ಬಂಟರ ಗುದ್ದಾಟ : ಕೈಯಲ್ಲಿ ಮತ್ತೇ ತಳಮಳ

5:13 PM, Monday, March 25th, 2013
Share
1 Star2 Stars3 Stars4 Stars5 Stars
(No Ratings Yet)
Loading...

Kripa Alva Shakuntala Shettyಮಂಗಳೂರು : ದ.ಕ. ಜಿಲ್ಲೆಯಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಇಬ್ಬರು ಬಂಟ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ನೀಡುವುದು ಕಾಂಗ್ರೆಸ್ ನಲ್ಲಿ ಮೊದಲಿನಿಂದಲೂ ನಡೆದು ಬಂದ ಸಂಪ್ರದಾಯ. ಕಳೆದ ಅವಧಿಯಲ್ಲಿ ಸುರತ್ಕಲ್ ನಲ್ಲಿ ಅವಕಾಶ ತಪ್ಪಿದ್ದು ಗೊಂದಲಕ್ಕೆ ಕಾರಣವಾಗಿದ್ದು, ಈಗ ಮತ್ತೆ ಅದೇ ಗೊಂದಲ ಮುಂದುವರಿದಿದೆ.

ಬಂಟರಿಗೆ ಅವಕಾಶ ಕೊಡಬೇಕು ಎಂಬ ಆಗ್ರಹ ಜೋರಾಗಿದೆ. ಆದರೆ ಎಲ್ಲಿ ಎಂಬ ಪ್ರಶ್ನೆಯೂ ಕಾಡುತ್ತಿದೆ. ಇದೇ ಸಂದರ್ಭದಲ್ಲಿ ಮಹಿಳೆಯರು ತಮಗೆ ಅವಕಾಶ ಕೊಡಲೇಬೇಕು ಎಂದು ರಾಜ್ಯ ಮಟ್ಟದಲ್ಲಿ ಹೋರಾಟಕ್ಕಿಳಿದಿದ್ದಾರೆ. ಈ ಬೆಳವಣಿಗೆ ಕೂಡ ದ.ಕ.ಜಿಲ್ಲೆಯ ಬಂಟರ ತಿಕ್ಕಾಟದೊಂದಿಗೆ ತಳಕು ಹಾಕುತ್ತಿದೆ.

ದ.ಕ.ಜಿಲ್ಲೆಯಲ್ಲಿ ಮಹಿಳೆಯರಿಗೆ ಅವಕಾಶ ಕೊಟ್ಟರೂ ಅಲ್ಲೂ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು ಬಂಟ ಮಹಿಳೆಯರದ್ದೇ ಆಗಿದೆ. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಕೃಪಾ ಆಳ್ವಾರ ಹೆಸರು ಮುಂಚೂಣಿಯಲ್ಲಿದ್ದರೆ, ಪುತ್ತೂರಿನಲ್ಲಿ ಶಕುಂತಳಾ ಶೆಟ್ಟರ ಹೆಸರು ದೆಹಲಿ ಮಟ್ಟದ ನಾಯಕರ ಬಾಯಲ್ಲಿ ಓಡಾಡುತ್ತಿದೆ.

