ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಮಾಡಿದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ವಿದ್ಯಾರ್ಥಿಗಳು

10:22 PM, Thursday, March 7th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಕಡಬ : ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರನಡೆಸಿ ಓಡುತ್ತಿದ್ದ ಆರೋಪಿ ಅಭಿನ್‌ನನ್ನು ಕಾಲೇಜು ವಿದ್ಯಾರ್ಥಿಗಳೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದೀಗ ವಿದ್ಯಾರ್ಥಿಗಳು ಆರೋಪಿಯನ್ನು ಹಿಡಿದು ಕರೆದುಕೊಂಡು ಹೋಗತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ವಿಡಿಯೋ ಲಭ್ಯವಾಗಿದೆ. ಸದ್ಯ ಆರೋಪಿ ಅಭೀನ್‌ನನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು ಆತನ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

ಆತನ ಉದ್ದೇಶ ಹಾಗೂ ಆತ ಎಲ್ಲಿಂದ ಆ್ಯಸಿಡ್ ಖರೀದಿ ಮಾಡಿದ್ದ ಹಾಗೂ ಕಡಬಕ್ಕೆ ಹೇಗೆ ಬಂದು ತಲುಪಿದ ಎಲ್ಲಾ ಮಾಹಿತಿ ಕಲೆ ಹಾಕುತ್ತಿದ್ದಾರೆ. ತನಿಖೆ ವೇಳೆ ಆರೋಪಿ ಆಸಿಡ್‌ನ್ನು ಕೋಯಂಬುತ್ತೂರಿಂದ ಖರೀದಿಸಿದರುವಾಗಿ ಬಾಯಿಬಿಟ್ಟಿದ್ದಾನೆ.

ತನಿಖೆಗಾಗಿ ಆರೋಪಿಯನ್ನು ಕೋಯಂಬುತ್ತೂರಿಗೆ ಪೊಲೀಸರು ಕರೆದೊಯ್ಯಲಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿ ವಿದ್ಯಾರ್ಥಿನಿಯ ಮೇಲೆ ಸಲ್ಫ್ಯೂರಿಕ್ ಆ್ಯಸಿಡ್‌ ಎರಚಿರುವುದಾಗಿ ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ, ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ವಿದ್ಯಾರ್ಥಿಗಳು

ಕಡಬ : ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರನಡೆಸಿ ಓಡುತ್ತಿದ್ದ ಆರೋಪಿ ಅಭಿನ್‌ನನ್ನು ಕಾಲೇಜು ವಿದ್ಯಾರ್ಥಿಗಳಲೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದೀಗ ವಿದ್ಯಾರ್ಥಿಗಳು ಆರೋಪಿಯನ್ನು ಹಿಡಿದು ಕರೆದುಕೊಂಡು ಹೋಗತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ವಿಡಿಯೋ ಲಭ್ಯವಾಗಿದೆ. ಸದ್ಯ ಆರೋಪಿ ಅಭೀನ್‌ನನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು ಆತನ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

ಆತನ ಉದ್ದೇಶ ಹಾಗೂ ಆತ ಎಲ್ಲಿಂದ ಆ್ಯಸಿಡ್ ಖರೀದಿ ಮಾಡಿದ್ದ ಹಾಗೂ ಕಡಬಕ್ಕೆ ಹೇಗೆ ಬಂದು ತಲುಪಿದ ಎಲ್ಲಾ ಮಾಹಿತಿ ಕಲೆ ಹಾಕುತ್ತಿದ್ದಾರೆ. ತನಿಖೆ ವೇಳೆ ಆರೋಪಿ ಆಸಿಡ್‌ನ್ನು ಕೋಯಂಬುತ್ತೂರಿಂದ ಖರೀದಿಸಿದರುವಾಗಿ ಬಾಯಿಬಿಟ್ಟಿದ್ದಾನೆ.

ತನಿಖೆಗಾಗಿ ಆರೋಪಿಯನ್ನು ಕೋಯಂಬುತ್ತೂರಿಗೆ ಪೊಲೀಸರು ಕರೆದೊಯ್ಯಲಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿ ವಿದ್ಯಾರ್ಥಿನಿಯ ಮೇಲೆ ಸಲ್ಫ್ಯೂರಿಕ್ ಆ್ಯಸಿಡ್‌ ಎರಚಿರುವುದಾಗಿ ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English