ಗರುಡಾ ಮಾಲ್ ಬಳಿ ಅಸಭ್ಯ ವರ್ತನೆ: ಆಟೋ ಚಾಲಕ ಅರೆಸ್ಟ್..!

12:57 PM, Tuesday, October 2nd, 2018
Share
1 Star2 Stars3 Stars4 Stars5 Stars
(No Ratings Yet)
Loading...

arrestedಬೆಂಗಳೂರು: ಗರುಡಾ ಮಾಲ್ ಬಳಿ ಅಸಭ್ಯವಾಗಿ ವರ್ತಿಸಿದ್ದ ಆಟೋ ಚಾಲಕನನ್ನ ಅಶೋಕ್ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೈಯದ್ ಮೊಹಿಬ್ ಬಂಧಿತ ಆರೋಪಿಯಾಗಿದ್ದಾನೆ.

ಮೊನ್ನೆ ಸಂಜೆ 5 ಗಂಟೆಗೆ ಗರುಡಾ ಮಾಲ್ ಬಳಿ ಕಾಫಿ ಕುಡಿಯುತ್ತಿದ್ದ ಮಹಿಳೆ ಬಳಿ ಮೊಹಿಬ್ ಅನುಚಿತವಾಗಿ ವರ್ತಿಸಿದ್ದ. ಈ ಘಟನೆ ಬಗ್ಗೆ ಮಹಿಳೆ ಬೆಂಗಳೂರು ನಗರ ಪೊಲೀಸರ ಫೇಸ್ ಬುಕ್ ಖಾತೆಗೆ ವಿಡಿಯೋ ಟ್ಯಾಗ್ ಮಾಡಿದ್ದರು.‌

ಈ ದೂರಿನ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿ, ನಿನ್ನೆ ರಾತ್ರಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಆಟೋವನ್ನು ‌ವಶಪಡಿಸಿಕೊಂಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English