ಬಂಟರ ಪ್ರಾತಿನಿಧ್ಯ ಬಂಟ್ವಾಳದಲ್ಲಿ ರಮಾನಾಥ ರೈ ರೂಪದಲ್ಲಿ ಇದ್ದೇ ಇದೆ. ಇನ್ನೊಂದು ಅವಕಾಶ ಎಲ್ಲಿ ಎಂಬುದೇ ಈಗ ತಾಕಲಾಟದ ಪ್ರಶ್ನೆಯಾಗಿ ಕಾಡುತ್ತಿದೆ. ಈವರೆಗೆ ಸುರತ್ಕಲ್ ಪ್ರತಿನಿಧಿಸುತ್ತಿದ್ದ ಬಂಟ ಅಭ್ಯರ್ಥಿಗಳಾಗಿ ಸುಬ್ಬಯ್ಯ ಶೆಟ್ಟಿ, ಅಡ್ಯಂತಾಯ, ಲೋಕಯ್ಯ ಶೆಟ್ಟಿ ಮತ್ತು ವಿಜಯಕುಮಾರ್ ಶೆಟ್ಟಿ ಶಾಸಕರಾಗಿದ್ದರು. ಇಲ್ಲಿ ಕಾಂಗ್ರೆಸ್ ಸೋತಾಗ ಮಾತ್ರ ಬಂಟ ಪ್ರಾತಿನಿಧ್ಯ ತಪ್ಪಿತ್ತು. ಸುರತ್ಕಲ್ ನಲ್ಲಿ ಬಂಟರ ಪ್ರಾಬಲ್ಯ ಜೋರಾಗಿದೆ ಎಂದು ಬಿಂಬಿಸುವ ಪ್ರಯತ್ನ ಕಾಂಗ್ರೆಸ್ ಬಂಟರಿಂದ ಮೊದಲಿನಿಂದಲೂ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಬಂಟರ ಪ್ರಾತಿನಿಧ್ಯ ಪುತ್ತೂರಿನತ್ತ ಮುಖ ಮಾಡಿದ್ದು ಬಂಟರ ತಿಕ್ಕಾಟಕ್ಕೆ ಕಾರಣವಾಗಿದೆ.

ಶಕುಂತಳಾ ಶೆಟ್ಟರು ಕಾಂಗ್ರೆಸ್ ಗೆ ಬಂದಿದ್ದು, ಸುರತ್ಕಲ್ ಬಂಟರ ಪಾಲಿಗೆ ನುಂಗಲಾರದ ತುತ್ತಾಗಿದೆ. ಮಹಿಳೆಯರಿಗೆ ಪ್ರಾತಿನಿಧ್ಯ ಕೊಡಬೇಕು ಎನ್ನುತ್ತಿರುವ ಕಾಂಗ್ರೆಸ್ ಹೆಂಗಸರು ಈಗ ಹೊಸಬರಿಗೆ ಅವಕಾಶ ಬೇಡ ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಹೊಸಬರು ಎಂದರೆ ಶಕುಂತಳಾ ಶೆಟ್ಟರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಕಾಂಗ್ರೆಸ್ ನಿಂದ ಟಿಕೆಟ್ ಕೇಳುವ ಮಹಿಳೆಯರ ಸಾಲಿನಲ್ಲಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಗಟ್ಟಿ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಶಾಲೆಟ್ ಪಿಂಟೊ ಕೂಡ ಇದ್ದಾರೆ. ಆದರೆ ಶಕುಂತಳಾ ಶೆಟ್ಟರಿಗೆ ಟಿಕೆಟ್ ಒದಗಿಸುವ ವಿಷಯದಲ್ಲಿ ಖುದ್ದು ಆಸ್ಕರ್ ಫೆರ್ನಾ ಂಡಿಸ್ ಆಸಕ್ತರಾಗಿರುವುದು ಕಾಂಗ್ರೆಸ್ ಮಹಿಳೆಯರ ಧ್ವನಿ ಅಡಗುವಂತೆ ಮಾಡಿದೆ ಎನ್ನಬಹುದು. ಶಕುಂತಳಾ ಶೆಟ್ಟಿ ಅವರಿಗೆ ಈ ಬಾರಿ ಟಿಕೇಟು ನೀಡಬಾರದು. ಪಕ್ಷ ಸಂಘಟನೆಯಲ್ಲಿ ಅವರು ತೊಡಗಲಿ. ಐದು ವರ್ಷದ ಬಳಿಕ ಅವರಿಗೆ ಟಿಕೇಟು ನೀಡಲಿ. ಬೇರೆ ಪಕ್ಷಗಳಿಂದ ಬಂದವರಿಗೆ ಮಣೆ ಹಾಕುವುದರಲ್ಲಿ ಅರ್ಥ ಇಲ್ಲ ಎಂದು ಕಾಂಗ್ರೆಸ್ ನ ಮಹಿಳಾ ಕಾರ್ಯಕರ್ತರು ಹೇಳುತ್ತಾರೆ.

