ಮಂಗಳೂರು : ಆರ್ ಟಿ ಓ ನವರ ನಿರ್ಲಕ್ಷ್ಯದಿಂದಾಗಿ ಕಬ್ಬಿಣದ ಸರಳುಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯ ಹಿಂಬದಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರಲ್ಲಿ ಒಬ್ಬ ಮೃತಪಟ್ಟರೆ, ಮತ್ತೋರ್ವ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಬೆಳಗ್ಗೆ 10 ಗಂಟೆಗೆ ಕೆಪಿಟಿ ಬಳಿಯ ಲ್ಯಾಂಡ್ ಮಾರ್ಕ್ ಬಿಲ್ಡಿಂಗ್ ಬಳಿ ನಡೆದಿದೆ.
ಕಬ್ಬಿಣದ ಸರಳುಗಳನ್ನು ಹೊತ್ತುಕೊಂಡು ಸಾಗುತ್ತಿದ್ದ ಟ್ರೇಲರ್ ನ್ನು ತಪಾಸಣೆಗೆಂದು ಆರ್ ಟಿಓನವರು ಕೆಪಿಟಿ ಬಳಿಯ ಲ್ಯಾಂಡ್ ಮಾರ್ಕ್ ಬಿಲ್ಡಿಂಗ್ ಬಳಿ ಸೂಚನಾ ಫಲಕವಿಲ್ಲದೆ ಹಠಾತ್ ಆಗಿ ನಿಲ್ಲಿಸಿದ್ದಾರೆ ಇದರಿಂದ ಹಿಂಬದಿಯಿಂದ ಬರುತ್ತಿದ್ದ ಬೈಕ್ ಸವಾರರು ಬ್ರೇಕ್ ಹಾಕಿದ ಪರಿಣಾಮ ಬೈಕ್ ಲಾರಿಯ ಹಿಂಬದಿಗೆ ಗುದ್ದಿ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡರು. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಎ.ಜೆ. ಆಸ್ಪತ್ರೆಗೆ ದಾಖಲಿಸಲಾದರು, ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರೆ, ಸಹಸವಾರನ ಸ್ಥಿತಿ ಚಿಂತಾಜನಕವಾಗಿದೆ.
ಮೃತ ಬೈಕ್ ಸವಾರ ಎಡಪದವು ನಿವಾಸಿ ದುರ್ಗಾಪ್ರಸಾದ್ ಹಾಗು ಸವಸವಾರ ಮಣ್ಣಗುಡ್ಡೆಯ ಹರ್ಷ ಎಂದು ಗುರುತಿಸಲಾಗಿದೆ.
ಆರ್ ಟಿಓನವರ ಅಜಾಕರೂಕತೆಯಿಂದಾಗಿ ಈ ಘಟನೆ ಸಂಭವಿಸಿದರು, ಬೈಕ್ ಸವಾರರು ಬಿದ್ದು ಒದ್ದಾಡುತ್ತಿದ್ದ ಸಂದರ್ಭ ಆರ್ ಟಿಓನವರು ಅವರನ್ನು ಆಸ್ಪತ್ರೆಗೆ ದಾಖಲಿಸುವ ಬದಲು ತಮ್ಮ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಆರ್ ಟಿಓನವರು ಸ್ಥಳಕ್ಕೆ ಆಗಮಿಸುವ ತನಕ ವಾಹನಗಳನ್ನು ಘಟನಾ ಸ್ಥಳದಿಂದ ತೆಗೆಯಲು ಬಿಡಲಿಲ್ಲ. ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಆರ್ ಟಿಓ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನ ರವರು ಸಾರ್ವಜನಿಕರೊಂದಿಗೆ ಚರ್ಚಿಸಿ ಈ ಘಟನೆಗೆ ಕಾರಣರಾದ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಜರಗಿಸುವುದಾಗಿ ತಿಳಿಸಿದರು.
Click this button or press Ctrl+G to toggle between Kannada and English