ಸರ್ಕಾರದ ಯೋಜನೆಗಳ ಪ್ರಚಾರಕ್ಕೆ ಖರ್ಚಾಗಿದ್ದು ಬರೊಬ್ಬರಿ 5 ಸಾವಿರ ಕೋಟಿ..!

3:18 PM, Friday, December 28th, 2018
Share
1 Star2 Stars3 Stars4 Stars5 Stars
(No Ratings Yet)
Loading...

new-delhiನವದೆಹಲಿ: ಸರ್ಕಾರದ ಯೋಜನೆಗಳ ಪ್ರಚಾರಕ್ಕೆ ನಾಲ್ಕು ವರ್ಷದಲ್ಲಿ 5000 ಕೋಟಿ ರೂಪಾಯಿ ಹಣ ಉಪಯೋಗಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಚಾರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ನಿನ್ನೆ ಲೋಕಸಭೆಗೆ ಅಂಕಿ ಅಂಶಗಳ ಸಮೇತ ವರದಿ ನೀಡಿದ್ದಾರೆ.

2014 ರಿಂದ 2018ರ ಡಿಸೆಂಬರ್ 7ರ ವರೆಗೆ ಸರ್ಕಾರದ ಯೋಜನೆಗಳ ಪ್ರಚಾರ ಕಾರ್ಯಕ್ಕೆ 5,245.73 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ವಿವಿಧ ಯೋಜನೆಗಳನ್ನು ಹೊರ ತರುವ ಸಚಿವಾಲಯಗಳಲ್ಲಿನ ಕಾರ್ಯಕ್ರಮಗಳ ಬಗೆಗಿನ ಪ್ರಚಾರಕ್ಕೆ ಪೂರಕವಾಗುವ ಮತ್ತು ಫಲಾನುಭವಿಗಳಿಗೆ ನೀಡಬೇಕಾದ ಮಾಹಿತಿಯನ್ನು ಹೊಂದಿರುತ್ತವೆ.

ಈ ಮಾಹಿತಿಗಳನ್ನು ಫಲಾನುಭವಿಗಳಿಗೆ ನೀಡುವ ಕೆಲಸ ಮಾಹಿತಿ ಮತ್ತು ಪ್ರಚಾರ ಇಲಾಖೆಯಿಂದ ನಿರ್ದಿಷ್ಟ ಗ್ರಾಹಕರ ನಿರೀಕ್ಷೆ, ಬಜೆಟ್, ಲಭ್ಯತೆಗಳ ಪರಿಗಣನೆಯಲ್ಲಿ ನಡೆಯುತ್ತದೆ ಎಂದು ಲೋಕಸಭೆಯಲ್ಲಿ ರಾಜವರ್ಧನ್ಸಿಂಗ್ ರಾಥೋಡ್ ಮಾಹಿತಿ ನೀಡಿದರು.

ಈ ರೀತಿ ಎಲ್ಲ ಇಲಾಖೆಗಳಿಂದ ಪ್ರಾರಂಭಿಸಲ್ಪಟ್ಟ ಯೋಜನೆಗಳ ಮಾಹಿತಿಯನ್ನು ಪ್ರಚಾರ ಮಾಡಲು 4 ವರ್ಷದಲ್ಲಿ 5000 ಕೋಟಿ ರೂ. ಖರ್ಚಾಗಿದೆ. ಮುದ್ರಿತ ಪ್ರಚಾರ ವ್ಯವಸ್ಥೆ ಸೇರಿದಂತೆ ದೃಶ್ಯ ಮಾಧ್ಯಮ, ಹೊರಾಂಗಣ ಪ್ರಚಾರದ ಒಟ್ಟು ವೆಚ್ಚದ ವರದಿಯನ್ನು ಸಚಿವರು ಲೋಕಸಭೆಗೆ ನೀಡಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English