ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ನಿರಂತರ ಕಿರುಕುಳ : ದೂರು

12:46 PM, Saturday, August 3rd, 2019
Share
1 Star2 Stars3 Stars4 Stars5 Stars
(No Ratings Yet)
Loading...

Kerala-pravasiಮಂಜೇಶ್ವರ:  ಮಲಯಾಳಿ ಪ್ರವಾಸಿಗಳಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಫಲಪ್ರದವಾಗಲಿಲ್ಲ, ಎಮಿಗ್ರೇಶನ್, ಕಸ್ಟಮ್ಸ್ ಸೇರಿದಂತೆ ಇತರ ವಿಭಾಗಗಳಲ್ಲಿ ಇತರ ಅಧಿಕಾರಿಗಳು ಕೂಡಾ ಮಲಯಾಳಿಗಳನ್ನು ಹುಡುಕಿ ಕಿರುಕುಳ ನೀಡುತ್ತಿರುವುದಾಗಿ ಕೇರಳ ಪ್ರವಾಸಿ ಸಂಘದ ಮಂಜೇಶ್ವರ ಏರಿಯಾ ಕಮಿಟಿ ಆರೋಪಿಸಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ನಿರಂತರವಾಗಿ ನೀಡುತ್ತಿರುವ ಕಿರುಕುಳದ ವಿರುದ್ಧ ಕೇರಳ ಪ್ರವಾಸಿ ಸಂಘದ ಮಂಜೇಶ್ವರ ಏರಿಯಾ ಕಮಿಟಿ ಅಧ್ಯಕ್ಷ ಬಶೀರ್ ದೇವಕಾನ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಲಯಾಳಿಗಳಿಗೆ ಕಿರುಕುಳ ನೀಡುತ್ತಿರುವುದು ನಿತ್ಯ ವರದಿಯಾಗಿದೆ . ಪಾಸ್ ಪೋರ್ಟಿನ ವೀಸಾ ಪುಟವನ್ನು ಹರಿದು ತೆಗೆಯುವುದು , ಕೊಲ್ಲಿ ರಾಷ್ಟ್ರಗಳಿಂದ ತೆರಿಗೆ ಕಟ್ಟಿ ತರುತ್ತಿರುವ ಸಾಮಗ್ರಿಗಳನ್ನು ಇಲ್ಲ ಸಾಲದ್ದ ಕಾರಣ ನೀಡಿ ಕಟ್ಟನ್ನು ಬಿಚ್ಚಿಸಿ ಲೂಟಿಗೈಯುತ್ತಿರುವ ಹೀನಾದಾಯಕವಾದ ಕೃತ್ಯಗಳನ್ನು ಕಂಡೂ ಕಾಣದಂತೆ ನಟಿಸಲು ಸಾಧ್ಯವಿಲ್ಲವೆಂಬುದಾಗಿ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಕೆಲದಿನಗಳ ಹಿಂದೆ ಕಾಸರಗೋಡು ನಿವಾಸಿಗಳನ್ನು ತಪಾಸಣೆಯ ಹೆಸರಲ್ಲಿ ನಗ್ನರನ್ನಾಗಿ ಮಾಡಿಸಿ ಸುಮಾರು ಹತ್ತು ತಾಸುಗಳ ತನಕ ನಿರಂತರ ಕಿರುಕುಳ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸುವಂತೆಯೂ ವ್ಯೋಮಯಾನ ಸಚಿವ, ಸಂಸದ ಹಾಗೂ ಸಿಟಿ ಕಮೀಷನರಿಗೆ ದೂರುಗಳನ್ನು ನೀಡುವುದಾಗಿಯೂ ಅವರು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಬಿ ಎ ಬಶೀರ್ , ಖಾದರ್ ಬಿ ಎ , ಅಹ್ಮದುಲ್ ಅಮೀರ್ , ಸದಾನಂದ ಕೋರಿಕ್ಕಾರ್ ಮೊದಲಾದವರು ಉಪಸ್ಥರಿದ್ದರು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English