ರಾಷ್ಟ್ರಧ್ವಜದ ಅವಮಾನ ತಡೆಗಟ್ಟುವ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ಮನವಿ

9:20 PM, Saturday, August 4th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

HJSಪುತ್ತೂರು : ಉಚ್ಚನ್ಯಾಯಾಲಯದ ಆದೇಶದಂತೆ ರಾಷ್ಟ್ರಧ್ವಜದ ಅವಮಾನವನ್ನು ತಡೆಯಲು ಹಾಗೂ ರಾಜ್ಯ ಸರ್ಕಾರದಿಂದ ಪ್ಲಾಸ್ಟಿಕ್ ಮೇಲಿನ ನಿರ್ಬಂಧದ ನಿರ್ಣಯದ ಕುರಿತು ಕ್ರಮಕೈಗೊಳ್ಳುವ ಕುರಿತು ಪುತ್ತೂರು ಉಪವಿಭಾಗಾಧಿಕಾರಿಯವರ ಕಛೇರಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮನವಿ ನೀಡಲಾಯಿತು.

ರಾಷ್ಟ್ರಧ್ವಜವು ರಾಷ್ಟ್ರದ ಗೌರವವಾಗಿದೆ! ಆದರೆ ದುರ್ದೈವದಿಂದ ಹೆಚ್ಚಿನ ಭಾರತೀಯರಿಗೆ ಇದರ ನೆನಪು ಕೇವಲ 15 ಅಗಸ್ಟ್ ಮತ್ತು 26 ಜನವರಿಯಂದು ಮಾತ್ರ ಆಗುತ್ತದೆ. ಈ ದಿನದಂದು ರಾಷ್ಟ್ರಧ್ವಜವನ್ನು ಅತ್ಯಂತ ಗೌರವದಿಂದ ಹಾರಿಸಲಾಗುತ್ತದೆ ! ಆದರೆ ಇದೇ ಕಾಗದದಿಂದ / ಪ್ಲಾಸ್ಟಿಕ್ ನಿಂದ ತಯಾರಿಸಿದ ರಾಷ್ಟ್ರಧ್ವಜವು ಸಂಜೆಯಾಗುತ್ತಿದ್ದಂತೆ ರಸ್ತೆಯ ಮೇಲೆ, ಕಸದ ಬುಟ್ಟಿಯಲ್ಲಿ, ಚರಂಡಿಯಲ್ಲಿ ಇತ್ಯಾದಿ ಸ್ಥಳದಲ್ಲಿ ಬಿದ್ದಿರುವುದನ್ನು ಕಾಣುತ್ತೇವೆ. ಪ್ಲಾಸ್ಟಿಕನಿಂದ ತಯಾರಾದ ರಾಷ್ಟ್ರಧ್ವಜವಂತೂ ನಾಶವೂ ಆಗುವುದಿಲ್ಲ, ಇದರಿಂದ ಹಲವು ದಿನಗಳವರೆಗೆ ನಮಗೆ ಆ ರಾಷ್ಟ್ರಧ್ವಜದ ಅಗೌರವವನ್ನು ನೋಡಬೇಕಾಗುತ್ತದೆ.

ರಾಷ್ಟ್ರಧ್ವಜದ ಈ ರೀತಿಯಲ್ಲಾಗುವ ಅಗೌರವವನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮುಂಬೈ ಉಚ್ಚನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ದಾವೆಯನ್ನು (ದಾವೆ ಸಂ. 103/2011) ಹೂಡಲಾಗಿದೆ. ಇದರ ಬಗ್ಗೆ ಆಲಿಕೆಯನ್ನು ಮಾಡುತ್ತ ನ್ಯಾಯಾಲಯವು ಪ್ಲಾಸ್ಟಿಕನ ರಾಷ್ಟ್ರಧ್ವಜದ ಅಗೌರವವನ್ನು ತಡಗಟ್ಟಲು ಸರ್ಕಾರಕ್ಕೆ ಆದೇಶವನ್ನು ಕೊಡಲಾಗಿತ್ತು ಅದಕ್ಕನುಸಾರ ಕೇಂದ್ರೀಯ ಮತ್ತು ರಾಜ್ಯದ ಗೃಹ ವಿಭಾಗ ಮತ್ತು ಶಿಕ್ಷಣ ವಿಭಾಗದ ಮೂಲಕ ಈ ವಿಷಯ ಕುರಿತು ಒಂದು ಸುತ್ತೋಲೆಯನ್ನು ಹೊರಡಿಸಿದೆ. ಇತ್ತೀಚಿನ ದಿನದಲ್ಲಿ ಸರ್ಕಾರವು ‘ಪ್ಲಾಸ್ಟಿಕ ನಿರ್ಬಂಧ’ದ ನಿರ್ಣಯವನ್ನೂ ತೆಗೆದುಕೊಂಡಿದೆ. ಇದರ ಪ್ರಕಾರ ಪ್ಲಾಸ್ಟಿಕನ ರಾಷ್ಟ್ರಧ್ವಜದ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ. ಉಚ್ಚ ನ್ಯಾಯಾಲಯವು ವಿಶೇಷವಾಗಿ ಸರ್ಕಾರಕ್ಕೆ ಆದೇಶವನ್ನು ಕೊಡುವುದರ ಮೂಲಕ ಸರ್ಕಾರವು ರಾಷ್ಟ್ರಧ್ವಜದ ಅವಮಾನವನ್ನು ತಡೆಯಲು ರಾಷ್ಟ್ರಧ್ವಜ ಗೌರವ ಕಾಪಾಡಲು ಕೃತಿ ಸಮಿತಿಗಳನ್ನು, ಸ್ಥಳಿಯ ಸ್ವಯಂಸೇವಾ ಸಂಸ್ಥೆಗಳನ್ನು ಸೇರಿಸಿ ಮಾಡಬೇಕು ಈ ಉಪಕ್ರಮದ ಅಂತರ್ಗತದಲ್ಲಿ ಪ್ಲಾಸ್ಟಿಕನ ರಾಷ್ಟ್ರಧ್ವಜದ ಮಾಧ್ಯಮದಿಂದ ಆಗುವಂತಹ ಅಗೌರವವನ್ನು ತಡೆಗಟ್ಟಲು ವಿವಿಧ ಮಾಧ್ಯಮದಿಂದ ಜಾಗೃತಿಯನ್ನು ಮಾಡುವುದು ಅನಿವಾರ್ಯವಾಗಿದೆ.

