ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ನಡೆದ ನಿಗೂಢ ಬಾಂಬ್ ಸ್ಫೋಟ – NIA ತನಿಖೆಗೆ ಬಜರಂಗದಳ ಆಗ್ರಹ

7:27 PM, Saturday, March 2nd, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಶುಕ್ರವಾರ ಮಧ್ಯಾಹ್ನ 12.55ರ ಆಸುಪಾಸಿನ ವೇಳೆ ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe Blast) ಎರಡು ಬಾರಿ ನಿಗೂಢ ಬಾಂಬ್ ಸ್ಫೋಟವಾಗಿದ್ದು,ಕಳೆದ ವರ್ಷ ಹಲವು ಬಾರಿ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆಗಳ ಬಂದಿದ್ದರೂ. ಆದರೆ ಇವರೆಗೂ ಹುಸಿ ಕರೆ ಸಂಬಂಧ ಯಾರ ಬಂಧನವೂ ಆಗಿಲ್ಲ. ಇದರ ಹಿಂದೆ ನಿಷೇಧಿತ ಭಯೋದ್ಫಾದಕ ಸಂಘಟನೆ PFI ಕೈವಾಡವಿರುವ ಶಂಕೆ ಇದ್ದು, ವಿಧಾನ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣವನ್ನು ಮರೆಮಾಚಲು ಈ ಘಟನೆ ನಡೆಸಿರುವ ಸಂಶಯವಿದೆ. ಅಲ್ಲದೆ ಇದೇ ರಾಮೇಶ್ವರಂ ಕೆಫೆಯಲ್ಲಿ ಅಯೋಧ್ಯೆ ಪ್ರಾಣಪ್ರತಿಷ್ಠೆಯ ದಿನ ಕಾರ್ಯಕ್ರಮ ನಡೆದಿದ್ದು ಹಾಗಾಗಿ ಈ ಹೋಟೆಲನ್ನು ಗುರಿಯಾಗಿಸಿಕೊಂಡು ಈ ಕೃತ್ಯ ನಡೆದಿದೆ. ಅದರಿಂದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ NIA ತನಿಖೆಗೆ ಒಳಪಡಿಸಬೇಕೆಂದು ಬಜರಂಗದಳ ವಿಭಾಗ ಸಂಯೋಜಕರಾದ ಭುಜಂಗ ಕುಲಾಲ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English