ನಕಲಿ ಎಂಡೋ ಸಂತ್ರಸ್ತ ಎಂದು ಹೇಳಿದ ವಸಂತ ಬಂಗೇರ ವಿರುದ್ಧ ದೂರು ನೀಡಲು ನಿರ್ಧಾರ
Wednesday, June 14th, 2017ಮಂಗಳೂರು: ನನ್ನನ್ನು ನಕಲಿ ಎಂಡೋ ಸಂತ್ರಸ್ತ ಎಂದು ಹೇಳುವ ಮೂಲಕ ಶಾಸಕ ಅಪಮಾನ ಮಾಡಿದ್ದಾರೆ. ಸರ್ಕಾರದ ತಜ್ಞ ವೈದ್ಯರೇ ಅಧಿಕೃತವಾಗಿ ನನ್ನನ್ನು ಎಂಡೋ ಸಂತ್ರಸ್ತನೆಂದು ಘೋಷಿಸಿದ ಮೇಲೂ ಶಾಸಕರು ಆಧಾರ ರಹಿತವಾಗಿ ಆರೋಪ ಮಾಡಿದ್ದಾರೆ. ಇದರಿಂದಾಗಿ ನೊಂದಿದ್ದು, ಕಾನೂನು ರೀತಿಯ ಹೋರಾಟಕ್ಕೂ ನಿರ್ಧರಿಸಿದ್ದೇನೆ. ಅಲ್ಲದೆ ಕಾನತ್ತೂರ್ ಕ್ಷೇತ್ರಕ್ಕೂ ಸತ್ಯಪ್ರಮಾಣಕ್ಕಾಗಿ ಆಹ್ವಾನಿಸುತ್ತಿದ್ದೇನೆ ಎಂದು ಕೊಕ್ಕಡದ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಹೇಳಿದರು. ವಿಧಾನಸಭೆಯಲ್ಲಿ ಎಂಡೋ ಸಂತ್ರಸ್ತರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಬೆಳ್ತಂಗಡಿ ಶಾಸಕ ವಸಂತ […]