ಉದಾ : ಜಾಹಿರಾತು, ಫಲಕಗಳು, ಕರಪತ್ರಗಳು ಇತ್ಯಾದಿಗಳಿಂದ ಜಾಗೃತಿ ಮೂಡಿಸುವುದು. ಹಿಂದೂ ಜನಜಾಗೃತಿ ಸಮಿತಿಯು ಈ ದಿಶೆಯಿಂದ ಕಳೆದ 16 ವರ್ಷಗಳಿಂದ ರಾಷ್ಟ್ರಧ್ವಜದ ಗೌರವ ಕಾಪಾಡುವ ಅಭಿಯಾನವನ್ನು ಮಾಡುತ್ತಿದೆ. ಇದರ ಅಂತರ್ಗತದಲ್ಲಿ ವಿದ್ಯಾಲಯಗಳಲ್ಲಿ ವ್ಯಾಖ್ಯಾನ ಮಾಡುವುದು, ಪ್ರಶ್ನಾವಳಿಯ ಸ್ಪರ್ಧೆಯನ್ನು ತೆಗೆದುಕೊಳ್ಳುವುದು, ಕರಪತ್ರವನ್ನು ಹಂಚುವುದು, ಪೋಸ್ಟರ್-ಹೋರ್ಡಿಂಗ್ಸ್ ಹಾಕುವುದು, ಸ್ಥಲೀಯ ಕೇಬಲ್ ವಾಹಿನಿಯಲ್ಲಿ ಸೀಡಿ ತೋರಿಸುವುದು, ರಸ್ತೆಯಲ್ಲಿ ಬಿದ್ದಿರುವ ರಾಷ್ಟ್ರಧ್ವಜವನ್ನು ಒಟ್ಟು ಮಾಡುವುದು, ಸಾಮಾಜಿಕ ಸಂಕೇತಸ್ಥಳಗಳ ಮೂಲಕ ಪ್ರಚಾರ ಮಾಡುವುದು ಇತ್ಯಾದಿ ಕಾರ್ಯಗಳನ್ನು ಮಾಡಲಾಗುತ್ತದೆ.

ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿಯವರ ಮ್ಯಾನೇಜರ್, “ರಾಷ್ಟ್ರ ಧ್ವಜದ ಅವಮಾನ ಆಗುತ್ತಿದ್ದಲ್ಲಿ ಸಾರ್ವಜನಿಕರು ನಮ್ಮನ್ನು ಸಂಪರ್ಕಿಸಬಹುದು, ನಾವು ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ” ಎಂದರು.

ಮನವಿ ನೀಡುವ ವೇಳೆ ಹಿಂದೂ ಜನಜಗೃತಿ ಸಮಿತಿಯ ಶ್ರೀ. ಚಂದ್ರ ಮೊಗೇರ, ಶ್ರೀ. ಸಾಂತಪ್ಪ ಗೌಡ, ಶ್ರೀ. ಧರ್ಣಪ್ಪ ಗೌಡ, ಶ್ರೀ ಜನಾರ್ದನ ಗೌಡ, ಶ್ರೀ ರಮೇಶ, ಶ್ರೀ ಯೋಗೀಶ್, ಶ್ರೀ ಕೃಷ್ಣ ಕುಮಾರ್ ಶರ್ಮ, ಶ್ರೀ ಕೇಶವ ಗೌಡ, ಶ್ರೀ ಲೋಕೇಶ್, ಶ್ರೀ ಚಂದ್ರಶೇಖರ್, ಶ್ರೀ, ಹರಿಪ್ರಸಾದ್ ಶೆಟ್ಟಿ, ಶ್ರೀ. ಮಾಧವ ಎಸ್. ರೈ ಕುಂಬ್ರ ಮೊದಲಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English