ಗೋಸಂರಕ್ಷಣೆಯ ಬಗ್ಗೆ ಇಸ್ಲಾಂ ಧರ್ಮದ ಖುರಾನ್‌ನಲ್ಲಿ ಉಲ್ಲೇಖಿಸಲಾಗಿದೆ : ಮೊಹಮ್ಮದ್ ಪೈಜ್ ಖಾನ್

7:23 PM, Tuesday, January 5th, 2016
Share
1 Star2 Stars3 Stars4 Stars5 Stars
(5 rating, 4 votes)
Loading...
Kuran

ಬದಿಯಡ್ಕ: ಪೂಜನೀಯ ಗೋಮಾತೆ ಮತ-ಧರ್ಮಗಳನ್ನು ಪರಸ್ಪರ ಒಂದುಗೂಡಿಸುವಂತಹ ಶಕ್ತಿ. ಗೋಸಂರಕ್ಷಣೆಯ ಬಗ್ಗೆ ಇಸ್ಲಾಂ ಧರ್ಮದಲ್ಲೂ ಪೂಜನೀಯತೆಯ ಸ್ಥಾನವನ್ನು ನೀಡಬೇಕೆಂದು ಪವಿತ್ರ ಖುರಾನ್‌ನಲ್ಲಿ ಉಲ್ಲೇಖಿಸಲಾಗಿದೆ. ಯಾವ ದೇಶದಲ್ಲಿ ಇಸ್ಲಾಂ ಮತಾನುಯಾಯಿ ಬದುಕುತ್ತಾನೋ ಅಲ್ಲಿ ಆ ದೇಶದ ನಂಬಿಕೆಯನ್ನು ಗೌರವಿಸಬೇಕೆಂದು ಪೈಗಂಬರರು ಸಾರಿದ್ದಾರೆಂದು ಖ್ಯಾತ ಗೋ ಕಥನಕಾರ ಮೊಹಮ್ಮದ್ ಪೈಜ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಯುವ ಬ್ರಿಗೇಡ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸೋಮವಾರ ಬದಿಯಡ್ಕದ ಗಣೇಶ ಮಂದಿರದಲ್ಲಿ ಆಯೋಜಿಸಲಾದ ಗೋ ಕಥೆ ಅಂಬೆಯ ಕೂಗು ವಿಶೇಷೋಪನ್ಯಾಸದಲ್ಲಿ ಅವರು ಮಾತನಾಡುತ್ತಿದ್ದರು.

ಜೀವ-ಜೀವಗಳಲ್ಲಿ ಪರಮಾತ್ಮನನ್ನು ಕಾಣುವುದು ವಿಶಾಲ ಭಾರತೀಯ ಸಂಸ್ಕೃತಿಯ ಪ್ರತೀಕ.ಭಾರತದ ಸಂಸ್ಕೃತಿ,ಆಚರಣೆಗಳ ಹಿಂದೆ ಆಧ್ಯಾತ್ಮಿಕತೆ,ಆದಿ ಭೌತಿಕತೆ ಜೊತೆಗೆ ವಿಶಾಲ ವಿಶ್ವ ವ್ಯಾಪಿ ವೈಜ್ಞಾನಿಕ ಹಿನ್ನೆಲೆಗಳಿವೆಯೆಂದು ಅವರು ತಿಳಿಸಿದರು.ದೇಸೀ ಗೋವಿನ ಸಂರಕ್ಷಣೆಯಿಂದ ಭಾರತಕ್ಕೆ ಮಾತ್ರವಲ್ಲದೆ ಜಗತ್ತಿಗೇ ಒಳಿತಿದೆಯೆಂದು ತಿಳಿಸಿದ ಅವರು,ವಾತಾವರಣದ ಓಝೋನ್ ಪದರದ ಒಳಿತಿಗೆ ಗೋ ಉತ್ಪನ್ನಗಳನ್ನು ಬಳಸಿ ನಿರ್ವಹಿಸುವ ಹನಗಳ ಪಾತ್ರವನ್ನು ಬಿಚ್ಚಿಟ್ಟರು.ಜಗತ್ತಿನಲ್ಲಿ ಮಾತೆ ಎಂದು ಕರೆಸಿ ಪೂಜಿಸಲ್ಪಡುವ ಗೋವಿನ ಬಗ್ಗೆ ವೃಥಾ ಗೊಂದಲ,ವಿವಾದಗಳು ನಾಗರಿಕ ಪ್ರಪಂಚಕ್ಕೆ ಒಪ್ಪುವಂತದ್ದಲ್ಲವೆಂದು ಅವರು ತಿಳಿಸಿದರು.

