ಪ್ಲಾಸ್ಟಿಕ್ ನಿರ್ಮೂಲನೆಗೆ ಪರಿಸರ ಸ್ನೇಹಿ ಜೂಟ್ ಉತ್ಪನ್ನಗಳನ್ನು ಬಳಸಿ-ರಜನಿದುಗ್ಗಣ್ಣ

9:46 PM, Wednesday, January 5th, 2011
Share
1 Star2 Stars3 Stars4 Stars5 Stars
(No Ratings Yet)
Loading...

ಮೇಯರ್ ರಜನಿ ದುಗ್ಗಣ್ಣಮಂಗಳೂರು ಜ 5 :-ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ನಿರ್ಮೂಲನೆಗೆ ಪರಿಸರ ಸ್ನೇಹಿ ದೇಶಿಯ ಉತ್ಪನ್ನ ಸೆಣಬಿನ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುವಂತೆ ಮಂಗಳೂರು ಮಹಾನಗರಪಾಲಿಕೆ ಮೇಯರ್ ರವರಾದ ಶ್ರೀಮತಿ ರಜನಿ ದುಗ್ಗಣ್ಣ ಅವರು ಜನತೆಗೆ ಕರೆ ನೀಡಿದ್ದಾರೆ.
ಅವರು ಇಂದು ಮಂಗಳೂರಿನಲ್ಲಿ ರಾಷ್ಟ್ರೀಯ ಸೆಣಬು ಮಂಡಳಿ ದಕ್ಷಿಣ ಚೆನ್ನೈ ಇವರ ವತಿಯಿಂದ ಜನವರಿ 5ರಿಂದ 9 ರ ವರೆಗೆ ಐದು ದಿನಗಳ ಕಾಲ ನಡೆಯಲಿರುವ ಸೆಣಬು ಉತ್ಪನ್ನಗಳ ಮಾರಾಟ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಜೂಟ್ ಉತ್ಪನ್ನಈ ಮಾರಾಟ ಪ್ರದರ್ಶನದಲ್ಲಿ ಪಶ್ಚಿಮ ಬಂಗಾಳ,ತಮಿಳುನಾಡು,ಕರ್ನಾಟಕ,ಪಾಂಡಿಚೇರಿ ಸೇರಿದಂತೆ ದೇಶದ ನಾನಾ ರಾಜ್ಯಗಳ ಸೆಣಬು ಉತ್ಪನ್ನಗಳ ಮಾರಾಟಗಾರರು ತಮ್ಮ ವಿವಿಧ ಉತ್ಪನ್ನಗ್ಳಾದ ಊಟದ ಬುತ್ತಿ ಬ್ಯಾಗ್, ಬೀಚ್ ಬ್ಯಾಗ್, ಜೂಟ್ ಫೈಲ್ ಬ್ಯಾಗ್,ಶಾಪ್ಪಂಗ್ ಮತ್ತು ಫ್ಯಾನ್ಸಿ ಕ್ಯಾರಿ ಬ್ಯಾಗ್,ಗೋಡೆ ಸೌಂದರ್ಹಯ ಹೆಚ್ಚಿಸುವ ಅಲಂಕಾರಿಕ ವಸ್ತುಗಳು,ಬೀಗದ ಕೈಗೊಂಚಲು ಹೀಗೆ ನೂರಾರು ಬಗೆಬಗೆಯ ಜೂಟ್(ನಾರಿನ) ಉತ್ಪನ್ನಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.ಕನಿಷ್ಠ 10 ರೂ.ಗಳಿಂದ ಗರಿಷ್ಠ 1500 ರೂ.ವರೆಗಿನ ಪದಾರ್ಥಗಳು ಗ್ರಾಹಕರ ಕೈಗೆಟಕುವ ದರಗಳಲ್ಲಿ ಪ್ರದರ್ಶಿಸಲಾಗಿದೆಯೆಂದು ನ್ಯಾಷನಲ್ ಜೂಟ್ ಬೋರ್ಡ್ ನ(ದಕ್ಷಿಣ) ಮಾರ್ಕೆಟಿಂಗ್ ಪ್ರಮೋಷನ್ ಅಧಿಕಾರಿ ಶ್ರೀ ಟಿ.ಅಯ್ಯಪ್ಪ ತಿಳಿಸಿದರು.
ಜೂಟ್ ಉತ್ಪನ್ನರಾಷ್ಟ್ರದಲ್ಲಿ 1187 ಕುಟುಂಬ ಘಟಕಗಳು ಸೆಣಬು ಉದ್ಯಮದಲ್ಲಿ ತೊಡಗಿದ್ದು ಸುಮಾರು 1,83,200 ಕ್ಕೂ ಹೆಚ್ಚು ಜನವರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಸೃಜಿಸಿದೆ ಎಂದ ಅಯ್ಯಪ್ಪ ದೇಶದಲ್ಲಿರುವ 77 ಸೆಣಬು ಕಂಪೆನಿಗಳಿಂದ ವಾರ್ಷಿಕ 1.60 ಮಿಲಿಯನ್ ಮೆಟ್ರಿಕ್ ಟನ್ ಗಳಷ್ಟು ಸೆಣಬು ಉತ್ಪನ್ನ ಉತ್ಪಾದಿಸಲಾಗುತ್ತಿದೆ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English