ಭರತಾಂಜಲಿಯಿಂದ ಅಕ್ಟೋಬರ್ 23ಕ್ಕೆ ಪುರಭವನದಲ್ಲಿ `ಪಾದ ಪಂಚದಶಕಮ್’

6:28 PM, Wednesday, October 20th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಭರತಾಂಜಲಿ ಪತ್ರಿಕಾಗೋಷ್ಟಿಮಂಗಳೂರು: ಕಲೋಪಾಸನೆಯ ಪಥದಲ್ಲಿ ಸಾಗುತ್ತಿರುವ ಭರತಾಂಜಲಿ ತನ್ನ 15ನೇ ಪಾದಯಾತ್ರೆಯ ಅಂಗವಾಗಿ `ಪಾದ ಪಂಚದಶಕಮ್’ ಕಾರ್ಯಕ್ರಮವನ್ನು ಇದೇ ಅಕ್ಟೋಬರ್ 23 ಮತ್ತು 24 ರಂದು ನಗರದ ಪುರಭವನದಲ್ಲಿ ಆಯೋಜಿಸಲಾಗಿದೆ.
ದಿನಾಂಕ 23 ರಂದು  ಸಂಜೆ ಬೆಂಗಳೂರಿನ ಅಭಿನೇತ್ರಿ ಶ್ರೀಮತಿ ಸೀತಾ ಕೋಟೆಯವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಾಹಿತಿ, ವಿಮರ್ಶಕ ಶ್ರೀ ಈಶ್ವರಯ್ಯ ಅಧ್ಯಕ್ಷತೆಯಲ್ಲಿ ಡಾ| ಚಿನ್ನಪ್ಪ ಗೌಡ, ಕುಲಸಚಿವ ಮಂ. ವಿಶ್ವವಿದ್ಯಾನಿಲಯ ಧರ್ಮದರ್ಶಿ ಹರಿಕೃಷ್ಣ ಪುನರೂರು, ಉದಯವಾಣಿಯ ಶ್ರೀ ಆನಂದ್, ಬೆಂಗಳೂರಿನ ಒಡಿಸ್ಸಿ ನೃತ್ಯ ಕಲಾವಿದ ಶ್ರೀ ಉದಯಕುಮಾರ್ ಶೆಟ್ಟಿ, ಶ್ರೀ ಉಳ್ಳಾಲ ಮೋಹನಕುಮಾರ್, ವಿದುಷಿ ಶ್ರೀಮತಿ ಕಮಲ ಭಟ್ ಭಾಗವಹಿಸಲಿರುವರು. ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಜರಗಲಿರುವುದು. ಎಂದು ಭರತಾಂಜಲಿ ಸಂಚಾಲಕರಾದ ಆರ್.ಡಿ ಶಾಸ್ತ್ರೀ ಇಂದು ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಅಕ್ಟೋಬರ್ 24ರಂದು ಸಂಜೆ 4.30 ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀಮದ್ ಜಗದ್ಗುರು ಶಂಕರಾಚಾರ್ಯ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿ, ಆಶೀರ್ವಚನ ಹಾಗೂ ಭರತಾಮೃತಂ ಸಂಚಿಕೆಯನ್ನು ಲೋಕಾರ್ಪಣೆ ಮಾಡಲಿರುವರು.
ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕರಾದ ಶ್ರೀ ಜಯರಾಮ ಭಟ್ ರವರು ಅಧ್ಯಕ್ಷತೆವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಗುರುಗಳಾದ ಮಾಸ್ಟರ್ ವಿಠಲ್, ಗುರು ಉಳ್ಳಾಲ್ ಮೋಹನ್ ಕುಮಾರ್, ಗುರು ಶ್ರೀಮತಿ ಕಮಲ ಭಟ್ ರವರನ್ನು ಗೌರವಿಸಲಾಗುವುದು.ಸಂಜೆ 6.15 ರಿಂದ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ಜರಗಲಿರುವುದು.
ಪತ್ರಿಕಾಗೋಷ್ಟಿಯಲ್ಲಿ ಭರತಾಂಜಲಿಯ ನಿರ್ದೇಶಕರಾದ  ಶ್ರೀಧರ್ ಹೊಳ್ಳ, ಶ್ರೀಮತಿ ಪ್ರತಿಮಾ ಶ್ರೀಧರ್, ಟ್ರಸ್ಟಿ ಶ್ರೀಮತಿ ವೀಣಾ ಶಾಸ್ತ್ರಿ, ಧರ್ಮದರ್ಶಿ ಹರಿಕೃಷ್ಣ ಪುನರೂರು ಮೊದಲಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English