ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿ ಎಸಿಬಿ ಬಲೆಗೆ

10:18 AM, Friday, April 6th, 2018
Share
1 Star2 Stars3 Stars4 Stars5 Stars
(No Ratings Yet)
Loading...

harish-kumarಮಂಗಳೂರು: 94 ಸಿ ಅಡಿ ಜಾಗ ಮಂಜೂರಾತಿಗೆ ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಯನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ.

ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಮಹಿಳೆಯೊಬ್ಬರ ದೂರಿನ ಮೇರೆಗೆ ಪುತ್ತಿಲ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಹರೀಶ್ ಕುಮಾರ್ ಮಹಿಳೆಯಿಂದ 5000 ರೂ. ಲಂಚದ ಹಣವನ್ನು ಸ್ವೀಕರಿಸುವಾಗ ಎಸಿಬಿ ಪೊಲೀಸರಿಗೆ ರೆಡ್ ಹಾಂಡ್ ಆಗಿ ಟ್ರ್ಯಾಪ್ ಆಗಿದ್ದಾರೆ.

ಮಹಿಳೆಯು 94-ಸಿ ಅಡಿಯಲ್ಲಿ ಜಾಗ ಮಂಜೂರಿಗಾಗಿ ಅರ್ಜಿ ಸಲ್ಲಿಸಿದ್ದು ಸುಮಾರು ಒಂದೂವರೆ ವರ್ಷ ಆದರೂ ಅವರ ಅರ್ಜಿಯನ್ನು ಗ್ರಾಮ ಲೆಕ್ಕಾಧಿಕಾರಿಯವರು ಬಾಕಿ ಇಟ್ಟುಕೊಂಡಿದ್ದರಂತೆ. ಪ್ರತಿ ಸಲ ಹೋಗಿ ಕೇಳಿದಾಗ ಲಂಚದ ಹಣಕ್ಕೆ ಬೇಡಿಕೆ ಇಟ್ಟು ಕಾಲ ವಿಳಂಬ ಮಾಡಿದ್ದರಂತೆ. ಅರ್ಜಿದಾರರಿಂದ ಈ ಹಿಂದೆ 3,000 ಕೆಲಸದ ಪ್ರಯುಕ್ತ ಲಂಚ ಪಡೆದಿದ್ದರು ಎನ್ನಲಾಗಿದೆ.

ಭ್ರಷ್ಟಾಚಾರ ನಿಗ್ರಹ ದಳ ಪಶ್ಚಿಮ ವಲಯ ಪೊಲೀಸ್ ಅಧೀಕ್ಷಕಿ ಶೃತಿ ಎನ್.ಎಸ್. ಮಾರ್ಗದರ್ಶನದಲ್ಲಿ ಎಸಿಬಿ ಡಿವೈಎಸ್ಪಿ ಸುಧೀರ್ ಎಂ. ಹೆಗಡೆ ನೇತೃತ್ವದ ತಂಡದಲ್ಲಿ ಪೊಲೀಸ್ ನಿರೀಕ್ಷಕ ಮೋಹನ್ ಕೊಟ್ಟಾರಿ, ಸಿಬ್ಬಂದಿಯವರಾದ ಹರಿಪ್ರಸಾದ್ ಉಮೇಶ್, ರಾಧಕೃಷ್ಣ, ಪ್ರಶಾಂತ್, ರಾಧಕೃಷ ಡಿ.ಎ., ವೈಶಾಲಿ, ರಾಕೇಶ್, ಗಣೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English