ಅಂಬರೀಶ್, ಜಾಫರ್ ಶರೀಫ್ ನೀಡಿರುವ ಕೊಡುಗೆಗಳು ಅನನ್ಯ: ಬಿ. ರಮಾನಾಥ ರೈ

11:35 AM, Tuesday, November 27th, 2018
Share
1 Star2 Stars3 Stars4 Stars5 Stars
(No Ratings Yet)
Loading...

congressಮಂಗಳೂರು : ಇತೀಚಿಗೆ ನಿಧನರಾದ ಖ್ಯಾತ ಚಿತ್ರನಟ ಹಾಗೂ ಮಾಜಿ ಸಚಿವರ ಅಂಬರೀಶ್ ಹಾಗೂ ಕೇಂದ್ರದ ಮಾಜಿ ರೈಲ್ವೆ ಸಚಿವ ಜಾಫರ್ ಶರೀಫ್‌ರು ರಾಜ್ಯಕ್ಕೆ ಹಾಗೂ ದೇಶಕ್ಕೆ ನೀಡಿರುವ ಕೊಡುಗೆಗಳು ಅನನ್ಯವಾದುದು ಎಂದು ಮಾಜಿ ಉಸ್ತುವಾರಿ ಸಚಿವರಾದ ಶ್ರೀ ಬಿ. ರಮಾನಾಥ ರೈ ಹೇಳಿದರು.

ದಿನಾಂಕ ೨೬-೧೧-೨೦೧೮ ರಂದು ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಎರ್ಪಡಿಸಿದ ಸಂತಾಪ ಸೂಚಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ದೇಶದಲ್ಲಿ ರೈಲ್ವೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದು ವಿಕಾಸಕ್ಕೆ ಕಾರಣ ಪುರುಷರಾದ ಜಾಫರ್ ಶರೀಫ್‌ರು ಸಜ್ಜನ ರಾಜಕಾರಣಿಯಾಗಿದ್ದರು. ಅವರು ದೇಶಕ್ಕೆ ಸಲ್ಲಿಸಿದ ಸೇವೆ ಜನಮಾನಸದಲ್ಲಿ ನೆಲೆಸುವಂಥದ್ದಾಗಿದೆ. ಅಂಬರೀಶ್‌ರು ತನ್ನ ನಟನೆ ಹಾಗೂ ಕ್ರಿಯಾಶೀಲ ನಾಯಕತ್ವದಿಂದ ಜನರ ನಾಡಿಮಿಡಿತವನ್ನು ಅರಿತುಕೊಂಡು ಪ್ರಗತಿ ಪರ ಕಾರ್ಯಕ್ರಮಗಳ ಅನುಷ್ಠಾನದ ಮೂಲಕ ಜನಪ್ರಿಯರಾಗಿದ್ದರು ಎಂದು ಅವರು ಗುಣಗಾನ ಗೈದರು.

ಸಭಾಧ್ಯಕ್ಷತೆ ವಹಿಸಿದ್ದ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಕೆ. ಹರೀಶ್ ಕುಮಾರ್ ಅವರು ಮಾತನಾಡಿ ಜಾಫರ್ ಶರೀಫರು ವಿವಿಧ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಉತ್ತಮ ಯೋಜನೆಗಳನ್ನು ರೂಪಿಸಿ ದೇಶಕ್ಕೆ ಅಪೂರ್ವ ಕೊಡುಗೆಯನ್ನು ಸಲಿಸಿದ್ದಾರೆ. ಅಂಬರೀಶ್‌ರು ಸಹೃದಯ ವ್ಯಕ್ತಿಯಾಗಿ ತಮ್ಮ ಅಮೋಘ ನಟನೆ ಹಾಗೂ ಸೇವಾ ಮನೂಭಾವದ ಮೂಲಕ ರಾಜ್ಯದ ಅಭಿವೃದ್ಧಿಗೆ ಹಾಗೂ ಚಿತ್ರರಂಗಕ್ಕೆ ಗಣನೀಯ ಸೇವೆ ಸಲಿಸಿದ್ದಾರೆ ಎಂದರು.

ಮೌನ ಪ್ರಾರ್ಥನಯೊಂದಿಗೆ ಆರಂಭಗೊಂಡ ಸಂತಾಪ ಸೂಚಕ ಸಬೆಯಲ್ಲಿ ಮಾಜಿ ಶಾಸಕ ಅಭಯಚಂದ್ರ ಜೈನ, ಇಬ್ರಾಹೀಂ ಕೋಡಿಜಾಲ್, ಜಿಲ್ಲಾ ಪಂಚಾಯತ್ ಸದಸ್ಯರಾದ ಪಿ. ಪಿ. ವರ್ಗೀಸ್, ಶ್ರೀ ಕೆ.ಕೆ ಶಾಹೋಲ್ ಹಮ್ಮಿದ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಲ್ಲಾರ್ ಮೋಹನ್, ಈಶ್ವರ್ ಉಳ್ಳಾಲ್, ಶಶಿಧರ್ ಹೆಗ್ಡೆ, ಪುರೋಷೊತ್ತಮ ಚಿತ್ರಾಪೂರ, ಟಿ.ಕೆ ಸುಧೀರ್, ಸಿ.ಎಮ್ ಮುಸ್ತಫ್, ಕಾಪೋರೆಟರಗಳಾದ ಅಶೋಕ ಡಿ.ಕೆ, ಟಿ. ಪ್ರವೀಣ್ ಚಂದ್ರ ಆಳ್ವಾ, ಶೋಭಾ ಪಡೀಲ್, ನಾಗವೇಣಿ, ಪ್ರತೀಭಾ ಕುಳಾಯಿ, ಆಶಾ ಡಿ’ಸಿಲ್ವಾ, ಟಿ. ಕೆ. ಶೈಲಜಾ, ನವೀನ್ ಡಿ’ಸೋಜಾ, ಎನ್ ಎಸ್ ಕರೀಂ, ಸಂತೋಷ ಕುಮಾರ್ ಶೆಟ್ಟಿ, ಅಬ್ಬಾಸ್ ಅಲಿ, ಎಚ್. ಎಮ್. ಅಶ್ರಫ್, ಟಿ.ಎಸ್ ಅಬ್ದುಲಾ, ಬಿ. ಎಸ್ ಇಸ್ಮಾಯಿಲ್, ಮಹಮ್ಮದ್ ಮೋನು, ಬಿ.ಎಂ ಭಾರತಿ, ಅಬೂಬೂಕ್ಕರ್ ಕುದ್ರೂಳಿ, ಸದಾಶಿವ ಉಳ್ಳಾಲ್ ನೀರಜ್ ಪಾಲ್, ಪ್ರೇಮ್ ಬಳ್ಳಾಲ್ ಬಾಗ್, ಖಾಲಿದ್ ಉಜಿರೆ, ನಝೀರ್ ಬಜಾಲ್ ಮೂದಲಾದವರು ಉಪಸ್ಥಿತರಿದರು.

congress-2

congress-3

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English