ಏಶ್ಯನ್‌ ಪವರ್‌ಲಿಫ್ಟಿಂಗ್‌ ಸ್ಪರ್ಧಾ ವಿಜೇತರಿಗೆ ಮಂಗಳೂರಿನಲ್ಲಿ ಅದ್ದೂರಿ ಸ್ವಾಗತ

7:19 PM, Thursday, December 15th, 2011
Share
1 Star2 Stars3 Stars4 Stars5 Stars
(4 rating, 1 votes)
Loading...

Champions

ಮಂಗಳೂರು: ಡಿ. 5 ರಿಂದ 9 ರ ವರೆಗೆ ಜಪಾನ್‌ನ ಕೋಬೆಸಿಟಿಯಲ್ಲಿ ನಡೆದ ಏಶ್ಯನ್‌ ಪವರ್‌ಲಿಫ್ಟಿಂಗ್‌ ಸ್ಪರ್ಧಾ ಕೂಟದಲ್ಲಿ ಪದಕ ವಿಜೇತರಾದವರನ್ನು ಬುಧವಾರ ನಗರದ ಕೇಂದ್ರ ರೈಲು ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಏಶ್ಯನ್‌ ಪವರ್‌ಲಿಫ್ಟಿಂಗ್‌ನಲ್ಲಿ ಕರ್ನಾಟಕ ಒಟ್ಟು 18 ಪದಕಗಳನ್ನು ಪಡೆದಿದೆ. ಜಿಲ್ಲೆಗೆ ಒಟ್ಟು 13 ಪದಕಗಳು ಬಂದಿವೆ. ವಿಜೇತರನ್ನು ಮೇಯರ್‌ ಪ್ರವೀಣ್‌ ಸೇರಿದಂತೆ ಹಲವು ಗಣ್ಯರು, ಬಾಲಾಂಜನೆಯ ಜಿಮ್ನೇಶಿಯಂನ ಪದಾಧಿಕಾರಿಗಳು ಸ್ವಾಗತಿಸಿದರು. ಬಳಿಕ ತೆರೆದ ವಾಹನದಲ್ಲಿ ಕಾರ್‌ಸ್ಟ್ರೀಟ್‌ ಹಾಗೂ ಎಸ್ ಡಿಎಂ ಕಾಲೇಜಿನ ವರೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

ಬಾಲಾಂಜನೇಯ ಜಿಮ್ನೇಶಿಯಂನ ಪ್ರಸಾದ್‌ ಶೆಟ್ಟಿ 1 ಚಿನ್ನ, 2 ಕಂಚು, ವಿಜಯ ಕಾಂಚನ್‌ 3 ಬೆಳ್ಳಿ, 1 ಕಂಚು, ಉಜಿರೆ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿಯರಾದ ನೇಹಾ ಎಚ್‌. 1 ಬೆಳ್ಳಿ, 2 ಕಂಚು, ವಿನುತಾ ಎಂ. 3 ಬೆಳ್ಳಿ, 1 ಕಂಚಿನ ಪದಕ ಗಳಿಸಿದ್ದಾರೆ. ಸತೀಶ್‌ ಕುಮಾರ್‌ ಕುದ್ರೋಳಿ ಅವರು ಭಾರತ ತಂಡದ ತರಬೇತುದಾರರಾಗಿ ಭಾಗವಹಿಸಿದ್ದರು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English