ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಲಕ್ಷ ಗಾಯತ್ರಿ ಮಂತ್ರ ಜಪ ಯಜ್ಞ

5:25 PM, Monday, November 19th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

devi-templeಉಡುಪಿ: ದೊಡ್ಡಣ್ಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದಲ್ಲಿ ಲಕ್ಷ ಗಾಯತ್ರಿ ಮಂತ್ರ ಜಪ ಯಜ್ಞ ಹಾಗೂ ಮಹಾ ಅನ್ನಸಂತರ್ಪಣೆ ನ.23 ರಂದು ಜರಗಲಿದೆ.

ನ. 20 ರಂದು ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು ನ. 23 ರಂದು ಬೆಳಗ್ಗೆ 7 ಕ್ಕೆ ಯಜ್ಞ ಆರಂಭಗೊಳ್ಳಲಿದೆ. 10 ಕ್ಕೆ ಮಹಾ ಪೂರ್ಣಾಹುತಿ, 12 ಕ್ಕೆ ಮಹಾಪೂಜೆ, ಅನಂತರ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಅಂದು 11 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಕಾಣಿಯೂರು ಮಠಾದೀಶ ಶ್ರೀ ವಿದ್ಯವಲ್ಲಭತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ.

ಜಪಯಜ್ಞದ ಸವಿನೆನಪಿಗಾಗಿ ಶ್ರೀ ಗಾಯತ್ರಿ ಜಗನ್ಮಾತಾ ಕಿರುಹೊತ್ತಗೆ ಲೋಕಾರ್ಪಣೆಗೊಳ್ಳಲಿದೆ. ಕ್ಷೇತ್ರದ ಧರ್ಮದರ್ಶಿ  ಶ್ರೀ ರಮಾನಂದ ಗುರೂಜಿ ಉಪಸ್ಥಿಯಲ್ಲಿ ಕಾರ್ಯಕ್ರಮ ಜರಾಗಲಿದ್ದು ಕೃಷ್ಣಮೂರ್ತಿ ತಂತ್ರಿ ಮತ್ತು ಜಾನಪದ ವಿದ್ವಾಂಸ ಕೆ . ಎಲ್ . ಕುಂಡಂತಾಯಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಪೂರ್ಣಾಹುತಿಗೆ ಸಮರ್ಪಿಸುವ ಮಂಗಳ ದ್ರವ್ಯಗಳನ್ನು ನೀಡುವವರು ನ. 22 ರ ಸಂಜೆಯೊಳಗೆ ದೇಗುಲಕ್ಕೆ ತಲುಪಿಸಬಹುದು ಎಂದು ಪ್ರಕಟಣೆ ತಿಳಿಸಿದೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English