ಮಂಗಳೂರು : ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು 117 ಸ್ಥಾನವನ್ನು ಪಡೆಯುವುದಲ್ಲದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದಾಗಿ ವಾರ್ತಾಮಿತ್ರ ಕನ್ನಡ ಮಾಸ ಪತ್ರಿಕೆ ಸಂಪಾದಕ ಅಕ್ಬರ್ ಉಳ್ಳಾಲ್ ಭವಿಷ್ಯ ನುಡಿದಿದ್ದಾರೆ.
ಸೋಮವಾರ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕುರಿತು ಮಾತನಾಡಿದ ಅವರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಪಕ್ಷದ ಹಿರಿಯ ನಾಯಕರು ಹಾಗು ಕಾರ್ಯಕರ್ತರ ನಡುವಿನ ಭಿನಾಭಿಪ್ರಾಯಗಳು ಮತ್ತು ಅನ್ಯ ಪಕ್ಷಗಳ ಕೆಲವು ಪಕ್ಷಾಂತರ ನಾಯಕರು ವಲಸೆ ಬಂದಿರುವುದು ಕಾರಣವಾಗಿದೆ. ಆದರೆ ಮುಂಬರುವ ಚುನಾವಣೆಯಲ್ಲಿ ಪಕ್ಷವು ಗೆಲುವು ಸಾಧಿಸಲಿದ್ದು ಕಾಂಗ್ರೆಸ್ ಪಕ್ಷವು ಎರಡನೇ ಸ್ಥಾನವನ್ನು ಹಾಗೇ ಆಡಳಿತಾರೂಢ ಬಿಜೆಪಿಯು ತೃತೀಯ ಸ್ಥಾನ ಪಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಉಮೇಶ್ ಕುಮಾರ್ ವೈ, ಕಬೀರ್ ಗಡಿಯಾರ್, ಕೆ.ಎಮ್.ಅಬ್ದುಲ್ ರಹಿಮಾನ್ ಆಲಾಡಿ, ಹಸನ್ ಸಾಂಬಾರ್ ತೋಟ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English