆ ಯೊಂದು ಕುಸಿದ ಪರಿಣಾಮ ಇಬ್ಬರಿಗೆ‌ ಗಾಯವಾಗಿದ್ದು, ಅವರನ್ನು‌ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದ ಜಪ್ಪಿನಮೊಗರು, ಕುದ್ರೋಳಿ ಮತ್ತಿತರ ಕಡೆ ನೀರು ನಿಲುಗಡೆಯಾಗಿದ್ದು, ಆತಂಕ ಸೃಷ್ಟಿಯಾಗಿದೆ. ನಗರದ ಫಳ್ನೀರ್ ರಸ್ತೆಯ […]