ದೋಣಿ ಎಳೆಯುತ್ತಿರುವ ವೇಳೆ ಬೃಹತ್ ಅಲೆ ಅಪ್ಪಳಿಸಿ ಓರ್ವ ಸಾವು..ಇನ್ನೋರ್ವ ನಾಪತ್ತೆ!

3:56 PM, Wednesday, July 25th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

died-seaಉಡುಪಿ: ಮಲ್ಪೆಯ ಪಡುಕರೆ ತೀರದಲ್ಲಿ ದೋಣಿ ಎಳೆಯುತ್ತಿರುವ ವೇಳೆ ಬೃಹತ್ ಅಲೆ ಅಪ್ಪಳಿಸಿದ ಪರಿಣಾಮ ಓರ್ವ ಮೃತಪಟ್ಟು, ಇನೋರ್ವ ಸಮುದ್ರ ಪಾಲಾಗಿರುವ ಬಗ್ಗೆ ಬುಧವಾರ ಬೆಳಗ್ಗೆ ವರದಿಯಾಗಿದೆ.

ಮೃತರನ್ನು ಉದ್ಯಾವರ ಪಿತ್ರೋಡಿಯ ನಿತೇಶ್ (29) ಎಂದು ಗುರುತಿಸಲಾಗಿದ್ದು, ಅವರಿಗೆ 7 ತಿಂಗಳ ಹಿಂದೆ ವಿವಾಹವಾಗಿತ್ತು. ನಿಶಾಂತ್ ಎಂಬವರು ನೀರು ಪಾಲಾಗಿದ್ದು, ನಾಪತ್ತೆಯಾಗಿದ್ದಾರೆ.

ಇಂದು ಬೆಳಗ್ಗೆ ಮೀನುಗಾರಿಕೆ ಮುಗಿಸಿ ದಡಕ್ಕೆ ಬಂದಿದ್ದು, ಸುಮಾರು 200 ಮೀ. ದೂರದಲ್ಲಿ ಎಂಬತ್ತಕ್ಕೂ ಅಧಿಕ ಮಂದಿ ದೋಣಿಯನ್ನು ದಡಕ್ಕೆ ಎಳೆಯುವ ವೇಳೆ ಬೃಹತ್ ಅಲೆ ಅಪ್ಪಳಿಸಿದೆ ಎಂದು ತಿಳಿದುಬಂದಿದೆ.

ಘಟನೆಯಿಂದ ಇಬ್ಬರು ಯುವಕರು ನೀರಿನ ಸೆಲೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದು, ಓರ್ವನ ಮೃತ ದೇಹ ಅಲ್ಲೇ ಸಮೀಪ ಪತ್ತೆಯಾಗಿದ್ದು, ಇನೋರ್ವ ನೀರಿನಲ್ಲಿ ನಾಪತ್ತೆಯಾಗಿದ್ದಾರೆ.

ಮಲ್ಪೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English