ಮಂಗಳೂರು: ಅಕ್ಟೋಬರ್ 24 ರಿಂದ ಕನ್ನಡ ಪುಸ್ತಕ ಪ್ರಾಧಿಕರವು, ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಕನ್ನಡ ಪುಸ್ತಕ ಮೇಳ-2010′ ರಲ್ಲಿ ಕಲಾ ಪ್ರದರ್ಶನಗಳನ್ನು ನೀಡುವರೇ ಸಾಹಿತ್ಯಿಕ, ಸಾಂಸ್ಕೃತಿಕ, ಕಲಾ ತಂಡಗಳನ್ನು ಆಹ್ವಾನಿಸಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸಂಚಾಲಕ ಸದಸ್ಯ ಪ್ರದೀಪ್ ಕುಮಾರ್ ಕಲ್ಕೂರ ಇಂದು ಜಿಲ್ಲಾಧಿಕಾರಿ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮಂಗಳೂರು ನೆಹರೂ ಮೈದಾನದಲ್ಲಿರುವ ವಿಶಾಲವಾದ ಹಾಗೂ ಸುಸಜ್ಜಿತ ಪೆಂಡಾಲ್ನಡಿ ನಿರ್ಮಿಸಿರುವ ಪುಸ್ತಕ ಮಳಿಗೆಗಳ ಸಹಿತ ಸಾಹಿತ್ಯ ಪರವಾದ ಅನೇಕ ವೈವಿಧ್ಯಗಳನ್ನೊಳಗೊಂಡ `ಪುಸ್ತಕ ಮೇಳ’ದಲ್ಲಿ ಆಸಕ್ತ ಕಲಾಂ ತಂಡಗಳು ತಮ್ಮು ಪ್ರದರ್ಶನಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ.
ಪ್ರತಿನಿತ್ಯವೂ ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ಪುಸ್ತಕ ಮೇಳ ನಡೆಯಲಿದ್ದು `ಡಾ. ಕೆ. ಶಿವರಾಮ ಕಾರಂತ’ ಕಲಾಮಂಟಪದಲ್ಲಿ ಲೇಖಕ ಪ್ರಕಾಶಕ-ಮಾರಾಟಗಾರ-ಓದುಗರ ನಡುವೆ ಚಿಂತನಾ ಕಮ್ಮಟ, ಶಾಲಾ-ಕಾಲೇಜು ವಿಧ್ಯಾರ್ಥಿಗಳಿಗಾಗಿ ವಚನಾಭಿರುಚಿ ಕಮ್ಮಟ, ಮಾರಾಟ ವ್ಯವಸ್ಥೆ ಪುಸ್ತಕೋಧ್ಯಮದ ಕುರಿತು ವಿಚಾರ ಸಂಕಿರಣ. ಹಿರಿಯ ಸಾಹಿತಿಗಳೊಂದಿಗೆ ಸಂವಾದಗೋಷ್ಟಿ, ವಿವಿಧ ಕಲಾ ತಂಡಗಳಿಂದ ಕಲಾ ಪ್ರದರ್ಶನ ನಡೆಸಲಾಗುವುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಅಶೋಕ್ ಏನ್ ಚಲವಾದಿ ಹೇಳಿದರು.
ಭಾಗವಹಿಸಲಿಚ್ಚಿಸುವ ತಂಡಗಳಿಗೆ ವೇದಿಕೆ, ಧ್ವನಿ, ಬೆಳಕು ಇತ್ಯಾದಿ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗುವುದು. ತಂಡಗಳು, ಸಂಘಟನೆಗಳು, ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳು ತಾವು ಹಮ್ಮಿಕೊಳ್ಳುವ ಕಾರ್ಯಕ್ರಮಗಳ ವಿವಿರಗಳನ್ನು ತಕ್ಷಣವೇ ಸಂಬಂಧಪಟ್ಟವರಿಗೆ ತಿಳಿಸುವಂತೆ ಹೇಳಿದರು.
10 ಅಡಿ ಸುತ್ತಳತೆ 120 ಸ್ಟಾಲ್ ಗಳಲ್ಲಿ ಜಿಲ್ಲಾದ್ಯಂತ ಸಂಗ್ರಹಿಸಲಾದ ಪುಸ್ತಕಗಳು ಲಭಿಸಲಿದೆ, ಅಲ್ಲದೆ, ಮಂಗೂರು, ಉಡುಪಿ, ಕಾಸರಗೋಡು ಜಿಲ್ಲೆಗಳ ಲೇಖಕರ, ಸಾಹಿತಿಗಳ ಪುಸ್ತಕ ಪ್ರದರ್ಶನವೂ ನಡೆಯಲಿದೆ.
ಪುಸ್ತಕ ಮೇಳದ ಆರಂಭೋತ್ಸವಕ್ಕೆ ಕನ್ನಡ ಪ್ರಧಿಕಾರದ ರಾಜ್ಯ ಸಂಚಾಲಕರಾದ ಸಿದ್ದಲಿಂಗೇ ಗೌಡ ಹಾಗೂ ಸ್ಥಳೀಯ ಪ್ರತಿನಿಧಿಗಳ ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಪ್ರದೀಪ್ ಕಲ್ಕೂರ, ಜಿಲ್ಲಾಡಳಿತದ ಆನಂದ ನಾಯಕ್, ಅಶೋಕ್ ಏನ್ ಚಲವಾದಿ, ವಾರ್ತಾಧಿಕಾರಿ ರೋಹಿಣಿ, ಮೊದಲಾದವರು ಉಪಸ್ಥಿತರಿದ್ದರು.
ಹೆಸರು ನೋಂದಾಯಿಸುವವರು ಹಾಗೂ ಹೆಚ್ಚಿನ ವಿವರಗಳನ್ನು ಬಯಸುವವರು ಪುಸ್ತಕ ಪ್ರಾಧಿಕಾರದ ಸದಸ್ಯ ಸಂಚಾಲಕರಾದ ಶ್ರೀ. ಎಸ್, ಪ್ರದೀಪ ಕುಮಾರ ಕಲ್ಕೂರ (ಮೊ, 9845083736) ಕಲ್ಕೂರ ಪ್ರತಿಷ್ಠಾನ, ಮಹಾತ್ಮಗಾಂಧಿ ರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು ಇವರನ್ನು ಕೂಡಲೇ ಸಂಪರ್ಕಿಸಬಹುದು.
Click this button or press Ctrl+G to toggle between Kannada and English