ಜಪ್ಪು ಮಾರ್ಕೆಟ್ ರಸ್ತೆಯಲ್ಲಿ ಶೀಘ್ರದಲ್ಲೇ ‘ಕೆಸರು ಗದ್ದೆ ಓಟ’

8:45 PM, Sunday, August 4th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

jeppu market ಮಂಗಳೂರು : ಜಪ್ಪು ಮಾರ್ಕೆಟ್ ರಸ್ತೆಯಲ್ಲಿ ಶೀಘ್ರದಲ್ಲೇ ‘ಕೆಸರು ಗದ್ದೆ ಓಟ’ ನಡೆಯಲಿದ್ದು ಈ ಬಗ್ಗೆ ಜೆಪ್ಪು ನಾಗರಿಕರು ಮಂಗಳೂರಿನ ಜನಪ್ರತಿನಿಧಿಗಳಿಂದ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಅಭಿಪ್ರಾಯ ಸಂಗ್ರಹಕ್ಕೆ ತಯಾರು ಮಾಡಿದ್ದಾರೆ.

ಈ ಬಾರಿ ಮಳೆ ಆರಂಭಕ್ಕೂ ಮುಂಚಿತವಾಗಿ ಜಪ್ಪು ಮಾರ್ಕೆಟ್ ರಸ್ತೆಯನ್ನು ಡ್ರೈನೇಜ್ ಅಳವಡಿಸುವ ನೆಪದಲ್ಲಿ ಅಗೆದು ಹಾಕಲಾಗಿದ್ದು ಈ ವರೆಗೂ ಮುಚ್ಚಿಲ್ಲ, ಇದರಿಂದಾಗಿ ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆಯಲ್ಲೇ ಕೆಸರಿನ ತೋಡು ನಿರ್ಮಾಣವಾಗಿದ್ದು ‘ಕೆಸರು ಗದ್ದೆ ಓಟ’ಕ್ಕೆ ಸೂಕ್ತವಾಗಿದೆ ಎಂದು ಸಾರ್ವಜನಿಕರು ಶೀಘ್ರದಲ್ಲೇ ‘ಕೆಸರು ಗದ್ದೆ ಓಟ’ ಎಂಬ ಬ್ಯಾನರ್ ಹಾಕಿದ್ದಾರೆ.

ಈ ಬಗ್ಗೆ ಸ್ಥಳೀಯ ಕಾಪೋರೇಟರ್ ರತಿಕಲಾ ಅವರಿಗೂ ದೂರು ನೀಡಲಾಗಿದೆ, ಅದರೂ ಪ್ರಯೋಜನವಾಗಲಿಲ್ಲ ಎಂದು ಜಪ್ಪು ಮಾರ್ಕೆಟ್ ನಾಗರಿಕರು ಈ ರೀತಿಯ ವಿನೂತನ ಪ್ರತಿಭಟನೆಗೆ ಇಳಿದಿದ್ದಾರೆ.

jeppu market

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English