ಯುವ ಬ್ರಿಗೇಡ್ ಕರ್ನಾಟಕ ರಾಜ್ಯ ಪ್ರಚಾರ ಪ್ರಮುಖ್ ದಯಾ ಆಕಾಶ್ ಅಧ್ಯಕ್ಷತೆ ವಹಿಸಿದ್ದರು.ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಅಡ್ವ.ಶ್ರೀಕಾಂತ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಭಾರತದ ಸಂವಿಧಾನದಲ್ಲಿ ಗೋಸಂರಕ್ಷಣೆಗೆ ಅವಕಾಶ ಕಲ್ಪಿಸಿ ಉಲ್ಲೇಖಗಳಿವೆ.ಆದರೆ ಅದರ ಅನುಸರಣೆಯಲ್ಲಿ ವ್ಯಾಪಕ ಹಿಂದುಳಿಯುವಿಕೆ ಕಂಡುಬಂದಿದೆಯೆಂದು ತಿಳಿಸಿದರು.ಗೋವಿನ ಬಗ್ಗೆ ಕೋಮುವಾದಿ ಭಾವನೆ ಬೇಡ ಎಂದು ತಿಳಿಸಿದ ಅವರು ಗೋ ಸಂರಕ್ಷಣೆ,ಆ ಬಗೆಗಿನ ಕಾರ್ಯಚಟುವಟಿಕೆಗಳನ್ನು ಜಾತಿ,ಧರ್ಮಗಳ ಹೆಸರಿಗಂಟಿಸುವ ಸ್ಥಾಪಿತ ಹಿತಾಸಕ್ತಿ ಚಿಂತನೆಗಳು ಬೇಡವೆಂದು ತಿಳಿಸಿದರು.

ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ ಗೌರವಾಭಿಮಾನಗಳಿಂದ ಗೋ ಸಂರಕ್ಷಣೆಯ ಕಾರ್ಯಚಟುವಟಿಕೆಗಳನ್ನು ಮಾಡುವ ಅಗತ್ಯವಿದೆಯೆಂದು ತಿಳಿಸಿದರು. ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ರಾಮಚಂದ್ರ ಬಲ್ಲಾಳ್ ನಾಟೆಕಲ್ಲು,ಸಹ ಸಂಚಾಲಕ ಕೃಷ್ಣ ಪ್ರಸಾದ್ ಉಪಸ್ಥಿತರಿದ್ದರು.ಶ್ಯಾಮ ಕಶ್ಯಪ್ ಪ್ರಾಸ್ತಾವಿಕವಾಗಿ ಮಾತನಾಡಿದರು.ರಕ್ಷಿತ್ ಮಜಲು ಸ್ವಾಗತಿಸಿ,ಪ್ರಶಾಂತ್ ವಂದಿಸಿದರು.ಗೋವಿನ ಬಗ್ಗೆ ವಿಶೇಷ ಸೇವೆಗಳಲ್ಲಿ ನಿರತರಾಗಿರುವ ಮುಣ್ಚಿಕ್ಕಾನ ಗಣೇಶ್ ಭಟ್,ಮಣಿಕಂಠ ಪ್ರೆಂಡ್ಸ್ ಕ್ಲಬ್ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಮೊಹಮ್ಮದ್ ಪೈಜ್ ಖಾನ್ ರವರು ಮುಣ್ಚಿಕ್ಕಾನ ಗಣೇಶ್ ಭಟ್ ರವರು ಕಾರ್ಯಕ್ರಮದ ಪರಿಸರಕ್ಕೆ ತಂದಿದ್ದ ತಮ್ಮ ಸಂಚಾರಿ ಗೋ ರಥದಲ್ಲಿದ್ದ ಗೋವಿಗೆ ಆರತಿ ಬೆಳಗಿ ತಿಲಕ,ಪುಷ್ಪ ಮಾಲೆಗಳನ್ನು ತೊಡಿಸಿ ಪೂಜಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English