ಮಾಜಿ ಶಾಸಕ ವಿಜಯಕುಮಾರ ಶೆಟ್ಟರು ಸುರತ್ಕಲ್ ಬ್ಲಾಕ್ ನಲ್ಲಿ ಮನಪಾ ವಾರ್ಡ್ ಗಳಲ್ಲಿ ಈ ಬಾರಿ ಹೊಸ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದಾರೆ. ಹಳಬರನ್ನು ಬದಿಗೆ ಇಟ್ಟಿದ್ದಾರೆ. ಇದೇ ಸಂಪ್ರದಾಯ ಅಸೆಂಬ್ಲಿ ಚುನಾವಣೆಗೂ ಅನುಸರಿಸಿ ಹೊಸಬರಿಗೆ ಅವಕಾಶ ಮಾಡಿಕೊಡಲಿ ಎಂದು ಸ್ಥಳೀಯ ಕಾಂಗ್ರೆಸಿಗರು ವಿಜಯಕುಮಾರ್ ಶೆಟ್ಟರಲ್ಲಿ ಕೇಳುತ್ತಿದ್ದಾರೆ. ಹೊಸಬ ರಾದರೆ ಕೃಪಾ ಆಳ್ವಾ ಆಗಲಿ ಎಂಬುದು ಬಂಟರಿಗೆ ಪ್ರಾತಿನಿಧ್ಯ ಕೇಳುವವರ ವಾದವಾಗಿದೆ. ಈಗಾಗಲೇ ವಿಜಯ ಕುಮಾರ್ ಶೆಟ್ಟರು ಟಿಕೆಟ್ ಗಾಗಿ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದು ಟಿಕೆಟ್ ಸಿಕ್ಕರೆ ಗೆಲ್ಲುವ ನಿರೀಕ್ಷ್ಷೆಯಿದೆ ಎನ್ನಲಾಗುತ್ತಿದೆ. ಅದೇ ರೀತಿ ಕೃಪಾರಿಗೆ ಟಿಕೆಟ್ ದಕ್ಕಿದರೂ ಗೆಲ್ಲುವ ಲಕ್ಷಣಗಳಿವೆ ಎನ್ನಲಾಗಿದೆ.

ಪುತ್ತೂರಿನಲ್ಲಿ ಶಕುಂತಳಾ ಶೆಟ್ಟರಿಗೆ ಅವಕಾಶ ಒದಗಿಸಿದರೆ ಬಂಟರು ಮತ್ತು ಮಹಿಳೆಯರ ಪ್ರಾತಿನಿಧ್ಯದ ರಗಳೆ ಮುಗಿಸಿದಂ ತಾಗುತ್ತದೆ. ಆಗ ಸುರತ್ಕಲ್ ನಲ್ಲಿ ಉಳಿಯುವುದು ಮುಸ್ಲಿಮರು. ಮುಸ್ಲಿಮರಾಗಿ ಟಿಕೆಟ್ ಗಾಗಿ ಹೋರಾಟ ನಡೆಸುತ್ತಿರುವವರಲ್ಲಿ ಸದ್ಯಕ್ಕೆ ಮುಂಚೂಣಿಯಲ್ಲಿ ನಿಲ್ಲುವವರಾಗಿ ಕಾಣುತ್ತಿರುವುದು ಮೊಯ್ದಿನ್ ಬಾವಾ, ಬಳಿಕದ ಸ್ಥಾನದಲ್ಲಿ ಜಿ.ಎ. ಬಾವಾ ಇದ್ದಾರೆ. ಬದ್ರ್ರುದ್ದೀನ್ ಕೂಡ ಅವಕಾಶಕ್ಕಾಗಿ ಬಾಯ್ ದೆರೆದು ಕುಳಿತಿದ್ದಾರೆ. ಇವರ ಮಧ್ಯ ಅಲ್ತಾಫ್ ಮುಕ್ಕಾ ನಾನೇನೂ ಕಮ್ಮಿ ಇಲ್ಲ ಎಂದು ತೋರಿಸಲು ಹೆಣಗಾಡುತ್ತಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English