ಕ್ರಿಕೆಟರ್​ ಪತ್ನಿ ಹಸಿನ್ ಜಹಾನ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ..!

1:39 PM, Wednesday, October 17th, 2018
Share
1 Star2 Stars3 Stars4 Stars5 Stars
(No Ratings Yet)
Loading...

mohammed-shamiಮುಂಬೈ: ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಪತ್ನಿ ಹಸಿನ್ ಜಹಾನ್ ಇಂದು ಮುಂಬೈ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಸಂಜಯ್ ನಿರುಪಮ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

ಮೊಹಮ್ಮದ್ ಶಮಿ ವಿರುದ್ಧ ಸರಣಿ ಆರೋಪ ಮಾಡುತ್ತಲೇ ಸುದ್ದಿಕೇಂದ್ರಕ್ಕೆ ಬಂದಿದ್ದ ಹಸಿನ್ ಜಹಾನ್ ಅವರ ಏಕಾಏಕಿ ರಾಜಕೀಯ ಎಂಟ್ರಿ ಕುತೂಹಲಕ್ಕೆ ಕಾರಣವಾಗಿದೆ.

ಶಮಿ ತನಗೆ ವರದಕ್ಷಿಣೆ ಕಿರುಕುಳ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಜೊತೆಗೆ ಅಕ್ರಮ ಸಂಬಂಧವನ್ನೂ ಹೊಂದಿದ್ದಾರೆ ಎಂದು ಪತಿ ಶಮಿ ಮೇಲೆ ಹಸಿನ್ ಆರೋಪ ಮಾಡಿದ್ದಳು. ತನಗೆ ಪ್ರತಿ ತಿಂಗಳು ಶಮಿ ಹತ್ತು ಲಕ್ಷ ನೀಡಬೇಕು ಎಂದು ಹಸಿನ್ ಹಾಕಿದ್ದ ಅರ್ಜಿಯನ್ನು ಕೋಲ್ಕತ್ತಾದ ಅಲಿಪೋರ್ ಕೋರ್ಟ್ ತಳ್ಳಿಹಾಕಿತ್ತು.

ಮಾಡೆಲ್ ಆಗಿರುವ ಹಸಿನ್ ಜಹಾನ್ ಬಾಲಿವುಡ್ಗೆ ಎಂಟ್ರಿ ನೀಡಲಿದ್ದಾಳೆ ಎನ್ನುವ ಸುದ್ದಿಯೂ ಹರಿದಾಡಿತ್ತು. ಆರ್ಥಿಕವಾಗಿ ಸದೃಢವಾಗುವ ನಿಟ್ಟಿನಲ್ಲಿ ಚಿತ್ರದಲ್ಲಿ ನಟಿಸುವುದಾಗಿ ಹಸಿನ್ ಜಹಾನ್ ಹೇಳಿಕೊಂಡಿದ್ದಳು. ಆದರೆ ಈಗ ಜಹಾನ್ ರಾಜಕೀಯ ಸೇರಿ ಅಚ್ಚರಿ ಮೂಡಿಸಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English