ಮಹಾಶಿವಾರಾತ್ರಿ ದಿನವೇ ಧರ್ಮಸ್ಥಳದ ಆನೆ ಲತಾ ಶಿವೈಕ್ಯ

2:52 PM, Saturday, March 9th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಧರ್ಮಸ್ಥಳ : ಶ್ರೀ ಮಂಜುನಾಥ ಸ್ವಾಮಿಯ ಸೇವೆ ಸಲ್ಲಿಸುತ್ತಿದ್ದ ಆನೆ ಲತಾ ಮಹಾಶಿವಾರಾತ್ರಿ ದಿನವೇ ಹೃದಯಾಘಾತದಿಂದ ಶಿವೈಕ್ಯವಾಗಿದೆ .

ಆನೆ ಲತಾ ಧರ್ಮಸ್ಥಳ ಶ್ರೀ ಮಂಜುನಾಥನಿಗೆ ಸೇವೆ ಸಲ್ಲಿಸುತ್ತಾ ಭಕ್ತರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆಯವಾರ ಪ್ರೀತಿಗೆ ಪಾತ್ರವಾಗಿತ್ತು.

60 ವಯಸ್ಸಿನ ಲತಾ ಅಂತ್ಯಸಂಸ್ಕಾರವನ್ನು ಸಂಜೆ ಧರ್ಮಸ್ಥಳದಲ್ಲಿ ನೆರವೇರಿಸಲಾಗಿದೆ.

ಕಳೆದ 50 ವರ್ಷಗಳಿಂದ ಆನೆ ಲತಾ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥನ ಸೇವೆ ಸಲ್ಲಿಸುತ್ತಾ ಬಂದಿದೆ. ಮಂಜುನಾಥನ ವಿಶೇಷ ಪೂಜೆ, ಉತ್ಸವ, ಲಕ್ಷದಿಪೋತ್ಸೋವ, ಶಿವರಾತ್ರಿ ಸೇರಿದಂತೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆನೆ ಲತಾ ಭಾಗವಹಿಸುತ್ತಿತ್ತು.

ಕಳೆದ 50 ವರ್ಷದಲ್ಲಿ ಆನೆ ಲತಾ ಒಂದೇ ಒಂದು ಬಾರಿ ಸಿಟ್ಟಿಗೆದ್ದಿಲ್ಲ, ಯಾರನ್ನೂ ನೋಯಿಸಿಲ್ಲ.ದೇವಸ್ಥಾನದ ಕಾರ್ಯಗಳ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಆಶೀರ್ವಾದ ನೀಡುತ್ತಿತ್ತು.

ಡಾ.ಡಿ ವಿರೇಂದ್ರ ಹೆಗ್ಗಡೆಯವರಿಗೂ ಲತಾ ಅತ್ಯಂತ ಪ್ರೀತಿಯ ಆನೆಯಾಗಿತ್ತು. ಇದೀಗ ಆನೆ ಲತಾ ಅಗಲಿಕೆ ಭಕ್ತರಿಗೆ ತೀವ್ರ ನೋವುಂಟು ಮಾಡಿದೆ.

ಶಿವರಾತ್ರಿ ದಿನವೇ ಲತಾ ನಿಧನ ಹೆಗ್ಗಡೆ ಕುಟುಂಬಕ್ಕೆ ತೀವ್ರ ನೋವುಂಟು ಮಾಡಿದೆ. ಸದ್ಯ ಧರ್ಮಸ್ಥಳಲ್ಲಿ ಲಕ್ಷ್ಮಿ ಹಾಗೂ ಶಿವಾನಿ ಎರಡು ಆನೆಗಳಿವೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English