ಅಂತಾರಾಷ್ಟ್ರೀಯ ಹಾಕಿಗೆ ಖ್ಯಾತ ಡಿಫೆಂಡರ್‌ ಸುನೀತಾ ಲಾಕ್ರ ವಿದಾಯ

Friday, January 3rd, 2020
sunitha

ನವದೆಹಲಿ : ಭಾರತೀಯ ವನಿತಾ ತಂಡದ ಖ್ಯಾತ ಡಿಫೆಂಡರ್‌ ಸುನೀತಾ ಲಾಕ್ರಾ ಅಂತಾರಾಷ್ಟ್ರೀಯ ಹಾಕಿಗೆ ಗುರುವಾರ ವಿದಾಯ ಘೋಷಿಸಿದರು. ಸತತವಾಗಿ ಕಾಡುತ್ತಿರುವ ಮಂಡಿನೋವಿನಿಂದಾಗಿ ತಾನು ಈ ಕಠಿನ ನಿರ್ಧಾರ ತೆಗೆದುಕೊಳ್ಳ ಬೇಕಾಯಿತು ಎಂದರು. ಇದರೊಂದಿಗೆ ಅವರ ಟೋಕಿಯೊ ಒಲಿಂಪಿಕ್ಸ್‌ ಕನಸು ಛಿದ್ರಗೊಂಡಿದೆ. “ಇಂದು ನನ್ನ ಬದುಕಿನ ಅತ್ಯಂತ ದುಃಖದ ದಿನ. ನಾನು ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಹೇಳುತ್ತಿದ್ದೇನೆ’ ಎಂದರು. ಸುನೀತಾ ಲಾಕ್ರಾ 2008ರಲ್ಲಿ ಮೊದಲ ಸಲ ಭಾರತ ತಂಡವನ್ನು ಪ್ರವೇಶಿಸಿದ್ದರು. 2018ರ ಏಶ್ಯನ್‌ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿ […]

ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಂತಾರಾಷ್ಟ್ರೀಯ ಹಾಕಿಪಟು ನಿತಿನ್ ತಿಮ್ಮಯ್ಯ

Wednesday, December 26th, 2018
nitin

ಕೊಡಗು: ಅಂತಾರಾಷ್ಟ್ರೀಯ ಹಾಕಿಪಟು ಕೊಡಗಿನ ನಿತಿನ್ ತಿಮ್ಮಯ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಾಸಗಿ ಸಂಸ್ಥೆ ಉದ್ಯೋಗಿ ವಿಷ್ಮಾ ದೇಚ್ಚಮ್ಮರನ್ನು ನಿತಿನ್ ತಿಮ್ಮಯ್ಯ ವರಿಸಿದ್ದಾರೆ. ವಿರಾಜಪೇಟೆ ಮತ್ತು ಕೇರಳ ಗಡಿಗೆ ಹೊಂದಿಕೊಂಡಿರುವ ಬಾಳುಗೋಡುವಿನ ಕೊಡವ ಸಮಾಜದ ಒಕ್ಕೂಟಗಳ ಕಲ್ಯಾಣ ಮಂಟಪದಲ್ಲಿ ಕೊಡಗಿನ ಸಂಪ್ರದಾಯದಂತೆ ಮದುವೆ ಸಮಾರಂಭ ನಡೆಯಿತು. ನಿತಿನ್ ತಿಮ್ಮಯ್ಯ ವಿವಾಹ ಸಮಾರಂಭದಲ್ಲಿ ಏಕಲವ್ಯ ಪ್ರಶಸ್ತಿ ವಿಜೇತ ವಿನಯ್, ಅರ್ಜುನ ಪ್ರಶಸ್ತಿ ವಿಜೇತ ವಿ. ಆರ್ ರಘುನಾಥ್, ಹಾಕಿ ಇಂಡಿಯಾ ಮುಖ್ಯಸ್ಥ ಎ. ಬಿ. ಸುಬ್ಬಯ್ಯ, ಸೇರಿದಂತೆ ಕುಟುಂಬದ […]